Belagavi

ಸರ್ಕಾರದ ವಿಶೇಷ ಪ್ಯಾಕೇಜ್‌ನಲ್ಲಿ ಸಣ್ಣ ಕೈಗಾರಿಕೆ ಪ್ರಿಂಟಿಂಗ್ ಪ್ರೆಸ್ ಮಾಲಕರಿಗೆ ಅನ್ಯಾಯ


ಬೆಳಗಾವಿ : ಸಣ್ಣ ಕೈಗಾರಿಕೆಯಾದ ಪ್ರಿಂಟಿಂಗ್ ಪ್ರೆಸ್ ಉದ್ಯಮ ಕೋವಿಡ್ ಎರಡನೇ ಅಲೆ ಪರಿಣಾಮ ಮಾಲೀಕರು ಸೇರಿ ಸಾವಿರಾರು ಮಂದಿ ನೌಕರರು ಬೀದಿಗೆ ಬೀಳುವ ಪರಿಸ್ಥಿತಿಯಾಗಿದೆ ಎಂದು ವೀರಶೈವ ಲಿಂಗಾಯತ ಯುವ ವೇದಿಕೆಯ ಪ್ರಧಾನ ಜಿಲ್ಲಾ ಕಾರ್ಯದರ್ಶಿ ಈರಣ್ಣಾ ಹುಲ್ಲೂರ ಆಗ್ರಹಿಸಿದ್ದಾರೆ.

ಸರ್ಕಾರದ ವಿಶೇಷ ಪ್ಯಾಕೇಜ್‌ನಲ್ಲಿ ಪ್ರಿಂಟಿಂಗ್ ಪ್ರೆಸ್ ನ ಮಾಲಕರು ಮತ್ತು ನೌಕರರನ್ನು ಪರಿಗಣಿಸದೇ ಅನ್ಯಾಯ ಮಾಡಿದೆ ಎಂದು ಈಗಾಗಲೇ ರಾಜ್ಯ ಮುದ್ರಣಾಲಯಗಳ ಮಾಲಕರ ಸಂಘ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಸುಮಾರು 4500 ಪ್ರಿಂಟಿಂಗ್ ಪ್ರಸ್ ಗಳಿದ್ದು 12000 ನೌಕರರ ಬದುಕನ್ನು ಸಾಗಿಸುತ್ತಿವೆ. ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಉದ್ಯಮ ಮುಂದುವರಿಸುವುದು ದೊಡ್ಡ ಸವಾಲಾಗಿದೆ.

ಅಲ್ಲದೆ ನಿರ್ವಹಣೆ, ಬ್ಯಾಂಕುಗಳ ಸಾಲ, ನೌಕರರ ಸಂಬಳ ಇನ್ನಿತರ ಸಂಬಂಧಿಸಿದ ವೆಚ್ಚಗಳಿಂದ ತೀವ್ರ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇನ್ನು ಮುಂದೆ ಉದ್ಯಮ ನಡೆಸಲು ಸಾಧ್ಯವಿಲ್ಲದ ಸ್ಥಿತಿಗೆ ತಲುಪಿದ್ದಾರೆ.

ಆದ್ದರಿಂದ ಕೂಡಲೆ ಸರ್ಕಾರ ಮಾಲಕರ ಸಂಕಷ್ಟಕ್ಕೆ ಸೂಕ್ತವಾಗಿ ಸ್ಪಂದನೆ ನೀಡಿ ಸಾಲದ ಬಡ್ಡಿಯನ್ನು 6 ತಿಂಗಳ ವರೆಗೆ ಮನ್ನಾ ಮಾಡುವುದರ ಜೊತೆಗೆ ಸಾಲದ ಕಂತನ್ನು 6 ತಿಂಗಳು ಮುಂದೂಡಬೇಕು, ಸಾವಿರಾರು ನೌಕರರು ಕೆಲಸವಿಲ್ಲದೇ ಅತಂತ್ರರಾಗಿದ್ದು, ಅವರನ್ನು ಕಾರ್ಮಿಕರಂತೆ ಪರಿಗಣಿಸಿ ಸರ್ಕಾರ ಆರ್ಥಿಕ ಸಹಾಯಧನ ಮಾಡಬೇಕು ಎಂದು ಆಗ್ರಹಿಸಿದ್ದಾರೆ.


Leave a Reply