Belagavi

ಸತೀಶ ಶುಗರ್ಸ್ ಮತ್ತು ಸತೀಶ ಜಾರಕಿಹೊಳಿ ಪೌಂಡೇಶನ್ ವತಿಯಿಂದ ಮಾಸ್ಕ್, ಸ್ಯಾನಿಟೈಸರ್  ವಿತರಣೆ


ಸವದತ್ತಿ : ಕಾಂಗ್ರೆಸ್ ಮುಖಂಡ ವಿಶ್ವಾಸ್ ವೈದ್ಯ ಅವರು ಶುಕ್ರವಾರ ತಾಲೂಕಿನ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ತಾಲೂಕಿನ ಕೊರೊನಾ ವಾರಿಯಸ್೯ಗಳಿಗೆ ಸತೀಶ ಶುಗರ್ಸ್ ಮತ್ತು ಸತೀಶ ಜಾರಕಿಹೊಳಿ ಪೌಂಡೇಶನ್ ವತಿಯಿಂದ ಮಾಸ್ಕ್, ಸ್ಯಾನಿಟೈಸರ್ ವಿತರಣೆ ಮಾಡಿದರು.

ನಂತರ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಸ್ಥಿತಿ ಗತಿ ಪರಿಶೀಲಿಸಿದರು, ಕೋವಿಡ್ ಪಾಸಿಟಿವ್ ಪ್ರಕರಣಗಳ ಬಗ್ಗೆ ಮಾಹಿತಿ ಪಡೆದರು.

ಮತ್ತು ಆಸ್ಪತ್ರೆಯಲ್ಲಿ ಅಗತ್ಯವಿರುವ ಆಕ್ಸಿಜನ್ ಗ್ಯಾಸ್ ಸಿಲಿಂಡರ್, ಕೋವಿಡ್ ಸೋಂಕಿತರ ದಾಖಲಾತಿ ಮಾಹಿತಿ, ಪಡೆಯುವುದರ ಜೊತೆಗೆ ರೋಗಿಗಳ ಕುಟುಂಬಸ್ಥರ ಅಹವಾಲನ್ನು ಆಲಿಸಿದರು, ಆಸ್ಪತ್ರೆ ಹಾಗೂ ರೋಗಿಗಳ ಕುರಿತು ವೈದ್ಯರೊಂದಿಗೆ ಚರ್ಚಿಸಿ ಮಾಹಿತಿ ಕಲೆಹಾಕಿದರು ರೋಗಿಗಳಿಗೆ ಆತ್ಮಸ್ಥೈರ್ಯದ ಜೊತೆಗೆ ಧೈರ್ಯ ತುಂಬುವ ಕೆಲಸ ಮಾಡಿದರು.

ಈ ಸಂದರ್ಭದಲ್ಲಿ ವಿಶ್ವಾಸ ವೈದ್ಯ, ಮಲ್ಲು ಜಕಾತಿ, ಬಸವರಾಜ ಹಂಪಣ್ಣವರ, ಸಂತೋಷ ಗಾಜಿ, ಹೈಯಾತ ಕೇರೂರ, ಹಕಿಪ್ ಯಂಡ್ರಾವಿ, ಡಾ: ಮಲ್ಲಗೌಡ, ಡಾ: ಕವಿತಾ, ಡಾ : ಕಾಡರಕೊಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)


Leave a Reply