Belagavi

ಕೋವಿಡ್ -19 ಕುರಿತು ಮಾಹಿತಿ ಹಾಗೂ ಆರ್ ಎ ಟಿ – 22 ತಪಾಸನೆ ಕಾರ್ಯಕ್ರಮ


ಹಳ್ಳೂರ 28: ಕೊರೋನಾ ಪ್ರಕರಣಗಳು ಹಳ್ಳಿಗಳಲ್ಲಿ ಹೆಚ್ಚಾಗುತ್ತಿರುವದರಿಂದ ಜಿಲ್ಲಾಡಳಿತ ಗ್ರಾಮೀಣ ಪ್ರದೇಶಗಳಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೋಳ್ಳಬೇಕು. ಗುಂಪು ಗುಂಪಾಗಿ ಹಳ್ಳಿಕಟ್ಟೆಗಳಲ್ಲಿ ಕುಳಿತು ಹರಟೆ ಹೊಡೆಯುತ್ತಿರುವದನ್ನು ನಿಲ್ಲಿಸಿ ಜಾಗೃತರಾಗಿರಿ ನಿಮ್ಮ ಜೀವವನ್ನು ಸುರಕ್ಷಿತವಾಗಿಟ್ಟುಕೊಳ್ಳಿ ಎಂದು ಡಿ ಕೆ ಪತ್ತಾರ ಆರೋಗ್ಯ ನಿರೀಕ್ಷನಾಧಿಕಾರಿ ಹೇಳಿದರು.

ಅವರು ಶುಕ್ರವಾರ ದಂದು ಹಳ್ಳೂರ ಗ್ರಾಮದ ಶ್ರೀ ಹನುಮಾನ ದೇವಸ್ಥಾನದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡ ಕೋವಿಡ್ -19 ಕುರಿತು ಮಾಹಿತಿ ಹಾಗೂ ಆರ್ ಎ ಟಿ – 22 ತಪಾಸನೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಆರ್ ಎ ಟಿ ಉಚಿತ ಕ್ಯಾಂಪ್ ಇಡಲು ತೀರ್ಮಾಣಿಸಿ ಆಶಾ ಅಂಗನವಾಡಿ ಕಾರ್ಯಕರ್ತೆಯರಿಗೆ ಮುಂಚೆನೇ ಮಾಹಿತಿ ನೀಡಿ ಗ್ರಾಮದ ಜನರಿಗೆಲ್ಲ ತಿಳಿ ಹೇಳಿ ಕೊರೋನಾ ತಪಾಸನೆ ಮಾಡಿಸಿಕೊಳ್ಳಲು ಬರಬೇಕು ಅಂಥ ಮನೆ ಮನೆಗೆ ಹೇಳಿದ್ದಾರೆ. ಅದಕ್ಕಾಗಿ ಸಾರ್ವಜನಿಕರು ಸದುಪಯೋಗ ಮಾಡಿಕೊಳ್ಳಿರಿ.ಕೊರೋನಾ ಅಂಥ ಭಯಪಡಬೇಡಿ ಧೈರ್ಯದಿಂದ ಇರಲು ಗ್ರಾಮಸ್ತರಿಗೆ ಸಲಹೆ ನೀಡಿದರು. ಸಮಾಜ ಸೇವಕ ಹಾಗೂ ಪತ್ರಕರ್ತ ಮುರಿಗೆಪ್ಪಾ ಮಾಲಗಾರ ಕೋವಿಡ್ ತಪಾಸನೆ ಮಾಡಿಕೊಂಡರು. ಕೋವಿಡ್ ತಪಾಸನೆ ಮಾಡಿಕೊಂಡ ತಕ್ಷಣವೆ ಪಾಸಿಟಿವ್ ಅಥವಾ ನೆಗಿಟಿವ್ ವರದಿ ಯನ್ನು ನೀಡಿದರು. ಗ್ರಾಮದಲ್ಲಿ ಒಟ್ಟು 45 ಜನರಿಗೆ ಕೊರೋನಾ ತಪಾಸನೆ ಮಾಡಿದ್ದು ಎಲ್ಲವೂ ನೆಗೆಟಿವ್ ವರದಿ ಬಂದಿದ್ದು. ಈ ಸಮಯದಲ್ಲಿ ಎಮ್ ಎಸ್ ಜೋಗಿ ತಾಂತ್ರಿಕ ತಜ್ಞರು. ಪಿ ಆರ್ ನಡಬಟ್ಟಿ. ಸಂಜು ಅಗ್ನೇಪ್ಪಗೋಳ. ಎಚ್ ವಾಯ್ ತಾಳಿಕೋಟಿ. ಮಲ್ಲಪ್ಪ ಹೊಸಟ್ಟಿ.ಪೊಲೀಸ್ ಎಮ್ ಎಸ್ ದೊಡ್ಡನ್ನವರ. ಪ್ರಕಾಶ ಮೊರೆ.ರಾಜು ಅಂಗಡಿ. ರಮೇಶ ಸವದಿ. ವಿದ್ಯಾ ರಡರಟ್ಟಿ.ವತ್ಸಲಾ ಹಿರೇಮಠ.ಸುಜಾತಾ ಕೂಲಿಗೋಡ.ಅನಿತಾ ಮೊರೆ ಸೇರಿದಂತೆ ಆಶಾ, ಅಂಗನವಾಡಿಕಾರ್ಯಕರ್ತರು ಹಾಗೂ , ಆರೋಗ್ಯ ಇಲಾಖೆಯ ಸಿಬ್ಬಂದಿಗಳಿದ್ದರು.


Leave a Reply