karanataka

ವಿಶ್ವ ತಂಬಾಕು ಮುಕ್ತ ದಿನ ತಂಬಾಕು ಸೇವನೆ ನಿಲ್ಲಿಸೋಣ


ತಂಬಾಕು ಸೇವನೆ ನಿಲ್ಲಿಸೋಣ ಆರೋಗ್ಯವಂತರಾಗಿ ಜೀವನ ನಡೆಸೋಣ

ವಿಶ್ವ ತಂಬಾಕು ಮುಕ್ತ ದಿನದ ಪ್ರಯುಕ್ತ ತಂಬಾಕು ಸೇವನೆ ಸಮಾಜದ ಯುವ ಪೀಳಿಗೆಯಲ್ಲಿ ಹೆಚ್ಚಾಗುತ್ತಿದ್ದು ತಂಬಾಕು ವ್ಯಸನದಲ್ಲಿ ಜಗಿಯುವುದು ಮತ್ತು ದೂಮಪಾನ ಮಾಡುವುದು ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ಪ್ರತಿ 06 ಸೆಕೆಂಡಿಗೆ ಒಬ್ಬ ವ್ಯಕ್ತಿ ಸಾವಿಗೀಡಾಗುತ್ತಿದ್ದಾನೆ. ಭಾರತದಲ್ಲಿ ಪ್ರತಿ ದಿನ ತಂಬಾಕು ಉಪಯೋಗಿಸುತ್ತಿರುವವರು 12 ಕೋಟಿಗೂ ಹೆಚ್ಚು ಜನರಿಗೆ ಆದರೆ ತಾವು ಬೀಡಿ ಸಿಗರೇಟ್ ಸೇದದಿದ್ದರೂ ಯಾರೋ ದೂಮಪಾನ ಮಾಡುವ ಚಟಕ್ಕೆ ಪ್ರಾಣ ತೆರುತ್ತಿದ್ದಾರೆ. ತನ್ನ ಆರೋಗ್ಯವನ್ನಷ್ಟೇ ಅಲ್ಲದೇ ಅಕ್ಕಪಕ್ಕದವರ, ಪ್ರೀತಿ ಪಾತ್ರರ, ಆರೋಗ್ಯವನ್ನು ಹಾಳು ಮಾಡುತ್ತಿರುವ ದೂಮಪಾನದ ದಾಸರು ಇಂದಾದರೂ ದುಶ್ಚಟವನ್ನು ಬಿಡಲು ಪಣ ತೊಡಬೇಕಾಗಿದೆ. ಆದರೆ ವಿದ್ಯಾವಂತರೇ ತಂಬಾಕು ಸೇವನೆ ಬಲಿಯಾಗುತ್ತಿರುವುದು ವಿಷಾಧನೀಯ. ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿಗಳಾದ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಯುವಜನಾಂಗ ವ್ಯಸನಗಳಿಗೆ ಬಲಿಯಾಗುವುದನ್ನು ತಡೆಗಟ್ಟುವ ಸಲುವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸ್ವಾಸ್ಥ್ಯಯ ಸಂಕಲ್ಪ ಕಾರ್ಯಕ್ರಮಗಳ ಮೂಲಕ ವ್ಯಸನಮುಕ್ತ ಜೀವನದ ಬಗ್ಗೆ ಅರಿವನ್ನು ಮೂಡಿಸಲಾಗುತ್ತಿದೆ. ಇದರೊಂದಿಗೆ ದುಶ್ಚಟ ಮುಕ್ತ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಆರೋಗ್ಯಕ್ಕೆ ಹಾನಿಕಾರ. ಮಧು, ಸಿಗರೇಟ್, ಗುಟ್ಕ ಮುಂತಾದ ತಂಬಾಕುಯುಕ್ತ ಪದಾರ್ಥಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಅರಿವು ಮೂಡಿಸಲಾಗುತ್ತಿದೆ. ತಂಬಾಕು ಸೇವೆನೆ ಚೇಳಿನ ವಿಷಕ್ಕಿಂತಲೂ ಹೆಚ್ಚು ವಿಷಕಾರಿ ಎಂದು ತಿಳಿದೂ ಜನರು ಇದಕ್ಕೆ ದಾಸರಾಗಿರುವುದು ನಿಜಕ್ಕೂ ವಿಷಾಧನೀಯ, ತಂಬಾಕು ಸೇವನೆಯಿಂದ ಆರೋಗ್ಯ ಮತ್ತು ಕುಟುಂಬದ ಆರ್ಥಿಕ ಪರಿಸ್ಥಿತಿಯ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ನಾನು ಸುಡುತ್ತಿರುವ ಸಿಗರೇಟ್ ನನ್ನನ್ನು ಮತ್ತು ನನ್ನ ಸುತ್ತಲ ಪ್ರಪಂಚವನ್ನು ಒಟ್ಟಾಗಿ ಸುಡುತ್ತದೆ ಎಂಬ ಅರಿವು ದೂಮಪಾನಿಗೆ ಇರಬೇಕು. ಇಂದು ಕೊರೋನ ಎಂಬ ಮಹಾಮಾರಿಗೆ ವಿಶ್ವವೇ ತಲ್ಲಣಿಸಿದ ಸಂದರ್ಭದಲ್ಲಿ ಕೊರೋನಾ ವೈರಸ್ ಹರಡಲು ತಂಬಾಕು ಕೂಡ ಮುಖ್ಯ ಕಾರಣವಾಗಿದೆ. ಗುಟ್ಕ ಜಗಿದು ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದರಿಂದ ಹಾಗೂ ಆರೋಗ್ಯದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದರಿಂದ ಕೊರೋನಾ ಮನುಷ್ಯನ ಶರೀರಕ್ಕೆ ಸುಲಭವಾಗಿ ಪ್ರವೇಶಿಸಲು ಸಾಧ್ಯವಾಗುತ್ತದೆ. ಇದನ್ನು ಅರಿತುಕೊಂಡು ಗುಟ್ಕ ಜಗಿದು ವಾಹನ ಚಲಿಸುತ್ತಿರುವ ಸಂದರ್ಭದಲ್ಲಿ ಉಗುಳಬಾರದು. ತಂಬಾಕು ಸೇವೆನೆಗೆ ಕಡಿವಾಣ ಹಾಕುವುದರಿಂದ ಸ್ವಾಸ್ಥ್ಯ ಸಮಾಜವನ್ನು ನಿರ್ಮಿಸುವುದು ನಮ್ಮೆಲ್ಲರ ಹೊಣೆ
ತಮ್ಮ ಜೀವನದ ಪ್ರತಿದಿನ ತಂಬಾಕು ವಿರೋಧಿ ದಿನವಾಗಬೇಕು. ತಾನು, ಗುಟ್ಕ ದೂಮಾಪಾನ ಸೇವನೆ ಮಾಡದೇ ಇರಬಹುದು, ಆದರೆ ತಮ್ಮ ಕುಟುಂಬವನ್ನು ತಂಬಾಕು ಸೇವನೆಯಿಂದ ಮುಕ್ತಗೊಳಿಸುವುದು ನಮ್ಮೆಲ್ಲರ ಹೊಣೆ. ಸರಕಾರ ತಂಬಾಕು ಸೇವನೆಯ ದುಷ್ಪಾರಿಣಾಮಗಳ ಬಗ್ಗೆ ಹಲವು ಕಾರ್ಯಕ್ರಮಗಳನ್ನು ರೂಪಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಆದರೆ ಇಂದು ಯುವಪೀಳಿಗೆ, ಉದ್ಯೋಗಸ್ಥರೆ ತಂಬಾಕು ಸೇವನೆಗೆ ಬಲಿಯಾಗುತ್ತಿದ್ದಾರೆ. ಇದರಲ್ಲೂ ಇಳಿವಯಸ್ಸಿನ ಮಕ್ಕಳು ತಂಬಾಕು ದಾಸರಾಗುತ್ತೀರುವುದು ವಿಪರ್ಯಾಸ.
*ಮದ್ಯ ಹಾಗೂ ಧೂಮಪಾನ ಮತ್ತು ಚಲನಚಿತ್ರ*
ನಮ್ಮ ಇತ್ತೀಚಿನ ದಿನಗಳಲ್ಲಿ ಮದ್ಯಪಾನ ಹಾಗೂ ಧೂಮಪಾನ ಎರಡು ಯುವ ಜನಾಂಗಗಳಿಗೆ ದಾರಿ ತಪ್ಪಿಸಲು ಸುಲಭ ಮಾರ್ಗಗಳಾಗಿವೆ.ಕಾರಣ ಇಷ್ಟೇ ಯುವ ಜನಾಂಗ ವೀಕ್ಷಿಸುವ ಇತ್ತೀಚಿನ ಚಲನಚಿತ್ರಗಳು.
ನಮ್ಮ ನಾಯಕ ನಟರು,ಖಳನಾಯಕರು ತಮ್ಮ ಪಾತ್ರಕ್ಕೆ ಜೀವ ತುಂಬುವ ಉದ್ದೇಶದಿಂದ ಮದ್ಯಪಾನ ಮತ್ತು ಧೂಮಪಾನ ಮಾಡುತ್ತಾರೆ.ಆದರೆ ಇವರನ್ನೇ ಆದರ್ಶವಾಗಿಟ್ಟುಕೊಂಡ ಯುವ ಜನತೆ ಅವರ ಮೇಲಿನ ಪ್ರೀತಿಯಿಂದ ಹಾಗೆ ಧೂಮಪಾನ ಮತ್ತು ಮದ್ಯಪಾನ ಮಾಡುವ ಕಾರ್ಯದಲ್ಲಿ ತೊಡಗುತ್ತಾರೆ.ಇದಕ್ಕಾರು ಹೊಣೆ.ಜೊತೆಗೆ ಅತ್ಯಾಚಾರ ಮಾಡುವುದನ್ನು ಹೇಳಿಕೊಡುತ್ತವೆ.ಅಪಹರಿಸಿಕೊಂಡು ಹೋಗುವ ಬಗೆಯನ್ನು ಕಲಿಸುತ್ತವೆ.
ಪ್ರಸ್ತುತ ದಿನಮಾನಗಳಲ್ಲಿ ಯುವ ಜನತೆ ಅತಿಯಾಗಿ ನೋಡುವ ಬಹುತೇಕ ಚಲನಚಿತ್ರಗಳು ಹಾದಿ ತಪ್ಪಿಸುತ್ತಿವೆ.ಮಾನವೀಯ ಮೌಲ್ಯಗಳನ್ನು ಸಾರಬೇಕಿದ್ದ ಚಲನಚಿತ್ರಗಳು,ಆ ಮೌಲ್ಯಗಳನ್ನು ಗಾಳಿಗೆ ತೂರಿ ನಿಲ್ಲುತ್ತಿವೆ.ವಿಭಿನ್ನ ಶೈಲಿಯಲ್ಲಿ ಧೂಮಪಾನ ಮತ್ತು ಮದ್ಯಪಾನ ಮಾಡುವುದು ಮಾನವೀಯ ಮೌಲ್ಯಗಳೇ?ಒಂದಷ್ಟು ಯೋಚಿಸಿ.
*ಮಾದಕ ದ್ರವ್ಯಗಳು*
ಚಿಕ್ಕ ಮಕ್ಕಳಿಂದ ಹಿಡಿದು ಯುವಕರ ವರೆಗೆ ಎಲ್ಲರೂ ಮಾದಕ ವ್ಯಸನಿಗಳಾಗಿದ್ದಾರೆ.ವಿವಿಧ ಭಂಗಿಗಳಲ್ಲಿ ಕುಣಿಯುತ್ತ ಅವುಗಳನ್ನು ಬಳಸುವ ರೀತಿಯನ್ನು ಕುಳಿತು ನೋಡಿ ತಾವು ನಿಜ ಜೀವನದಲ್ಲಿ ಅದೇ ರೀತಿಯಾಗಿ ಮಾರ್ಪಡುತ್ತಾರೆ.ಇದಕ್ಕಾಗಿ ಬೇಕಾಗುವ ಹಣಕ್ಕಾಗಿ ಮನೆಯಲ್ಲಿ ಕಳ್ಳತನ,ಕೊಲೆ,ಅತ್ಯಾಚಾರಗಳಂತಹ ಸಮಾಜ ಘಾತುಕ ಕೆಲಸಗಳು ನಡೆಯುತ್ತಿವೆ. ಇದಕ್ಕೆ ಯಾರು ಹೊಣೆ?
*ಅತಿಯಾದ ವೈಭವೀಕರಣ*
ಮೊದಲೆ ಹೇಳಿದಂತೆ ಅತಿಯಾದ ವೈಭವೀಕರಣ ಮಾಡುತ್ತಿವೆ.ಕಾರಣ ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಸಂಪಾದಿಸಿ ಬಹು ಬೇಗ ಶ್ರೀಮಂತಿಕೆಯನ್ನು ಅನುಭವಿಸಬೇಕೆಂದು ತಮ್ಮ ಸ್ವಾರ್ಥ ಸಾಧನೆಗೆ ಇವುಗಳನ್ನು ಅವಲಂಬಿಸುತ್ತಿದ್ದಾರೆ.
ತಂಬಾಕು ದೇಹದ ವಿವಿಧ ಭಾಗಗಳಾದ ಬಾಯಿ, ಗಂಟಲು, ಶ್ವಾಸ ಕೋಶ,. ಜಠರ, ಮೂತ್ರ ಪಿಂಡ, ಬ್ಲಾಡರ್, ಕ್ಯಾನ್ಸರಿಗೆ ಕಾರಣವಾಗುವುದು
ಭಾರತದಲ್ಲಿ ತಂಬಾಕಿನಿಂದಾದ ಬಾಯಿ ಕ್ಯಾನ್ಸರನ ಪ್ರಕರಣಗಳು ಜಗತ್ತಿನಲ್ಲಿಯೇ ಅತಿ ಹೆಚ್ಚು, ಭಾರತದಲ್ಲಿ ಪುರುಷರ ಮತ್ತು ಮಹಿಳೆಯರ ತಂಬಾಕಿನಿಂದ ಬರುವ ಕ್ಯಾನ್ಸರಿನ ಪ್ರಮಾಣ ಕ್ರಮವಾಗಿ 56.4% ಮತ್ತು 44.9% ಆಗಿದೆ, ಧೂಮಪಾನವು ಶ್ವಾಸಕೋಶದ ಕ್ಯಾನ್ಸರ್‌ ಮತ್ತು ಇತರ ರೋಗಗಳಿಗೆ 90% ನಷ್ಟು ಕಾರಣವಾಗಿದೆ
* ತಂಬಾಕು ಹೃದಯ ಮತ್ತು ರಕ್ತನಾಳಗಳ ರೋಗಕ್ಕೆ ದಾರಿ ಮಾಡುವುದು. ಹೃದಯಾಘಾತ, ಎದೆ ನೋವು ಹಠಾತ್ ಹೃದಯಘಾತದಿಂದ ಸಾವು, ಲಕ್ವ , ಹೊರ ರಕ್ತನಾಳಗಳ ವ್ಯಾಧಿ, ಕಾಲಿನ ಗ್ಯಾಂಗ್ರಿನ್ .
ಭಾರತದಲ್ಲಿನ ದೀರ್ಘಕಾಲೀನ ಶ್ವಾಸಕೋಶ ಕಾಯಿಲೆಗಳಿಗೆ ಶೇ. ೮೨ರಷ್ಟು ತಂಬಾಕು, ಧೂಮಪಾನ ಕಾರಣವಾಗುತ್ತವೆ.
ಶ್ವಾಸಕೋಶದ ಕ್ಷಯ ಬರಲು ತಂಬಾಕು ಪರೋಕ್ಷವಾಗಿ ಕಾರಣವಾಗುತ್ತದೆ. ಧೂಮಪಾನ ಮಾಡದವರಿಗಿಂತ ಸತತವಾಗಿ ಧೂಮಪಾನ ಮಾಡುವವರಲ್ಲಿ ಕ್ಷಯ ಉಂಟಾಗುವ ಸಾಧ್ಯತೆ ಮೂರುಪಟ್ಟು ಹೆಚ್ಚಿರುತ್ತದೆ. ಸಿಗರೇಟು, ಬೀಡಿ. ಸೇದುವಿಕೆ ಹೆಚ್ಚಾದಷ್ಟೂ ಕ್ಷಯದ ಸಾಧ್ಯತೆ ಹೆಚ್ಚುತ್ತದೆ.
ಧೂಮಪಾನ/ ತಂಬಾಕು ಸೇವನೆಯಿಂದ ಹಠಾತ್ತಾಗಿ ರಕ್ತದೊತ್ತಡ ಹೆಚ್ಚುತ್ತದೆ ಮತ್ತು ಹೃದಯಕ್ಕೆ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ.
ಅಲ್ಲದೆ ಪಾದಗಳಿಗೆ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ ಮತ್ತು ಅದು ಕಾಲುಗಳಲ್ಲಿ ಗ್ಯಾಂಗ್ರೀನ್‌ಗೆ ಕಾರಣವಾಗಬಹುದು.
ದೇಹದ ಎಲ್ಲ ರಕ್ತನಾಳಗಳಲ್ಲಿರುವ ರಕ್ಷಣಾ ಪೊರೆಗೆ ಧಕ್ಕೆ ತರುತ್ತದೆ.
ಧೂಮಪಾನದಿಂದ ಮಕ್ಕಳು ಮತ್ತು ಕುಟುಂಬದ ಇತರ ಸದಸ್ಯರಿಗೆ ಆರೋಗ್ಯ ತೊಂದರೆಗಳು ಬರುತ್ತವೆ .(ನೀವು ಬಿಡುವ ಹೊಗೆಯನ್ನು ಉಸಿರಾಡಿದ್ದರಿಂದ). ಧೂಮಪಾನ (ಪ್ರತಿದಿನ ಎರಡು ಪ್ಯಾಕ್‌) ಮಾಡುವ ವ್ಯಕ್ತಿಯೊಂದಿಗೆ ಜೀವಿಸುವ ವ್ಯಕ್ತಿಯೂ ಪರೋಕ್ಷವಾಗಿ (ದಿನಕ್ಕೆ ಮೂರು ಸಿಗರೇಟ್‌) ಧೂಮಪಾನ ಮಾಡಿದಂತಾಗುತ್ತದೆ. ಪರೋಕ್ಷ ಧೂಮಪಾನ ಮಾಡಿದವರ ಮೂತ್ರ ಪರೀಕ್ಷೆ ನಡೆಸಿದಾಗ ಅವರ ಮೂತ್ರದಲ್ಲಿನ ನಿಕೊಟಿನ್‌ ಪ್ರಮಾಣವು ಮೂರು ಸಿಗರೇಟ್‌ ಸೇದಿದವರ ಪ್ರಮಾಣದಷ್ಟಿತ್ತು.
ಧೂಮಪಾನ/ ತಂಬಾಕು ಸೇವನೆಯು ಮಧುಮೇಹದ ಸಾಧ್ಯತೆಯನ್ನೂ ಹೆಚ್ಚಿಸುವುದು ಕಂಡುಬಂದಿದೆ.
ರಕ್ತದಲ್ಲಿರುವ ಒಳ್ಳೆಯ ಕೊಬ್ಬಿನಂಶವನ್ನು ತಂಬಾಕು ಕಡಿಮೆ ಮಾಡುತ್ತದೆ.
ಧೂಮಪಾನ/ ತಂಬಾಕು ಸೇವಿಸುವವರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಪಾರ್ಶ್ವವಾಯು ಹೆಚ್ಚು
* ಪ್ರತಿ 8 ಸೆಕೆಂಡಿಗೆ ತಂಬಾಕಿಗೆ ಸಂಬಂಧಿಸಿದ ‘ಒಂದು’ ಸಾವು ಆಗುವುದು
ಭಾರತದಲ್ಲಿ ಪ್ರತಿವರ್ಷ ೮- ೯ ಲಕ್ಷ ಮಂದಿ ತಂಬಾಂಕಿನ ಬಳಕೆಯಿಂದ ಉಂಟಾದ ಕಾಯಿಲೆಗಳಿಂದ ಸಾವಿಗೀಡಾಗುತ್ತಾರೆ. ಒಬ್ಬ ಹದಿಹರೆಯದ ಹುಡುಗ ತಂಬಾಕನ್ನು ತ್ಯಜಿಸುವುದರಿಂದ ಆತನಿಗೆ ೨೦ ವರ್ಷ ಆಯಸ್ಸು ಹೆಚ್ಚುತ್ತದೆ. ತಂಬಾಕು ಸೇವನೆ ಮಾಡುವವರಲ್ಲಿ ಅರ್ಧದಷ್ಟು ಹದಿಹರೆಯದವರು ಅದರಿಂದ ಸಾವಿಗೀಡಾಗುತ್ತಾರೆ (ಅದರಲ್ಲೂ ಕಾಲು ಭಾಗದಷ್ಟು ಜನರು ಮಧ್ಯವಯಸ್ಸಿನಲ್ಲಿ, ಇನ್ನೊಂದು ಕಾಲು ಭಾಗದಷ್ಟು ಜನರು ಇಳಿವಯಸ್ಸಿನಲ್ಲಿ ಸಾವಿಗೀಡಾಗುತ್ತಾರೆ.) ಬೇರೆ ದೇಶಗಳಿಗೆ ಹೋಲಿಸಿದಾಗ ಪ್ರತಿವರ್ಷವೂ ತಂಬಾಕು ಸೇವನೆಯಿಂದ ಸಾವಿಗೆ ಈಡಾಗುವವರ ಸಂಖ್ಯೆ ಭಾರತದಲ್ಲಿ ತೀವ್ರ ಗತಿಯಲ್ಲಿ ಏರುತ್ತಿದೆ.
*ಧೂಮಪಾನ/ ತಂಬಾಕು ಪುರುಷರ ಮತ್ತು ಮಹಿಳೆಯರ ಮೇಲೆ ಪರಿಣಾಮ ಬೀರುವವು.*
ತಂಬಾಕು ಸೇವನೆ ಪುರುಷರಲ್ಲಿ ನಂಪುಸತ್ವಕ್ಕೆ ಕಾರಣವಾಗುತ್ತದೆ. ತಂಬಾಕು ಧೂಮಪಾನ ಸೇವನೆಯಿಂದ ಮಹಿಳೆಯರಲ್ಲಿ ಈಸ್ಟ್ರೊಜನ್‌ ಪ್ರಮಾಣ ಕಡಿಮೆಯಾಗುತ್ತದೆ. ಮೆನೊಪಾಸ್‌ (ಋತುಬಂಧ) ಬೇಗ ಬರುತ್ತದೆ ಧೂಮಪಾನ / ತಂಬಾಕು ಸೇವನೆಯು ದೈಹಿಕ ಚಟುವಟಿಕೆಯ ಸಾಮರ್ಥ್ಯವನ್ನು ಮತ್ತು ದೈಹಿಕ ಸಹನಾ ಶಕ್ತಿಯನ್ನು ಕಡಿಮೆ ಮಾಡುವುದು.
ಮಹಿಳೆಯರು ಧೂಮಪಾನ ಮಾಡಿ ಮತ್ತು ಸಂತಾನ ನಿಯಂತ್ರಣ ಮಾತ್ರೆ ತೆಗೆದುಕೊಂಡರೆ ಲಕ್ವ ಹೊಡೆಯುವ ಗಂಡಾಂತರ ಹೆಚ್ಚು. ಮಗುವನ್ನು ಕಳೆದುಕೊಳ್ಳುವ ಅಥವ ಕಡಿಮೆ ತೂಕದ ಮಗುವಿಗೆ ಜನ್ಮ ನೀಡುವ ಅಥವಾ ಬೆಳವಣಿಗೆಯ ಸಮಸ್ಯೆ ಇರುವ ಅಥವಾ ಹಠಾತ್ತನೆ ಮಗು ಸಾಯುವ ಸಂಭವ ಹೆಚ್ಚು.
*ತಂಬಾಕು ತ್ಯಜಿಸುವುದರ ಲಾಭಗಳು*
*ತಂಬಾಕು ತ್ಯಜಿಸುವುದರ ದೈಹಿಕ ಲಾಭಗಳು:*
ಕ್ಯಾನ್ಸರ್ ಮತ್ತು ಹೃದಯರೋಗದ ಗಂಡಾಂತರ ಕಡಿಮೆಯಾಗುವುದು.
ಹೃದಯದ ಮೆಲಿನ ಒತ್ತಡವು ಕಡಿಮೆಯಾಗುವುದು..
ನಿಮ್ಮ ಪ್ರೀತಿ ಪಾತ್ರರು ನಿನ್ನ ಧೂಮಪಾನದಿಂದ ಅಪಾಯಕ್ಕೆ ಒಳಗಾಗುವುದಿಲ್ಲ.
ನಿಮ್ಮ ಧೂಮಪಾನಿಗಳ ಕೆಮ್ಮು ( ನಿಲ್ಲದ ಕೆಮ್ಮು ಮತ್ತು ಕಫ) ಮಾಯವಾಗಬಹುದು.
ನಿಮ್ಮ ಹಲ್ಲುಗಳು ಬಿಳಿಯಾಗಿ ಮತ್ತು ಶುಚಿಯಾಗಿ ಇರುವವು
*ತಂಬಾಕು ತ್ಯಜಿಸುವುದರ ಸಾಮಾಜಿಕ ಲಾಭಗಳು:*
ಸಿಗರೇಟು ನಿಮ್ಮ ಮೇಲಿನ ನಿಯಂತ್ರಣ ಕಳೆದು ಕೊಳ್ಳುತ್ತದೆ
ನಿಮ್ಮ ಸ್ವಂತಿಕೆ ಮತ್ತು ಆತ್ಮ ವಿಶ್ವಾಸ ಹೆಚ್ಚುವುದು
ನಿಮ್ಮ ಮಕ್ಕಳಿಗೆ ಈಗಲೂ ಮತ್ತು ಮುಂದೆಯೂ ಆರೋಗ್ಯವಂತ ತಂದೆಯಾಗುವಿರಿ
ನಿಮಗೆ ಬೇರೆ ವಿಷಯಗಳಿಗೆ ಖರ್ಚು ಮಾಡಲು ಹೆಚ್ಚು ಹಣ ಉಳಿಯುತ್ತದೆ
ಬಿಡುವುದು ಯಾವಾಗಲೂ ತಡವಲ್ಲ
ಮಧ್ಯವಯಸ್ಕನಾದಾಗ ಧೂಮಪಾನ/ತಂಬಾಕು ಕ್ಯಾನ್ಸರ್ ಮತ್ತು ಇತರೆ ಗಂಭೀರ ರೋಗ ಬರುವುದು ತರುವಾಯ ಅದರಿಂದ ಸಾವು ಬರುವುದು, ಚಿಕ್ಕವಯಸ್ಸಿನಲ್ಲಿಯೇ ಬಿಟ್ಟರೆ ಇನ್ನೂ ಅಧಿಕ ಲಾಭವಾಗುವುದು.
ಸಿಗರೇಟು, ಪಾನು ಮತ್ತು ಜರದಾ ಸುಲಭವಾಗಿ ದೊರೆಯುವಂತೆ ಇರಬಾರದು. Don’t let cigarettes, paan and jarda be easily available. ಸಿಗರೇಟು, ಪಾನು ಮತ್ತು ಜರದಾ ಗಳನ್ನು ಸುಲಭವಾಗಿ ಸಿಗದ ಜಾಗದಲ್ಲಿ ಇಡು. ಉದಾ. ನೀನು ಹೆಚ್ಚು ಹೋಗದ ಇನ್ನೊಂದು ಕೋಣೆಯಲ್ಲಿ, ಬೀಗ ಹಾಕಿದ ಅಲಮಾರಾದಲ್ಲಿ ಸಿಗರೇಟು, ಪಾನು ಮತ್ತು ಜರದಾಗಳನ್ನು ಸೇವಿಸಲು ಇರುವ ಪ್ರಚೋದನೆ ಗುರುತಿಸು. ಅದರ ಗೊಡವೆಬೇಡ. ಸಹವಾಸ ಬಿಡು. ಸಿಗರೇಟು, ಪಾನು ಮತ್ತು ಜರದಾ ಬಳಸುವಾಗ ಅಲ್ಲಿ ಇರಬೇಡ.
ಚುಯಿಂಗ ಗಮ್, ಸಿಹಿ, ಪೆಪ್ಪರ ಮೆಂಟ ಬಾಯಲ್ಲಿರಲಿ ಆಳವಾಗಿ ಉಸಿರು ಎಳೆದು ಕೊಳ್ಳುವುದನ್ನು ಅಭ್ಯಾಸ ಮಾಡಿಕೋ ನಿನಗೆ ಅತಿಯಾಗಿ ಬೇಕು ಎನಿಸದಾಗ ಕುಳಿತೋ , ನಿಂತೋ ದೀರ್ಘವಾಗಿ ಉಸಿರು ಎಳೆದುಕೊ. ಒಂದು ಲೋಟ ನೀರು ಕುಡಿ. ವ್ಯಾಯಮವೂ ಸಹಾಯಕವಾಗುವುದು. ನಿನಗೆ ತಂಬಾಕು ಬೇಕೇ ಬೇಕು ಎನಿಸಿದಾಗ ನಿನ್ನ ಮಕ್ಕಳ ಬಗ್ಗೆ ಯೋಚಿಸು. ಇದರಿಂದ ನಿನಗೆ ಏನಾದರು ಆದರೆ ಅವರ ಗತಿ ಏನು ಎಂಬುದರ ಬಗ್ಗೆ ಚಿಂತಿಸು. ನಿಲ್ಲಿಸುವ ದಿನ ನಿರ್ಧರಿಸು. ಮಾನಸಿಕ ಬೆಂಬಲಕ್ಕೆ ಒಬ್ಬರಿರಲಿ, ಸಿಗರೇಟು/ ಪಾನು/ ಜರದಾ ಇಲ್ಲದ ಮೊದಲ ದಿನಕ್ಕೆ ಯೋಜನೆ ಹಾಕಿಕೊ. ಧೂಮಪಾನ/ತಂಬಾಕಿನ ಚಟ ತಡೆಯಲಾಗದೆ ಇದ್ದರೆ 4 D ಗಳನ್ನು ಉಪಯೋಗಿಸು
ಬೇರೆ ಏನಾದರೂ ಮಾಡು, ಧೂಮಪಾನ/ ತಂಬಾಕು ಸೇವನೆಗೆ ತಡಮಾಡು, ದೀರ್ಘ ಉಸಿರಾಟ, ನೀರು ಕುಡಿ ಇತ್ಯಾತ್ಮಕ ಸ್ವಗತ ಇರಲಿ. ನಿನಗೆ ನೀನೆ ಉಡುಗೊರೆ ಬಹುಮಾನ ನೀಡಿಕೊ, ಪ್ರತಿದಿನ ವಿಶ್ರಾಂತಿಯ ತಂತ್ರಗಳ ಅಭ್ಯಾಸ ಮಾಡು (ಯೋಗ, ನಡೆಯುವುದು, ಧ್ಯಾನ ನೃತ್ಯ ಸಂಗೀತ ಇತ್ಯಾದಿ.). ಕೆಫಿನ್ ಮತ್ತು ಮದ್ಯಕ್ಕೆ ಮಿತಿ ಇರಲಿ..
ಚುರುಕಾಗಿರು ಆರೋಗ್ಯಪೂರ್ಣ ಆಹಾರ ಸೇವಿಸು.
ಪ್ರತಿ ಸೆಕಂಡಿಗೆ ಒಂದು ತಂಬಾಕಿಗೆಸಂಬಂಧಿಸಿದ ಮರಣ ವಾಗುವುದು.
ದೂಮಪಾನ / ತಂಬಾಕು ಪುರುಷ ಮತ್ತು ಮಹಿಳೆಯರ ಮೇಲೆ ದುಷ್ಪರಿಣಾಮ ಬೀರುವುದು.
ಹೀಗೆ ತಂಬಾಕು ಸೇವನೆ ಮಾಡುವ ಯಾವುದೇ ವ್ಯಕ್ತಿ ತನ್ನತನವನ್ನು ಕಳೆದುಕೊಂಡು ತಾನು ಕೆಡುವುದಲ್ಲದೆ,ಸಮಾಜದ ಸ್ವಾಸ್ಥ್ಯವನ್ನು ಕೂಡ ಹಾಳು ಮಾಡುತ್ತಾನೆ. ಇದರ ಬದಲಾಗಿ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡು ಹೋದರೆ ತಾನು ಆರೋಗ್ಯವಂತನಾಗಿರುವುದರ ಜೊತೆಗೆ ಇತರರ ಆರೋಗ್ಯವನ್ನು ಕಾಪಾಡುವ ಜವಾಬ್ದಾರಿ ಹೊರಬಹುದು.ನಾವು ನಮ್ಮ ಆಲೋಚನೆಗಳು ಮತ್ತು ಕಾರ್ಯ ವೈಖರಿಯನ್ನು ಬದಲಾಯಿಸಿಕೊಳ್ಳಬೇಕು.
*ಶ್ರೀ ಇಂಗಳಗಿ ದಾವಲಮಲೀಕ*
ಶಿಕ್ಷಕ ಸಾಹಿತಿಗಳು ಹತ್ತಿಮತ್ತೂರು


Leave a Reply