Koppal

ಕುಷ್ಟಗಿ ಬಿಜೆಪಿ ಮಂಡಲದ ವತಿಯಿಂದ ರಕ್ತದಾನ ಶಿಬಿರ


ಕುಷ್ಟಗಿ:ಮೇ 30 ಕ್ಕೆ ಭಾರತ ದೇಶದ ಪ್ರಧಾನಿ ನರೇಂದ್ರ ಮೋದಿ ರವರ ನೇತೃತ್ವದ ಕೇಂದ್ರ ಸರ್ಕಾರವು 7 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಕುಷ್ಟಗಿ ನಗರದಲ್ಲಿ ಬಿಜೆಪಿ ಕುಷ್ಟಗಿ ಮಂಡಲದ ವತಿಯಿಂದ ರಕ್ತದಾನ ಶಿಬಿರ ಏರ್ಪಡಿಸಿತ್ತು ಈ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ರಕ್ತದಾನಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಈ ಸಂದರ್ಭದಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದರಾದ ಸನ್ಮಾನ್ಯ ಸಂಗಣ್ಣಕರಡಿ, ಕೊಪ್ಪಳ ಜಿಲ್ಲಾ ಬಿಜೆಪಿ ಅಧ್ಯಕ್ಷರು ಮಾಜಿ ಶಾಸಕರಾದ ಶ್ರೀ ದೊಡ್ಡನಗೌಡ ಎಚ್.ಪಾಟೀಲ್, ಹಿರೇಮನ್ನಾಪುರ ಜಿಲ್ಲಾ ಪಂಚಾಯತ್ ಮತ ಕ್ಷೇತ್ರದ ಸದಸ್ಯರಾದ ಕೆ.ಮಹೇಶ ಕುಷ್ಟಗಿ ಪುರಸಭೆ ಅಧ್ಯಕ್ಷರಾದ ಜಿ.ಕೆ.ಹಿರೇಮಠ ಬಿಜೆಪಿ ಕುಷ್ಟಗಿ ಮಂಡಲದ ಪ್ರಧಾನ ಕಾರ್ಯದರ್ಶಿಯಾದ ಚಂದ್ರಕಾಂತ ವಡಿಗೇರಿ ಯುವ ಮೋರ್ಚಾ ತಾಲೂಕ ಅಧ್ಯಕ್ಷರಾದ ಉಮೇಶಗೌಡ_ಕಟ್ಟಿಗೌಡರ ಮತ್ತು ಇನ್ನೂ ಅನೇಕ ಮುಖಂಡರು ಪದಾಧಿಕಾರಿಗಳು ಕಾರ್ಯಕರ್ತರು ಪಾಲ್ಗೊಂಡಿದ್ದರು..

ಆರ್ ಶರಣಪ್ಪ ಗುಮಗೇರಾ.


Leave a Reply