Koppal

ಅಕ್ರಮ ಮರಳುಗಾರಿಕೆ ಎಚ್ಚರಿಕೆ ನೀಡಿದ ತಹಸೀಲ್ದಾರ್ ನಾಗರಾಜ


ಗಂಗಾವತಿ ತಾಲ್ಲೂಕು ಚಿಕ್ಕಜಂತಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹಳೆ ನಾಗರಹಳ್ಳಿ ಯಲ್ಲಿ ಬೆಳ್ಳಂ ಬೆಳಿಗ್ಗೆ ಹಾಗೂ ರಾತ್ರೋರಾತ್ರಿ ಎಗ್ಗಿಲ್ಲದೆ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ

ಈ ಹಿಂದೆ ಅಧಿಕಾರಿಗಳು ಭೇಟಿಕೊಟ್ಟು ಹೊಲದ ಮಾಲೀಕರಿಗೆ ಹಾಗೂ ಮರಳು ದಂಧೆಕೋರರಿಗೆ ಎಚ್ಚರಿಕೆ ನೀಡಿದ್ದರು
ತಾಲ್ಲೂಕು ದಂಡಾಧಿಕಾರಿ ಹಾಗೂ ಪೋಲೀಸ್ ಅಧಿಕಾರಿಗೆ ಹೆದರದೆ ಮರಳು ದಂಧೆಕೋರರು ಮುಂದುವರೆಸಿದ್ದಾರೆ

ಜಮೀನು ಪಟ್ಟಾದಾರರು ಅಕ್ರಮ ಮರಳು ಕಳ್ಳತನ ಮಾಡುವವರ ಜತೆಗೆ ಶಾಮೀಲಾಗಿ ತಮ್ಮ ಪಟ್ಟಾ ಜಮೀನಿನಲ್ಲಿ ತಾತ್ಕಾಲಿಕ ರಸ್ತೆಯನ್ನು ನಿರ್ಮಿಸಿ ತುಂಗಾಭದ್ರ ನದಿಯ ದಂಡೆಯಲ್ಲಿರುವ ಮರಳನ್ನು ಅಕ್ರಮವಾಗಿ ಕಳ್ಳತನದಿಂದ ಸಾಗಿಸಲು ಸಹಕರಿಸಿದ್ದರ ಕುರಿತು ತಹಸೀಲ್ದಾರರು ಎಚ್ಚರಿಕೆ ನೀಡಿದ್ದಾರೆ .

ಸರಕಾರಕ್ಕೆ ಬರಬೇಕಾದ ರಾಜಧನ ನಷ್ಟ ಉಂಟುಮಾಡಿರುವುದಲ್ಲದೆ  ಕಳ್ಳತನದಿಂದ ಅಕ್ರಮ ಮರಳು ಸಾಗಿಸಲು ವಾಹನಗಳಿಗೆ ಅಕ್ರಮ ರಸ್ತೆ ನೀಡುವ ಮೂಲಕ ಮರಳು ಕಳ್ಳತನದಲ್ಲಿ ಜಮೀನಿನ ಪಟ್ಟಾದಾರರು ನೇರವಾಗಿ ಭಾಗಿಯಾಗಿದ್ದಾರೆ ಎಂದು ದೂರಲಾಗಿದೆ .

ಗ೦ಗಾವತಿ ತಾಲ್ಲೂಕುದಂಡಾಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಮುಂದೆ ಏನು ಕ್ರಮ ತಗೆದುಕೊಳ್ಳುತ್ತಾರೆ ಕಾದು ನೋಡಬೇಕಾಗಿದೆ.

(ವರದಿ ಹನುಮೇಶ್ ಭಟಾರಿ)


Leave a Reply