Belagavi

ಮುಗಳಿಹಾಳದಲ್ಲಿ ರೈತರಿಗೆ ಬಿತ್ತನೆಯ ಬೀಜ ವಿತರಣೆ


 

ಯರಗಟ್ಟಿ: ಯರಗಟ್ಟಿ ತಾಲ್ಲೂಕಿನ ಮುಗಳಿಹಾಳ ಗ್ರಾಮದಲ್ಲಿ ನಡೆದ ಕೃಷಿ ಇಲಾಖೆ ಅನುಮತಿ ಪಡೆದು ಪಿಕೆಪಿಎಸ್ ಮುಗಳಿಹಾಳ ವತಿಯಿಂದ ರೈತರಿಗೆ ಬೀಜವನ್ನು ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಗ್ರಾಮದ ಪ್ರತಿಯೋಬ್ಬ ರೈತರು ಯರಗಟ್ಟಿಗೆ ಹೋಗಿ ಬೀಜವನ್ನು ತರಲು ಬಸ್ಸಿನ ಸೌಕರ್ಯ ಇಲ್ಲವಾಗಿದ್ದು ಅದಕ್ಕಾಗಿ ಪಿಕೆಪಿಎಸ್ ಸರ್ವ ಸದಸ್ಯರು ಕೃಷಿ ಇಲಾಖೆಯ ಅನುಮತಿ ಪಡೆದು ಕೊಂಡು ಕೊಡ್ಲಿವಾಡ್, ಗೊವಿನಕೊಪ್ಪ, ಅಕ್ಕಿಸಾಗರ, ಮುಗಳಿಹಾಳ, ದಾಸನಾಳ, ಮೇಳ್ಳಿಕೆರಿ, ರೈತರಿಗೆ ಪಿಕೆಪಿಎಸ್ ಅದ್ಯಕ್ಷರು,ಉಪಾಧ್ಯಕ್ಷರು ,ಸದಸ್ಯರು ಎಲ್ಲರು ಸೇರಿ ಅನುಕೂಲ ಮಾಡಿಕೊಟ್ಟಿದ್ದಾರೆ.ಅದಕ್ಕಾಗಿ ಈ ಭಾಗದ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ರೈತರಲ್ಲಿ ವಿನಂತಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಅಶೋಕ ಪಟ್ಟಣಶೆಟ್ಟಿ, ಬಸವರಾಜ ಮಾಯನ್ನವರ, ನಾಗಪ್ಪ ಪುಂಜೀ, ರಾಮನಗೌಡ ಗಂಗರಡ್ಡಿ, ಮತ್ತು ಪಿಕೆಪಿಎಸ್ ಸದಸ್ಯರು ಬೀಮಸೆಪ್ಪ ಕಲಕುಟ್ರಿ, ಚನ್ನಪ್ಪ ದಳವಾಯಿ, ಭಿಮಶೆಪ್ಪ ದಳವಾಯಿ, ಮಾಜಿ ಅಧ್ಯಕ್ಷ ಬಸವರಾಜ ಮಾಯನ್ನೀ,ಮತ್ತು ಕೃಷಿ ಇಲಾಖೆಯ ಅನುವುಗಾರ ಬಸವರಾಜ ದಳವಾಯಿ, ಬಸವರಾಜ ಮಾಕಾನಿ, ಮತ್ತು ಗ್ರಾಮದ ಪ್ರಮುಖರು , ರೈತರು ಉಪಸ್ಥಿತರಿದ್ದರು.
(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)


Leave a Reply