Belagavi

ಅಂದು ಬಂದಿದ್ದು ನಿಜವಾಗಲೂ…… ಹುಡುಗರೇನಾ?


ನಾನು ಬಿ.ಎ. ಸೆಕೆಂಡ್ ಇಯರ್ ಓದತ್ತಾ ಇದ್ದೆ. ನಮ್ದು ಮಹಿಳೆಯರದೇ ಕಾಲೇಜು. ಕೇಳಬೇಕಾ…. ಎಲ್ಲದರಲ್ಲೂ ನಮ್ಮದೇ ಮೇಲುಗೈ, ಅತ್ತ-ಇತ್ತ ಎತ್ತೆತ್ತ ನೋಡಿದರೂ ಕೂಡ ಎಲ್ಲ ಹೆಂಗಳೆಯರೇ ಮುದ್ದು ಮನಸ್ಸಿನ ಕೋಮಲ ಹೃದಯ ವುಳ್ಳ ಮಹಿಳಾಮಣಿಗಳು ತುಂಬಿರುವ ಕಾಲೇಜಲ್ಲಿ ಶಿಕ್ಷಕ-ಶಿಕ್ಷಕಿಯರದ್ದೇ ದರ್ಬಾರು. ಪ್ರತಿದಿನ ಎಂದಿನಂತೆ ಆಟ-ಪಾಠ ಆಟೋಟ ಅಂಥ ದಿನಗಳು ಕಳೆದಿದ್ದೆ ಗೊತ್ತಾಗುತ್ತಿರಲಿಲ್ಲ.

ಇದರ ಮಧ್ಯೆ ಒಂದು ದಿನ ನಮ್ಮ ಗುರುಗಳು ಎನ್‌.ಎಸ್‌‌.ಎಸ್. ಕ್ಯಾಂಪ್ ಇದೆ ಎಲ್ಲರೂ ಕಡ್ಡಾಯವಾಗಿ ಬರಲೇಬೇಕು ಅಂತ ಕಡಕ್ ಆಗಿ ವಾರ್ನಿಂಗ್ ಕೊಟ್ಟು ಹೋದರು ನಮ್ಮೆಲ್ಲ ಗೆಳತಿಯರು ನಾನು ಬರಲ್ಲ ನಾನು ಬರಲ್ಲ ಅಂತ ತಮ್ಮತಮ್ಮಲ್ಲಿ ಮಾತಾಡಿಕೊಂಡು ಮನೆಗೆ ಹೋದರು ನಾನು ಕೂಡ ಸುಮ್ಮನೆ ಏನು ಮಾತನಾಡದೆ ಮನೆಗೆ ಹೋದೆ.

ಮಾರ್ನೇ ದಿನ ಅದೇ ಕ್ಲಾಸ್, ಅದೇ ಟೀಚರ್, ಅದೇ ಗೆಳತಿಯರು, ಅದೇ ಫ್ರೆಂಡ್ಸ್, ಅದೇ ಕ್ಯಾರಿಯರ್ ಡಬ್ಬಗಳು , ಕ್ಲಾಸಲ್ಲಿ ಏನೇನೋ ಗೀಚತಾ ಇದ್ದ ಅದೇ ಹಳೆಯ ಪುಸ್ತಕಗಳು…… ಎಂದಿನಂತೆ ಕ್ಲಾಸಲ್ಲಿ ಇರಬೇಕಾದರೆ ನಮ್ಮ ಟೀಚರ್ ಬಂದು ಇನ್ನೆರಡು ದಿನ ಬಾಕಿ ಇದೆ ಎನ್ಎಸ್ಎಸ್ ಕ್ಯಾಂಪ್ ಗೆ ಹೋಗಲು ಯಾರು ಬರುತ್ತೀರಿ ಸ್ವಯಂ ಪ್ರೇರಿತವಾಗಿ ತಮ್ಮ ತಮ್ಮ ಹೆಸರನ್ನು ಕೊಡಬೇಕು ಎಂದಾಗ ಒಬ್ಬರನೊಬ್ಬರು ಮುಖ – ಮುಖ ನೋಡಿಕೊಂಡು ನಾನು ಬರಲ್ಲ ಸರ್, ನಾನು ಬರಲ್ಲ ಸರ್, ಕೊನೆಗೆ ನಾನೂ ಬರಲ್ಲ ಸರ್ ಅಂತ ಅಂದೆ‌. ಅಂದು ಮಂದಹಾಸದಿಂದ ನಗೆಯನ್ನು ಬೀರುತ್ತಾ ಸುಮ್ಮನೆ ಏನು ಮಾತನಾಡದೆ ಯಾವುದೇ ಪಾಠವನ್ನು ಮಾಡದೆ ಹೋಗುತ್ತಿರಬೇಕಾದರೆ ನೀವೆಲ್ಲರೂ ಬರುತ್ತಿರಿ ಎನ್‌.ಎಸ್.ಎಸ್ . ಕ್ಯಾಂಪಗೆ ಆ ದೈಯ೯ ನನಗಿದೆ ಅಂತಾ ಹೇಳಿ ಹೊರಟುಹೋದರು ನಮ್ಮ ಟೀಚರ್. ಸಾಯಂಕಾಲ ಪಾಟೋಪಚಾರ ಎಲ್ಲವನ್ನು ಮುಗಿಸಿಕೊಂಡು ಮನೆಗೆ ಹೋದೆವು.

ರಾತ್ರಿಯೆಲ್ಲಾ ನಮ್ಮ ಗೆಳತಿಯರ ಜೊತೆ ಫೋನಿನಲ್ಲಿ ಮಾತಾಡಿದ್ದೆ ಮಾತಾಡಿದ್ದು ಎಲ್ಲರೂ ಚೆನ್ನಾಗಿ ಎಂಜಾಯ್ ಮಾಡೋಣ ಅಂತ ಹೇಳಿದರೂ ಕೂಡ ಯಾರೊಬ್ಬರೂ ಒಪ್ಪಲೇ ಇಲ್ಲ. ಮತ್ತೆ ಕಾಲೇಜಿಗೆ ಹೋದಾಗ ಅಲ್ಲಿ ನಮ್ಮ ಟೀಚರ್ ಬಂದು ನಮ್ಮನ್ನೆಲ್ಲಾ ಕೇಳುವುದಕ್ಕಿಂತ ಮುಂಚೆಯೇ ಲಿಸ್ಟಲ್ಲಿ ನಮ್ಮೆಲ್ಲರ ಹೆಸರು ಇದ್ದವು.

ಏನು ಮರುಮಾತನಾಡದೆ ನಾವೆಲ್ಲ ಗೆಳತಿಯರು ಕೂಡಿ ಎನ್ಎಸ್ಎಸ್ ಕ್ಯಾಂಪ್ ಗೆ ಬಂದೆವು.

ಅಂದು ಎನ್.ಎಸ್.ಎಸ್. ಕ್ಯಾಂಪ್ ಮೊದಲನೇ ದಿನ ನಮ್ಮ ಜೂನಿಯರ್ಸ, ನಮ್ ಸೀನಿಯರ್ಸ್ ನಾವೆಲ್ಲರೂ ಕೂಡಿಕೊಂಡು ವರ್ತಿ ಶ್ರೀ ಸಿದ್ಧ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಏಳು ದಿನಗಳ ಕಾಲ ನಮ್ಮ ನಮ್ಮ ಲಗೇಜ್ ಸಮೇತ ಉಳಿಯುವ ತಯಾರಿಯಲ್ಲಿ ಬಂದಿದ್ದೆವು. ಮೊದಲನೇ ದಿನ ನಾವೆಲ್ಲರೂ ನಮ್ಮ ನಮ್ಮ ಲಗೇಜು ಗಳ ಗೊಂದಲದಲ್ಲಿಯೇ ಇದ್ದೆವು, ಅಂದು ಟೀಮ್ ವರ್ಕ್, ಗ್ರೂಪ್ ಡಿವೈಡ್ ಮಾಡುವುದರ ಜೊತೆಗೆ ಜೊತೆಗೆ ಒಂದಷ್ಟು ಜವಾಬ್ದಾರಿಯನ್ನು ನನಗೆ ಕೊಟ್ಟರು.

ಆ ದಿನ ಕಳೆದು ಎರಡನೆಯ ದಿನ ಊರಲ್ಲಿ ಘೋಷಣೆಗಳನ್ನು ಮಾಡುತ್ತಾ ಬೀದಿ ಬೀದಿಗಳ ಜೊತೆಗೆ ಮಾತನಾಡುತ್ತಾ ಅಲ್ಲಿಯ ಜನರ ಜೊತೆ ಬೆರೆಯುತ್ತ ಎಲ್ಲರೂ ಮಂದಹಾಸದಿ ನಗುವನ್ನು ಬೀರುತ್ತಾ ಆ ದಿನವನ್ನು ಹೇಗೋ ಮುಗಿಸಿದೆವು.

ಅಂದು ಮೂರನೆಯ ದಿನ ನಮ್ಮ ಜೀವನದಲ್ಲಿ ಯಾವತ್ತೂ ಮರೆಯಲಾಗದ ದಿನ ನಿಗೂಢವಾದ ದಿನ ನಿಗೂಢವಾದ
ರಹಸ್ಯದ ಬಗ್ಗೆ ನಮ್ಮ ಗೆಳತಿಯರನ್ನು ಈಗಲೂ ಕೇಳಿದರೆ ಎಲ್ಲರ ಮನಸಲ್ಲಿ ಇರೋದು ಒಂದೇ ಪ್ರಶ್ನೆ……. ಅಂದು ಎಂದಿನಂತೆ ಎಲ್ಲ ಕಾರ್ಯಕ್ರಮಗಳನ್ನು ಮುಗಿಸಿ ಅಡುಗೆಮನೆಯಿಂದ ಕಲ್ಯಾಣ ಮಂಟಪದ ಕಡೆಗೆ ಮಲಗಲು ನಾವೆಲ್ಲರೂ ಬರುತ್ತಿದ್ದೆವು ಆದರೆ ಅಡಿಗೆ ಕೋಣೆಯಲ್ಲಿ ಇದ್ದಿದ್ದು ಆರರಿಂದ-ಏಳು ಜನ ಹುಡುಗಿಯರು ಅವರು ಎಲ್ಲ ಪಾತ್ರೆಗಳನ್ನು ತೊಳೆದು ಇಡುತ್ತಿದ್ದರು ಇದ್ದಕ್ಕಿದ್ದಂತೆ ಎಲ್ಲರೂ ಕಿರುಚುತ್ತಾ ಹೊರಗಡೆ ಓಡಿಬಂದರು ನಾವೆಲ್ಲ ಉಳಿದ ಹುಡುಗಿಯರು ಹಾಗೂ ನಮ್ಮ ಟೀಚರು ಕೂಡ ಏನಾಯ್ತು ಏನಾಯ್ತು ಹುಡುಗಿಯರು ತುಂಬಾ ಭಯಭೀತರಾಗಿದ್ದರು ಮಾತನಾಡಲು ತುಂಬಾ ಹೆದರಿದ್ದರು ಅವರ ಕೈಕಾಲು ಮುಖ ಎಲ್ಲವೂ ನಡುಕ ಪ್ರಾರಂಭವಾಗಿತ್ತು. ಅವರಿಗೆ ಏನಾಯ್ತು ಅಂತ ಕೇಳುವುದಿರಲಿ, ಅವರನ್ನು ಸಮಾಧಾನ ಮಾಡುವುದೇ ಒಂದು ದೊಡ್ಡ ವಿಷಯವಾಗಿತ್ತು. ಅವರನ್ನು ಸಮಾಧಾನ ಮಾಡಿ ಸುಧಾರಿಸಿ ಕೇಳುವಷ್ಟರಲ್ಲಿ ಬೆಳಗಿನ ಜಾವ ಮೂರು ಗಂಟೆಯಾಗಿತ್ತು. ಅಂದು ಆ ಕ್ಯಾಂಪಿನಲ್ಲಿ ಇದ್ದ ಯಾವ ಹುಡುಗಿಯರು ನಿದ್ದೆ ಮಾಡಿರಲಿಲ್ಲ, ಮಾಡುತ್ತೇನೆ ಎಂದರೆ ನಿದ್ರಾದೇವತೆ ಕೂಡ ಬರಲಿಲ್ಲ. ಸುತ್ತಲೂ ಕಬ್ಬಿನ ಹೊಲ ದಿಂದ ಕೂಡಿದ ಆ ಕಲ್ಯಾಣ ಮಂಟಪ ಅರಮನೆಯಂತೆ ಶೃಂಗೇರಿ ಸುತ್ತಿತ್ತು ಹೊಸದಾಗಿ ಗೋಡೆಗಳಿಗೆ ಬರೆದ ಬಣ್ಣ ಬಸವೇಶ್ವರ ಅಕ್ಕಮಹಾದೇವಿ ಅಂತಹ ಮಹಾನ್ ವಚನಕಾರರ ಚಿತ್ರಗಳು ನವ ವಧುವರರಿಗೆ ಶೋಭೆ ತರುವ ಮಂಟಪ ಇನ್ನೂ ಭೋಜನ ವ್ಯವಸ್ಥೆಗೆ ಸುಂದರವಾದ ಅಡುಗೆ ಕೋಣೆ ಸಕಲ ಸೌಲಭ್ಯಗಳಿಂದ ತುಂಬಿರುವ ಕಲ್ಯಾಣ ಮಂಟಪ ಇಂದಿಗೂ ಸುತ್ತಮುತ್ತ ಹಳ್ಳಿಗೆ ತುಂಬಾ ಪ್ರಸಿದ್ಧವಾಗಿದೆ. ಇಂತಹ ಸುಂದರವಾದ ತಾಣದಲ್ಲಿ ಹುಡುಗಿಯರು ಹೇಳಿದ್ದು ಒಂದೇ ಮಾತು ಅಲ್ಲಿ ನಾವೆಲ್ಲರೂ ಪಾತ್ರೆಗಳನ್ನು ತೊಳೆಯುತ್ತಿರಬೇಕಾದರೆ, ಏನೋ ಸಪ್ಪಳ ಆದಂತೆ ಕೇಳಿಸಿತು ನಾವೆಲ್ಲರೂ ಹೊರಗಡೆ ಹೋಗಿ ನೋಡಿದಾಗ ನಮ್ಮಣ್ಣ ಹುಡುಗರು ಹೆದರಿಸಿದರು ಅವರ ಮುಖ ನಮಗೆ ಕತ್ತಲಲ್ಲಿ ಸ್ಪಷ್ಟವಾಗಿ ಕಾಣಲಿಲ್ಲ.

ಆದರೆ ಧ್ವನಿ ಮಾತ್ರ ಕೇಳಿಸಿತು ಅವರು ನಮ್ಮನ್ನು ಹೆದರಿಸಿದ್ದು ನಿಜ ಎಂದು ಹೇಳಿದಾಗ ನಮ್ಮ ಟೀಚರ್ ಹಾಗೂ ಧೈರ್ಯವಂತ ಹುಡುಗಿಯರು ಹೋಗಿ ನೋಡಿದಾಗ ಅಲ್ಲಿ ಏನೂ ಇರಲಿಲ್ಲ ಆದರೆ ಆ ವಿಷಯ, ದುಗುಡ – ದುಮ್ಮಾನ, ನಿಗೂಢತೆ ಎಲ್ಲವೂ ಮನಸಲ್ಲಿ ಇನ್ನೂ ಹಾಗೆ ಇದೆ ಆ ದಿನ ನಿಜವಾಗ್ಲೂ ಅಲ್ಲಿಗೆ ಬಂದಿದ್ದು ಹುಡುಗರೇನಾ, ಇಲ್ಲಾ ನಮ್ಮ ಭ್ರಮೇನಾ ಒಂದು ಗೊತ್ತಿಲ್ಲ. ಆದರೆ ನೆನಪು ಮಾತ್ರ ಶಾಶ್ವತ ಅಲ್ವಾ ನೆನಪಿನ ಜೊತೆ ಏಳು ದಿನಗಳು ಇನ್ನು ಮನಸಲ್ಲಿ ಹಾಗೆ ಇದೆ ಲವಲವಿಕೆ ಉತ್ಸಾಹ ಉಲ್ಲಾಸ ಸಾಂಸ್ಕೃತಿಕ ಕಾರ್ಯಕ್ರಮಗಳು ಆಟಗಳು ಎಲ್ಲವೂ ಮನಸಲ್ಲಿ ತುಂಬಾ ಸಂತೋಷದ ಛಾಯೆಯನ್ನ ಬೀರಿದೆ. ಆದರೆ ಆ ನಿಗೂಢತೆ ಮಾತ್ರ ನಮ್ಮೆಲ್ಲ ಗೆಳತಿಯರ ಮನದಲ್ಲಿ ನಿಗೂಢವಾಗಿಯೇ ಇದೆ.

ಲೇಖನ: ರಶ್ಮಿ ಕೊಡ್ಲಿವಾಡ ಪೊಲೀಸ್ ಇಲಾಖೆ
(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)


Leave a Reply