Belagavi

ಆಹಾರ ಪೊಟ್ಟಣ ಹಾಗೂ ನೀರಿನ ಬಾಟಲ್ ಗಳನ್ನು ವಿತರಿಸಿದ ಕಾಂಗ್ರೆಸ್ ಮುಖಂಡ ವಿಶ್ವಾಸ ವೈದ್ಯ 


ಮುನವಳ್ಳಿ : ಮುನವಳ್ಳಿ ನಗರದಲ್ಲಿ ಶನಿವಾರ ಕಾಂಗ್ರೆಸ್ ಮುಖಂಡ ವಿಶ್ವಾಸ ವೈದ್ಯ ಹಾಗೂ ಯುವ ಪಡೆ ಆಹಾರ ಪೊಟ್ಟಣ ಹಾಗೂ ನೀರಿನ ಬಾಟಲ್ ಗಳನ್ನು ವಿತರಿಸಿದರು.

ಕೋವಿಡ್-19 ಲಾಕ್ ಡೌನ್ ನಿಂದಾಗಿ ಎಲ್ಲರ ಬದುಕು ಬೀದಿಗೆ ಬಂದಂತಾಗಿದ್ದು ಒಂದು ಹೊತ್ತಿನ ಊಟಕ್ಕೂ ಯೋಚನೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇಂತಹ ಸಂದಿಗ್ಧ ಪರಸ್ಥಿತಿಯಲ್ಲಿ ನಗರದ ಆಸ್ಪತ್ರೆಯ ರೋಗಿಗಳಿಗೆ, ಬೀದಿಬದಿ ವ್ಯಾಪಾರಸ್ಥರಿಗೆ ಹಾಗೂ ಆಯ್ದ ಸ್ಥಳಗಳಿಗಲ್ಲಿ ಆಹಾರದ ಪೊಟ್ಟಣ ಮತ್ತು ನೀರಿನ ಬಾಟಲ್ ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಈ ಸಂದರ್ಭದಲ್ಲಿ ಪಟ್ಟಣದ ಪುರಸಭೆ ಸದಸ್ಯ ಮೀರಾಸಾಬ ವಟ್ನಾಳ, ಶಿಂಗಯ್ಯ ಹೀರೇಮಠ, ಡಾ. ರವಿ ಹನಸಿ, ಡಾ. ಬಸೀರ ಅಹಮ್ಮದ್ ಬೈರಕದಾರ,  ಪರುಶುರಾಮ ಗಂಟಿ, ಯರಗಟ್ಟಿ-ಮುನವಳ್ಳಿ ಯುತ್ ಬ್ಲಾಕ್‌ ಅಧ್ಯಕ್ಷರಾದ ಯಶ್ ಯಲಿಗಾರ, ಪ್ರವೀಣ ರಾಮಪ್ಪನವರ, ಪ್ರಸಾದ ವಿರಪಯ್ಯನವರಮಠ, ಪಂಚು ಬಾರಕೇರ, ಬಸು ಕಟಕೋಳ, ರಾಮಣ್ಣ ಕಟ್ಟೇಕಾರ, ಆನಂದ ಧಾರವಾಡ, ನಾಗನಗೌಡ ಮಲ್ಲಗೌಡರ, ಬಸು ಗೋಮಾಡಿ, ದಿಲಾವರ ಮುಗಟಖಾನ ಹಾಗೂ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಇದ್ದರು.

(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)


Leave a Reply