Belagavi

ಆಂಬುಲೆನ್ಸ್ ಸೇವೆ ಕಾರ್ಯಕ್ಕೆ  ಅಭಿನವ ಗವಿಸಿದ್ದೇಶ್ವರ ಸ್ವಾಮಿಯವರು ಗವಿಮಠದ ಆವರಣದಲ್ಲಿ ಚಾಲನೆ  


ಕೊಪ್ಪಳ:  ಕೋವಿಡ್‌ -19 ಮಹಾಮಾರಿಯಿಂದ ರಾಜ್ಯದ ಜನತೆ ಕಷ್ಟಪಡುತ್ತಿರುವ ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪನವರು  ಎಮ್ ವಾಯ್  ಸೇವೆ ತಂಡದ ಆಂಬುಲೆನ್ಸ್ ಸೇವೆ ಕಾರ್ಯಕ್ಕೆ ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮಿಯವರು ಅವರು ಬೆಳಗ್ಗೆ 11 ಶ್ರೀ ಗವಿಮಠದ ಆವರಣದಲ್ಲಿ ಚಾಲನೆ  ನೀಡಿದರು.

ಈ ಸಂಧರ್ಭದಲ್ಲಿ ಕೊಪ್ಪಳ ಸಂಸದ ಸಂಗಣ್ಣ ಕರಡಿ, ನಗರಾಭಿವೃದ್ಧಿ ಅಧ್ಯಕ್ಷರಾದ ಮಹಾಂತೇಶ ಪಾಟೀಲ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ನವೀನ ಗುಳಗಣ್ಣನವರು, ಗವಿಸಿದ್ದಪ್ಪ ಕರಡಿ , ಸಾಗರ ಮನವಳ್ಳಿ, ನಗರ ಘಟಕ ಅಧ್ಯಕ್ಷರಾದ ಸುನೀಲ್ ಹೇಸರೂರು, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾದ ವಾಣಿಶ್ರೀ ಮಠದ, ಗ್ರಾಮೀಣ ಘಟಕ ಅಧ್ಯಕ್ಷರಾದ ಪ್ರದೀಪ ಹಿಟ್ನಾಳ, ನಗರಘಟಕ ಮಹಿಳಾ ಮೋರ್ಚಾದ ನಾಗರತ್ನ ಪಾಟೀಲ್, ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಅರಕೇರಿ, ರವಿಚಂದ್ರನ ಮಾಲಿಪಾಟೀಲ್ ಹಾಗೂ ವಿವಿಧ ಮೋರ್ಚದ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.
(ವರದಿ ಈರಣ್ಣಾ ಹುಲ್ಲೂರ)


Leave a Reply