Belagavi

ಗೊಂದಲಿ ಸಮಾಜದ ಕಷ್ಟಕ್ಕೆ ನೆರವಾದ ಸರಳತೆಯ ನಾಯಕ ಕಾಡಾ ಅಧ್ಯಕ್ಷರು ಹಾಗೂ ಮಾಜಿ ಶಾಸಕರು ವಿ. ಆಯ್. ಪಾಟೀಲ


ಬೈಲಹೊಂಗಲ: ನಮಗೆ ಕಷ್ಟ ಇದೆ ಸಹಾಯ ಮಾಡಿ ಎಂದು ಬಾಯಿಬಿಟ್ಟು ಕೇಳಿದರು ಸಹ ಯಾಕೆ ಸಹಾಯ ಮಾಡಬೇಕೆಂದು ಬೇಜವಾಬ್ದಾರಿತನದ ಉತ್ತರ ನೀಡಿ ತಿರುಗಿ ನೋಡದ ಕೆಲವೊಂದು ಶಾಸಕರುಗಳ ಮಧ್ಯೆ ಕೇವಲ ಒಂದು ಫೋನ್ ಕರೆಗೆ ವಾಟ್ಸಪ್ ಮೆಸೇಜ್ ಗೆ ಓಗೋಟ್ಟು ಕೇವಲ 12 ಗಂಟೆಗಳಲ್ಲಿ ಸ್ಪಂದನೆ ನೀಡಿ ಅಗತ್ಯವಿರುವ ಆಹಾರ ಕಿಟ್ ಗಳನ್ನು ನೀಡುವ ಮೂಲಕ ನಿಮ್ಮ ಕಷ್ಟಕ್ಕೆ ಜೊತೆಯಾಗಿ ನಾನಿದ್ದೇನೆ ಎಂದು ಸ್ವತಹ ತಾವೇ ವಾಹನ ಚಲಾಯಿಸಿಕೊಂಡು ಹೋಗಿ ನಯಾನಗರದಲ್ಲಿರುವ ಗೊಂದಲಿ ಸಮಾಜದ ಜನರ ಕಷ್ಟಕ್ಕೆ ಜೊತೆಯಾದ ಅರವಳ್ಳಿ ಗೌಡರು

ಬೈಲಹೊಂಗಲ್ ವಿಧಾನಸಭಾ ಕ್ಷೇತ್ರದ ನಯಾನಗರ ಗ್ರಾಮದಲ್ಲಿ ಗೊಂದಲಿ ಸಮಾಜದ ಜನರು ಲಾಕ್ ಡೌನ್ ನಿಂದ ವ್ಯಾಪಾರ ಇಲ್ಲದೆ ಜೀವನ ನಡೆಸುವುದು ಕಷ್ಟವಾಗುತ್ತಿತ್ತು ಪ್ರಸ್ತುತ ಇರುವ ಶಾಸಕರು ಅಧಿಕಾರಿಗಳು ಯಾರು ನಮ್ಮ ನೆರವಿಗೆ ಬಂದಿಲ್ಲ.

ಮಾಜಿ ಶಾಸಕರು ವಿ. ಆಯ್. ಪಾಟೀಲ ಅವರು ನಮಗೆ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ ಇನ್ನಾದರೂ ಈ ಭಾಗದ ಶಾಸಕರು ನಮ್ಮ ಕಡೆ ಗಮನ ಕೊಡಬೇಕು ಎಂದು ಮಾಧ್ಯಮದ ಮೂಲಕ ಗೊಂದಲಿ ಸಮಾಜದ ಜನರು ಕೇಳಿಕೊಂಡರು
ಈ ಸಂದರ್ಭದಲ್ಲಿ ಮಾತನಾಡಿದ ವಿ. ಆಯ್. ಪಾಟೀಲ ಅವರು ನಯಾನಗರ ಗ್ರಾಮದ ಗೊಂದಲಿ ಸಮಾಜವು ಲಾಕ್ ಡೌನ್ ನಿಂದಾಗಿ ವ್ಯಾಪಾರ ಇಲ್ಲದೆ ಕಷ್ಟಪಡುತ್ತಿರುವ ವಿಚಾರವನ್ನು ನಮ್ಮ ಪಕ್ಷದ ಕಾರ್ಯಕರ್ತರು ನನ್ನ ಗಮನಕ್ಕೆ ತಂದಾಗ ನಾವು ಇಲ್ಲಿರುವ ಜನರಿಗೆ ಆಹಾರ ಕಿಟ್ ಗಳನ್ನು ನೀಡಲು ಮುಂದಾಗಿದ್ದು ಇವತ್ತಿನ ಶುಭದಿನ ನಮ್ಮ ಸರ್ಕಾರ ಎರಡನೇ ಅವಧಿಯ ಎರಡನೇ ವರ್ಷವನ್ನು ಯಶಸ್ವಿಯಾಗಿ ಪೂರೈಸಿದ ಇದರ ಪ್ರಯುಕ್ತ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅದರಲ್ಲಿ ಈ ಗ್ರಾಮದ ಜನರಿಗೆ ಆಹಾರಗಳನ್ನು ನೀಡುವ ಕೆಲಸವನ್ನು ಮಾಡಿದ್ದೇವೆ.

ಜನರು ಅನಾವಶ್ಯಕವಾಗಿ ಹೊರಗೆ ಓಡಾಡದೆ ಸರ್ಕಾರದ ನಿಯಮಗಳನ್ನು ಪಾಲಿಸಿ ಕೊರೋನಾ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಎಲ್ಲಾ ಕಾರ್ಯಕರ್ತರು ಹಾಗೂ ನಯಾನಗರ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
(ವರದಿ ಈರಣ್ಣಾ ಹುಲ್ಲೂರ)


Leave a Reply