Belagavi

ಕೇಂದ್ರ ಸರ್ಕಾರದ ಯಶಸ್ವಿ ಎರಡನೇ ಅವಧಿಯ ಎರಡನೇ ವರ್ಷದ ಸಂಭ್ರಮಾಚರಣೆ


ಮುನವಳ್ಳಿ: ದೇಶ ಕಂಡ ಅಪ್ರತಿಮ ರಾಜಕಾರಣಿ, ಧೀಮಂತ ನಾಯಕ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಯಶಸ್ವಿ ಎರಡನೇ ಅವಧಿಯ ಎರಡನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಸವದತ್ತಿ ಮಂಡಲದ ಜನಪ್ರಿಯ ಶಾಸಕರು ಹಾಗೂ ವಿಧಾನ ಸಭೆ ಉಪಸಭಾಧ್ಯಕ್ಷರಾದ ಸನ್ಮಾನ್ಯ ಶ್ರೀ ಆನಂದ ಚಂ ಮಾಮನಿಯವರ ಮಾರ್ಗದರ್ಶನದಂತೆ.

“ಸೇವಾ ಹಿ ಸಂಘಟನ್” ಕಾರ್ಯಕ್ರಮದ ಅಡಿಯಲ್ಲಿ ಮುನವಳ್ಳಿ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಾಗೂ ಹೋಂ ಐಸೋಲೇಷನ್ನಲ್ಲಿರುವ ರೋಗಿಗಳಿಗೆ ಔಷಧಿ,ಮಾತ್ರೆಗಳು,ಮಾಸ್ಕ್,ಸ್ಯಾನಿಟೈಸರ್, ಇತ್ಯಾದಿ ಹೊಂದಿರುವ ಕಿಟ್ ಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಆರ್,ಎಸ್‌, ಎಸ್, ಸಂಘದ ಸಹ ಪ್ರಾಂತ ಪ್ರಚಾರಕರಾದ ಶ್ರೀ ನರಸಿಂಹ ಕುಲಕರ್ಣಿ ಜೀ, ಡಾ.ಹೇಮಂತ ಭಸ್ಮೆ, ಸವದತ್ತಿ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ಡಾ.ನಯನಾ ಭಸ್ಮೆ, ಶ್ರೀಮತಿ ಮಹಾದೇವಿ ಮಠದ, ಹಾಗೂ ಮಹಿಳಾ ಮೋರ್ಚಾ ಸದಸ್ಯರು
ಉಪಸ್ಥಿತರಿದ್ದರು.
(ವರದಿ ಈರಣ್ಣಾ ಹೂಲ್ಲೂರ)


Leave a Reply