Belagavi

ಕರೋನಾ ಕಾಲಘಟ್ಟದಲ್ಲೂ ಸಾಹಿತ್ಯಕ ಚಟುವಟಿಕೆ ಶ್ಲಾಘನೀಯ-ಡಾ.ಪ್ರಭಾಕರ ಕೋರೆ


ಬೆಳಗಾವಿ:೩೧- ಕರೋನಾ ಮಹಾಮಾರಿ ವ್ಯಾಪಕವಾಗಿರುವುದರಿಂದ ಜನಜೀವನ ಅಸ್ತವ್ಯಗೊಂಡಿದೆ. ಇಂಥಹ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಕಸಾಪ ಘಟಕವು, ವೆಬಿನಾರ್ ಮೂಲಕ ಸಾಹಿತ್ಯ ಚಟುವಟಿಕೆಗಳನ್ನು ಹಮ್ಮಿಕೊಂಡು ಸಾಹಿತ್ಯದ ರಸದೌತನ ಉಣಬಡಿಸುತ್ತಿರುವುದು ಅಲ್ಲದೇ ಕರೋನಾ ಜಾಗೃತಿಯ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ಕೆ.ಎಲ್.ಇ.ಸಂಸ್ಥೆಯ ಕಾರ್ಯಾಧ್ಯಕ್ಷರು ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಅವರು ಅಭಿಪ್ರಾಯ ಪಟ್ಟರು. ಬೆಳÀಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲೆಯ ಎಲ್ಲ ತಾಲೂಕು ಕಸಾಪ ಘಟಕಗಳ ಸಹಯೋಗದೊಂದಿಗೆ ರವಿವಾರ ದಿನಾಂಕ:೩೦/೦೫/೨೦೨೧ ರಂದು ಸಂಜೆ ೫ ಗಂಟೆಗೆ ವೆಬಿನಾರ್ ಮೂಲಕ ಏರ್ಪಡಿಸಲಾದ ಉಪನ್ಯಾಸ ಮಾಲಿಕೆಯನ್ನು ಉದ್ಘಾಟಿಸಿ ಮಾತನಾಡಿ ಕರೋನಾ ರೋಗ ತಡೆಗಟ್ಟಲು ಜನರು ಆರೋಗ್ಯ ಇಲಾಖೆಯ ಮಾರ್ಗದರ್ಶಿಯನ್ನು ಪಾಲಿಸಬೇಕೆಂದರು.
“ಕರೋನಾ ಘಟ್ಟದ ಆರೋಗ್ಯದ ಸವಾಲುಗಳು” ಎಂಬ ವಿಷಯದ ಮೇಲೆ ಬೆಳಗಾವಿಯ ಖ್ಯಾತ ವೈದ್ಯರಾದ ಡಾ.ವನಿತಾ ಮೆಟಗುಡ್ಡ(ಎಮ್.ಡಿ.ಡಿ.ಜಿ.ಒ,ಎಫ್,ಆಯ್.ಸಿ.ಒ.ಜೆ) ಅವರು ಮಾತನಾಡಿ ಕೋವಿಡ್-೧೯ ಇದೊಂದು ಸಾಂಕ್ರಾಮಿಕ ರೋಗವಾಗಿದ್ದು, ಸೋಂಕಿನ ಕೊಂಡಿಯನ್ನು ಕಳಚಲು ಮನೆಯಲ್ಲಿಯೇ ಇರುವುದು ಉತ್ತಮ ಎಂದು ತಿಳಿಸಿದರು. ಮಾಸ್ಕ ಧರಿಸುವುದು, ಕೈತೊಳೆಯುವುದು ಮತ್ತು ಸಾಮಾಜಿಕ ಅಂತರ ಪಾಲಿಸುವುದರಿಂದ ರೋಗ ಹರಡುವುದನ್ನು ವ್ಯಾಪಕವಾಗಿ ತಡೆಗಟ್ಟಬಹುದಾಗಿದ್ದು, ನೆಗಡಿ, ಕೆಮ್ಮು, ಜ್ವರದಂತಹ ರೋಗಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕೆಂದು ಹೇಳಿದರು. ಕರೋನಾ ರೋಗಕ್ಕೆ ಯಾರೂ ಭಯಪಡದೇ ಆರೋಗ್ಯಕರ ಜೀವನ ಶೈಲಿ ರೂಢಿಸಿಕೊಂಡು, ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು. ಮತ್ತು ವೀಕ್ಷಕರ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರಗಳನ್ನು ನೀಡಿದರಲ್ಲದೇ, ಗಾಬರಿಬೇಡ, ಭಯಬೇಡ ಎಲ್ಲರೂ ವ್ಯಾಕ್ಸಿನ್ ತೆಗೆದೆಕೊಳ್ಳುವಂತೆ ತಿಳಿಸಿದರು.
ಕ.ಸಾ.ಪ. ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಂಗಲಾ ಮೆಟಗುಡ್ಡ ಅವರು ಮಾತನಾಡಿ ನಮ್ಮೆಲ್ಲರಿಗೂ ಮೊದಲು ಆರೋಗ್ಯವೇ ಮುಖ್ಯವಾಗಿದ್ದು, ಮನೆಯಲ್ಲಿಯೇ ಇದ್ದು ಒಳ್ಳೊಳ್ಳೆ ಪುಸ್ತಕಗಳನ್ನು ಓದಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಹೋಗದೆ ಕರೋನಾ ಹೊಡೆದೋಡಿಸಲು ಸಹಕರಿಸಬೇಕೆಂದು ತಿಳಿಸಿದರು. ಕಸಾಪ ಖಾನಾಪೂರ ತಾಲೂಕಾ ಅಧ್ಯಕ್ಷರಾದ ಶ್ರೀ ವಿಜಯ ಬಡಿಗೇರ ಅವರು ಮಾತನಾಡಿ ರೋಗ ಬಂದ ನಂತರ ಪರದಾಡುವುದಕ್ಕಿಂತ ರೋಗ ಬರದ ಹಾಗೆ ನಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳುವುದು ಮುಖ್ಯ ಎಂದು ತಿಳಿಸಿದರು. ಬೆಳಗಾವಿ ಕಸಾಪ ಜಿಲ್ಲಾ ಗೌರವ ಕೋಶಾಧ್ಯಕ್ಷರಾದ ಶ್ರೀಮತಿ ರತ್ನಪ್ರಭಾ ಬೆಲ್ಲದ ಸ್ವಾಗತಿಸಿ ಉಪನ್ಯಾಸಕರನ್ನು ಪರಿಚಯಿಸಿದರು. ರಾಮದುರ್ಗ ಕಸಾಪ ಅಧ್ಯಕ್ಷ ಶ್ರೀ ಪಾಂಡುರAಗ ಜಟಗನ್ನವರ ಅವರು ವೆಬಿನಾರ್ ನ್ನು ಸಂಯೋಜನೆಗೊಳಿಸಿ ನಿರೂಪಿಸಿದರು. ಗೋಕಾಕ ಕಸಾಪ ಅಧ್ಯಕ್ಷ ಶ್ರೀ ಮಹಾಂತೇಶ ತಾಂವಶಿ ವಂದಿಸಿದರು. ಜಿಲ್ಲೆಯ ಎಲ್ಲ ತಾಲೂಕುಗಳ ಕಸಾಪ ಅಧ್ಯಕ್ಷರುಗಳು, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳು ಶ್ರೀ ಎಮ್ ವಾಯ್ ಮೆಣಸಿನಕಾಯಿ ಅವರು ಅಲ್ಲದೇ ಎಲ್ಲ ಪದಾಧಿಕಾರಿಗಳು ಹಾಗೂ ಹಲವಾರು ಸಾಹಿತ್ಯಾಸಕ್ತರು ಮುಂತಾದವರು ಸೇರಿ ನೂರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಇತ್ತೀಚೆಗೆ ನಮ್ಮನ್ನಗಲಿದ ಹಿರಿಯ ಸ್ವಾತಂತ್ರö್ಯ ಯೋಧ ಎಚ್.ಎಸ್.ದೊರೆಸ್ವಾಮಿ ಹಾಗೂ ಕರೋನಾ ಕಾಯಿಲೆಗೆ ತುತ್ತಾದವರಿಗೆ ಕಸಾಪ ವತಿಯಿಂದ ಶೃದ್ಧಾಂಜಲಿಯನ್ನು ಅರ್ಪಿಸಲಾಯಿತು ಎಂದು ಕ.ಸಾ.ಪ. ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಂಗಲಾ ಮೆಟಗುಡ್ಡ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Leave a Reply