Gadag

ಮನೋಬಲವೇ ಮನುಷ್ಯನ ನಿಜವಾದ ಅಸ್ತç


ಗದಗ   31: ಶಿಕ್ಷಕರು ಮಕ್ಕಳಲ್ಲಿ ಆತ್ಮ ವಿಶ್ವಾಸ, ಮನೋಬಲವನ್ನು ಬೆಳೆಸಿ ಅವರ ಬದುಕನ್ನು ಬಂಗಾರವಾಗಿಸಬೇಕು ಎಂದು ಕಪೋತಗಿರಿ ಶ್ರೀ ನಂದಿವೇರಿ ಶಿವಕುಮಾರ ಮಹಾಸ್ವಾಮಿ ನುಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಶಿಕ್ಷಕರ ಸಂಘಗಳ ಸಹಯೋಗದೊಂದಿಗೆ  ಶಿಕ್ಷಕರಿಗೆ ಆತ್ಮ ಸ್ಥೆöÊರ್ಯ ತುಂಬುವAತಹ ವರ್ಚುವಲ್ ಕಾರ್ಯಕ್ರಮದಲ್ಲಿ  ಉಪನ್ಯಾಸ ನೀಡಿದರು.
ಶಿಕ್ಷಕ ವೃತ್ತಿ ಪವಿತ್ರವಾದ ವೃತ್ತಿಯಾಗಿದೆ. ಶಿಕ್ಷಕರಾದವರು ಎಂದಿಗೂ ಆತ್ಮ ವಿಶ್ವಾಸವನ್ನು ಕಳೆದುಕೊಳ್ಳದೆ ಮನೋಬಲವನ್ನು ಹೆಚ್ಚಿಸಿಕೊಳ್ಳಬೇಕು. ಕರೋನಾ ಕೂಡಾ ಒಂದು ಪರೀಕ್ಷೆ ಇದ್ದಂತೆ ಅದನ್ನು ಆತ್ಮಸ್ಥೆöÊರ್ಯದಿಂದ ಸಮರ್ಥವಾಗಿ ಎದುರಿಸಿ ಗೆಲ್ಲಬೇಕಾಗಿದೆ. ಶಿಕ್ಷಕರು  ಮಕ್ಕಳಲ್ಲಿ ಆತ್ಮ ವಿಶ್ವಾಸ, ಮನೋಬಲವನ್ನು ಬೆಳೆಸುವ ಮೂಲಕ ಅವರ ಬದುಕನ್ನು ಬಂಗಾವಾಗಿಸಬೇಕು. ಅವರವರ ಪಾಲಿನ ಕೆಲಸವನ್ನು ಸಂತೃಪ್ತಿಯಿAದ ಮಾಡಬೇಕು. ಸಹನೆ, ತಾಳ್ಮೆ ಎಂಬುದು ಮನುಷ್ಯನ ಅಂತರAಗಕ್ಕೆ ಚಿಕಿತ್ಸೆ ಇದ್ದಂತೆ ಮನುಷ್ಯ ಬದುಕಿನಲ್ಲಿ ಚಲಾವಣೆಯಲ್ಲಿರುವ ನಾಣ್ಯದ ಹಾಗೆ ಇರಬೇಕೆಂದು ಶಿಕ್ಷಕರ ಆತ್ಮ-ಮನೋಬಲ ವಿಷಯದ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದ  ಅಧ್ಯಕ್ಷತೆ ವಹಿಸಿದ್ದ  ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಎಂ.ಬಸವಲಿAಗಪ್ಪ ಮಾತನಾಡಿ   ಆತ್ಮಬಲ ಮತ್ತು ಮನೋಬಲ ಇದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ಜೀವನೋತ್ಸಾಹ ಎಂಬುದು ಸದಾ ಇರಬೇಕು ಎಂದು ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಎಸ್.ಗೌಡರ ಪ್ರಾರ್ಥಿಸಿದರು, ಎಂ.ಎ.ಯರಗುಡಿ ನಿರೂಪಿಸಿದರು, ವ್ಹಿ.ಎಂ.ಮೇಣಸಿನಕಾಯಿ ವಂದಿಸಿದರು.


Leave a Reply