Gadag

ಕೋವಿಡ್ ಸಂದರ್ಭದಲ್ಲಿ ಮಕ್ಕಳ ಪಾಲನೆ ಮತ್ತು ಪೋಷಣೆಗಾಗಿ ಕ್ವಾರಂಟೈನ್ ಕೇಂದ್ರ ಪ್ರಾರಂಭ


ಗದಗ    ಮೇ 31:  ಕೋವಿಡ್ ಪಾಸಿಟಿವ್ ಆಗಿರುವ ಯಾವುದೇ ಕೋವಿಡ್ ಸೋಂಕಿತ ವ್ಯಕ್ತಿಯು ಆಸ್ಪತ್ರೆ ಚಿಕಿತ್ಸೆಗೆ ದಾಖಲಾಗುವ ಸಮಯದಲ್ಲಿ ಅಥವಾ ಕೋವಿಡ್ ಸೋಂಕಿತ ವ್ಯಕ್ತಿಯು ಮರಣ ಹೊಂದಿದ ಸಂದರ್ಭದಲ್ಲಿ ಅವರ ಕುಟುಂಬದಲ್ಲಿರುವ ಮಕ್ಕಳ ಪಾಲನೆ ಮತ್ತು ಪೋಷಣೆ ಮಾಡಲು ತೊಂದರೆಯಾದಲ್ಲಿ ಅಂತಹ ಮಕ್ಕಳ ಪುನರ್ವಸತಿಗಾಗಿ ಪ್ರತ್ಯೇಕವಾಗಿ ಕ್ವಾರಂಟೈನ್ ವ್ಯವಸ್ಥೆ ಕಲ್ಪಿಸಲು   ಮಾನ್ಯ ಜಿಲ್ಲಾಧಿಕಾರಿಗಳು ಬಾಲನ್ಯಾಯ ಕಾಯ್ದೆ -2015 ರಡಿ ನೊಂದಣಿಯಾದ ಕೆಳಕಂಡ  2 ಅರ್ಹ ಸಂಸ್ಥೆಗಳಾದ   ಗಂಡು ಮಕ್ಕಳಿಗೆ  ಬಾಲಕರ ಸರಕಾರಿ ಬಾಲ ಮಂದಿರ, ಹೆಲ್ತ ಕ್ಯಾಂಪ್ ಬೆಟಗೇರಿ-ಗದಗ ( ಅವಿನಾಶಲಿಂಗ ಗೊಟಖಿಂಡಿ ಮೊ. ಸಂ. 9448837228 ) ಹಾಗೂ ಹೆಣ್ಣು ಮಕ್ಕಳಿಗೆ ಸ್ವೀಕಾರ ಕೇಂದ್ರ ಗಾಂಧಿ ಸರ್ಕಲ್ ಹತ್ತಿರ, ಗದಗ ( ಶ್ರೀಮತಿ ಲಕ್ಷö್ಮವ್ವ ಬಾಗೇವಾಡಿ ಮೊ.ಸಂ. 9902673704 ) ಗುರುತಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಮಕ್ಕಳ ಸಹಾಯವಾಣಿ:1098 ಗೆ ಉಚಿತ ಕರೆ ಮಾಡುವ ಮೂಲಕ ಸಂಪರ್ಕಿಸಬಹದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply