Gadag

ವಿಶ್ವ ತಂಬಾಕು ರಹಿತ ದಿನಾಚರಣೆಯ ಅಂಗವಾಗಿ ಜಾಗೃತಿ ರಥಕ್ಕೆ ಚಾಲನೆ


ಗದಗ  31:   ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಜಿಲ್ಲಾ ಸಮೀಕ್ಷಣಾಧಿಕಾರಿಗಳ ಕಾರ್ಯಾಲಯ, ಜಿಲ್ಲಾ ಆಸ್ಪತ್ರೆ ಜಿಮ್ಸ ಗದಗ,ಜಿಲ್ಲಾ ವಾರ್ತಾ ಮತ್ತು ssಸಾರ್ವಜನಿಕ ಸಂಪರ್ಕ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ   ಜಿಲ್ಲಾಡಳಿತ ಭವನದ ಆವರಣದಲ್ಲಿಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಜಾಗೃತಿ ರಥದ ಚಾಲನಾ ಕಾರ್ಯಕ್ರಮ ಜರುಗಿತು.  ವಿಶ್ವ ತಂಬಾಕು ರಹಿತ ದಿನದ ಕುರಿತು ಸಾರ್ವಜನಿಕರಲ್ಲಿ ಅರಿವು ಹಾಗೂ ಜಾಗೃತಿ ಮೂಡಿಸಲು, ಐ.ಇ.ಸಿ ವಾಹನದಲ್ಲಿ ಭಿತ್ತಿ ಚಿತ್ರ ,ಕರಪತ್ರ,  ಹಾಗೂ ಮೈಕಿಂಗ್ ಮೂಲಕ ಐ.ಇ.ಸಿ ಮಾಡುವ ಜಾಗೃತಿ ರಥಕ್ಕೆ   ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಜಿ,ಸಲೆಗರೆ ಚಾಲನೆ ನೀಡಿದರು.
          ಈ ಸಂದರ್ಭದಲ್ಲಿ  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಧಿಕಾರಿ ಡಾ.ಸತೀಶ.ಸಿ.ಬಸರೀಗಿಡದ,     ಜಿಲ್ಲಾ ಶಸ್ತçಚಿಕಿತ್ಸಕ ಡಾ.ಜಿ.ಎಸ್.ಪಲ್ಲೆದ. ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ಜಗದೀಶ ನುಚ್ಚಿನ,ಜಿಲ್ಲಾ ಕುಟುಂಬಕಲ್ಯಾಣ ಅಧಿಕಾರಿ .ಡಾ.ವೈ.ಕೆ.ಭಜಂತ್ರಿ, ಜಿಲ್ಲಾ ಕ್ಷಯ ರೋಗ ನಿಯಂತ್ರಣ ಅಧಿಕಾರಿ  ಡಾ.ಅರುಂದತಿ ಕುಲಕರ್ಣಿ, ಜಿಲ್ಲಾ ಆರ್.ಸಿ.ಹೆಚ್.ಅಧಿಕಾರಿ ಡಾ.ಬಿ.ಎಂ,ಗೋಜನೂರ,ತಾಲೂಕಾ ಆರೋಗ್ಯಾಧಿಕಾರಿ ಡಾ.ಎಸ್.ಎಸ್.ನೀಲಗುಂದ   ಜಿಲ್ಲಾ ಸಲಹಗಾರರಾದ ಗೋಪಾಲ ಸುರಪುರ. ಜಿಲ್ಲಾ ಆರೊಗ್ಯಾ ಶಿಕ್ಷಣ ಅಧಿಕಾರಿ  ರೂಪಸೇನ್ ಚವ್ಹಾಣ  ಎಸ್.ಎಸ್.ಪೀರಾ ಉಮೇಶ ಕರಮುಡಿ,  ವಿಠ್ಠಲ್ ನಾಯ್ಕ,  ಶ್ರೀಮತಿ ರೇಷ್ಮಾ ಬೆಗಂ , ಶಿವು ಬಗಾಡೆ ಹಾಗೂ ಆರೋಗ್ಯ ಸಿಬ್ಬಂದಿಗಳು ಉಪಸ್ಥಿತರಿದ್ದರು.  


Leave a Reply