Gadag

ಜೂನ್ 1 ರಿಂದ 30 ರವರೆಗೆ ನಂದಿನಿ 500 ಮಿಲಿ ಮತ್ತು 1000 ಮಿಲಿ ಪ್ಯಾಕ್ ಗಳಲ್ಲಿ ತಲಾ 20 ಹಾಗೂ 40 ಮಿಲಿ ಹೆಚ್ಚುವರಿ ಹಾಲು ವಿತರಣೆ


ಗದಗ  ಮೇ 31:   ಕರ್ನಾಟಕ ಹಾಲು ಮಹಾ ಮಂಡಳಿಯು      ಲಾಕ್‌ಡೌನ್ ಅವಧಿಯಲ್ಲಿ ಸಾರ್ವಜನಿಕರ ಆರೋಗ್ಯ ವೃದ್ಧಿಸಲು ಮತ್ತು ವೈದ್ಯರ ಸಲಹೆಯಂತೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು “ ಹೆಚ್ಚು ಹಾಲು ಕುಡಿಯಿರಿ ಅಭಿಯಾನದೊಂದಿಗೆ ಜೂನ್ 1ರಂದು  ವಿಶ್ವ ಹಾಲು ದಿನಾಚರಣೆಯ ಕಾರ್ಯಕ್ರಮದೊಂದಿಗೆ ಜೂನ್ 2021 ರ ಸಂಪೂರ್ಣ ಮಾಹೆಯಲ್ಲಿ ( ಜೂನ್ 1 ರಿಂದ 30 ರವರೆಗೆ ) ಎಲ್ಲ ಮಾದರಿಯ ನಂದಿನಿ 500 ಮಿಲೀ ಮತ್ತು 1000 ಮಿಲೀ ಪ್ಯಾಕ್ ಗಳಲ್ಲಿ ತಲಾ 20 ಹಾಗೂ 40 ಮಿಲಿ ಹೆಚ್ಚುವರಿ ಹಾಲನ್ನುಉಚಿತವಾಗಿ ಗ್ರಾಹಕರಿಗೆ ಪೂರೈಸಲು ಯೋಜನೆ ಜಾರಿಗೊಳಿಸಿರುವುದನ್ನು ಧಾರವಾಡ ಹಾಲು ಒಕ್ಕೂಟದ 4 ಜಿಲ್ಲೆಗಳ ವ್ಯಾಪ್ತಿಯಲ್ಲಿ ಅನುಷ್ಟಾನಗೊಳಿಸಲಾಗುತ್ತಿದೆ.  ನಂದಿನಿ ಗ್ರಾಹಕರು ಸದರಿ ಯೋಜನೆಯ  ಸೌಲಭ್ಯ ಪಡೆದು ಕೊಳ್ಳಬಹುದಾಗಿದೆ.    ಧಾರವಾಡ ಹಾಲು ಒಕ್ಕೂಟವು ಧಾರವಾಡ, ಹಾವೇರಿ, ಗದಗ ಮತ್ತು ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ವಿಸ್ತರಿಸಿದ್ದು   ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಗ್ರಾಹಕರಿಗೆ ನಿರಂತರವಾಗಿ ಪೂರೈಸಲಾಗುತ್ತಿದೆ.   ಲಾಕ್‌ಡೌನ್ ಅವಧಿಯಲ್ಲಿ ನಂದಿನಿ 500 ಮಿಲೀ ಮತ್ತು 1000 ಮಿಲೀ ಪ್ಯಾಕ್‌ಗಳಲ್ಲಿ ತಲಾ 20 ಹಾಗೂ 40 ಮಿಲಿ ಹೆಚ್ಚುವರಿ ಹಾಲನ್ನು ಉಚಿತವಾಗಿ ಗ್ರಾಹಕರಿಗೆ ಪೂರೈಸುವ ಯೋಜನೆಯ ಸದುಪಯೋಗವನ್ನು ಗ್ರಾಹಕರು ಸದ್ಭಳಕೆ ಮಾಡಿಕೊಳ್ಳಬೇಕೆಂದು   ಧಾರವಾಡ , ಹಾವೇರಿ, ಗದಗ ಮತ್ತು ಉತ್ತರ ಕನ್ನಡ ಜಿಲ್ಲಾ ಸಹಕರಿ ಹಾಲು ಒಕ್ಕೂಟದ   ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply