Gadag

ಅಕ್ರಮ ಸಾರಾಯಿ ಮಾರಾಟ ಆರೋಪಿಗಳ ವಿರುದ್ಧ ಕಾನೂನು ಕ್ರಮ


ಗದಗ  31:  ಕೋವಿಡ್-19  ಸೋಂಕು  ಹರಡುವುದನ್ನು  ತಡೆಗಟ್ಟಲು ಜಿಲ್ಲೆಯಲ್ಲಿ ಕಠಿಣ  ಲಾಕ್‌ಡೌನ್  ದಿನಾಂಕ 01.06.2021 ವರೆಗೆ ಜಾರಿಯಲ್ಲಿ ಇದ್ದರೂ ಸಹ ಗಜೇಂದ್ರಗಡ ಶಹರ ತುಂಗಭದ್ರಾ ದಾಬಾ ಹತ್ತಿರ  ಸಂಗಪ್ಪ ಈಶ್ವರಪ್ಪ ಹಾವೇರಿ ವಯಾ-42 ಸಾ;;ಗಜೇಂದ್ರಗಡ ಈತನು ಸುಮಾರು 28.54 ಲೀಟರ್ ಬೀರ್ ಹಾಗೂ ಟೆಟ್ರಾ ಪಾಕೇಟ್ ಗಳು ಅಂದಾಜು 8735/-ಕಿಮ್ಮತ್ತಿನ ಅಕ್ರಮ ಸರಾಯಿ ಮಾರಾಟ ಮಾಡುತ್ತಿದ್ದು ಅವನನ್ನು  ಬಂಧಿಸಿ ಅವನಿಂದ ಅಕ್ರಮ ಸರಾಯಿ ಜಪ್ತಿ ಮಾಡಲಾಗಿದೆ.  ಅವನ ಮೇಲೆ ಗಜೇಂದ್ರಗಡ ಠಾಣೆಯಲ್ಲಿ  ಗುನ್ನಾ ನಂಬರ 94/2021 ಕಲಂ’ 32, 34 ಅಭಕಾರಿ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಪಿಎಸ್‌ಐ ಗಜೇಂದ್ರಗಡ ರವರು ನಿಯಮಾನುಸಾರ ಕ್ರಮ ಜರುಗಿಸಿದೆ.
ಗದಗ ತಾಲೂಕ ಕದಡಿ ಗ್ರಾಮದ. ಅಡಿವೆಪ್ಪ ಮರಿಯಪ್ಪ ಚಲವಾದಿ @ ಸಗರ ವಯಾ-47 ಈತನಿಂದ ಸುಮಾರು 27618/- ಕಿಮ್ಮತ್ತಿನ 70 ಲೀಟರ್ ಬಿಯರ್, ಟೆಟ್ರಾ ಪಾಕೇಟ್ ಗಳನ್ನು ಅಕ್ರಮ ಮಾರಾಟ  ಮಾಡುತ್ತಿವನಿಗೆ,& ಗಾವರವಾಡ ಗ್ರಾಮದಲ್ಲಿ ಪ್ರಕಾಶ ಎಂ ಬೆಟಗೇರಿ ಈತನ ಬಳಿ ಸುಮಾರು 13000/- ಕಿಮ್ಮತ್ತಿನ 26 ಲೀಟರ್ ಅಕ್ರಮ ಬೀಯರ್  ಜಪ್ತಿ ಮಾಡಿದೆ. ಹುಲಕೋಟಿಯಲ್ಲಿ  ಮ್ಯಾಂಗೋ ಟ್ರೀ ಹೋಟಲ್ ಸಮೀಪದ ಶಿವಕುಮಾರ ರಾಮಚಂದ್ರ ನಾಯಕ ಸಾ: ಡಾವಣಗೇರಿ ಹಾಲಿ; ಹುಲಕೋಟಿ ಈತನ ಸುಮಾರು 5214/- ಕಿಮ್ಮತ್ತಿನ 5 ಲೀಟರ್ ವಿಸ್ಕಿ ಹಾಗೂ ರಮ್ ಅಕ್ರಮ ಸರಾಯಿ ಜಪ್ತಿ ಮಾಡಲಾಗಿದೆ ಹಾಗೂ  ಅವರ ಮೇಲೆ ಗದಗ ಗ್ರಾಮೀಣ ಠಾಣೆಯಲ್ಲಿ  ಪ್ರಕರಣಗಳನ್ನು ದಾಖಲಿಸಿ ನಿಯಮಾನುಸಾರ ಕಾನೂನು ಕ್ರಮ ಜರುಗಿಸಲಾಗಿದೆ. ಸದರ ದಾಳಿಯನ್ನು ಸಿಪಿಐ & ಪಿಎಸ್‌ಐ ಗದಗ ಗ್ರಾಮೀಣ ರವರು ಮಾಡಿರುತ್ತಾರೆ.  ಸಾರ್ವಜನಿಕರು ಸರಕಾರದ ನಿಯಮ ಪಾಲನೆ ಮಾಡಿ, ಕೊರೊನಾ ರೋಗ ಹರಡದಂತೆ ನಿಯಂತ್ರಣ ಮಾಡಲು ಸಹಕರಿಸಬೇಕೆಂದು ಪೊಲೀಸ ಇಲಾಖೆಯ  ಪ್ರಕಟಣೆ ತಿಳಿಸಿದೆ.

ಸಾರ್ವಜನಿಕರ ಗಮನಕ್ಕೆ
ಗದಗ : ಕೊರೊನಾ ವೈರಸ್ ಹರಡದಂತೆ ತಡೆಗಟ್ಟುವ ಸಂಬAದ ಸಾರ್ವಜನಿಕರ ಸಂಚಾರ ನಿಷೇಧಿಸಲಾಗಿದ್ದು ಸಾರ್ವಜನಿಕರು ಮನೆಯಿಂದ ಅನಾವಶ್ಯಕವಾಗಿ ಹೊರಗೆ ಬಾರದಿರಲು ವಿನಂತಿಸಲಾಗಿದೆ.  ದಿನಸಿ ಸಾಮಾಗ್ರಿಗಳನ್ನು ಖರೀದಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಗದಗ ನಗರದ 150ಕ್ಕೂ ಹೆಚ್ಚು ದಿನಸಿ ಅಂಗಡಿಗಳ ಮೂಲಕ ಹೋಂ ಡಿಲೇವರಿಮಾಡಲು ನಗರಸಭೆಯಿಂದ ಪಾಂಪ್ಲೆಟ್ ಮುದ್ರಿಸಲಾಗಿದೆ. ಪಾಂಪ್ಲೆಟ್‌ನಲ್ಲಿರುವ ಅಂಗಡಿಗಳ ಮಾಲೀಕರಿಗೆ ದೂರವಾಣಿ ಮೂಲಕ ಅಥವಾ ವಾಟ್ಸಾಪ್ ಮೂಲಕ ತಿಳಿಸಿದ್ದಲ್ಲಿ ಅಂಗಡಿ ಮಾಲಿಕರು ಸಾಮಗ್ರಿಗಳನ್ನು ಮನೆಗೆ ಪೂರೈಕೆ ಮಾಡುತ್ತಾರೆ. ಹಾಗೂ ತಳ್ಳುಗಾಡಿಗಳನ್ನು ಪ್ರತಿ ಒಂದು ವಾರ್ಡಿಗೆ ನಿಯೋಜಿಸಿ ಸಾರ್ವಜನಿಕರಿಗೆ ಕೊರತೆಯಾಗದಂತೆ ಹಾಗೂ ದರಗಳಲ್ಲಿ ವ್ಯತ್ಯಾಸವಾಗದಂತೆ ಹೂ, ಹಣ್ಣು, ಮತ್ತು ತರಕಾರಿಗಳ ವ್ಯಾಪಾರವನ್ನು ತಳ್ಳುವ ಗಾಡಿ ಅಥವಾ ಅಟೋ, ರಿಕ್ಷಾಗಳ ಮುಖಾಂತರ ಆಯಾ ವಾರ್ಡಗಳಲ್ಲಿ ಸಂಚರಿಸಿ ಕಡ್ಡಾಯವಾಗಿ ಮಾಸ್ಕ ಹಾಕಿ ಅಂತರ ಕಾಯ್ದುಕೊಂಡು ಮಾರಾಟ ಮಾಡಲು ಹಾಗೂ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ ಹಾಕಿಕೊಂಡು ಖರಿದಿಸಲು ಜಿಲ್ಲಾಧಿಕಾರಿಗಳು ಸೂಚಿಸಿರುತ್ತಾರೆ.  ಕೋವಿಡ್-19ರ ನಿಯಮಪಾಲಿಸಿ ಸಹಕರಿಸಬೇಕೆಂದು  ಗದಗ  ಬೆಟಗೇರಿ ನಗರಸಭೆ ಪೌರಾಯುಕ್ರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply