Gadag

ಶಿಕ್ಷಕರು ಆತ್ಮ ಸ್ಥೆöÊರ್ಯವನ್ನು ಬೆಳೆಸಿಕೊಳ್ಳಬೇಕು


ಗದಗ  ಮೇ 31: ಶಿಕ್ಷಕರು ಆತ್ಮಸ್ಥೆöÊರ್ಯವನ್ನು ಬೆಳೆಸಿಕೊಳ್ಳಬೇಕಾಗಿದೆ. ಹಾಗೂ ಶಿಕ್ಷಕರು ಜೀವನದಲ್ಲಿ ಆಶಾವಾದಿಗಳಾಗಿರಬೇಕು ಎಂದು ಡಯಟ್ ಹಿರಿಯ ಉಪನ್ಯಾಸಕ ಎಂ.ಬಿ. ಅಂಬಿಗೇರ ನುಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಾರ್ಯಾಲಯ ಮತ್ತು ಶಿಕ್ಷಕರ ಸಂಘಗಳ ಸಹಯೋಗದೊಂದಿಗೆ ಮೇ 30 ರಂದು ಶಿಕ್ಷಕರಿಗೆ ಆತ್ಮಸ್ಥೆöÊರ್ಯ ತುಂಬುವAತಹ ವರ್ಚುವಲ್ ಕಾರ್ಯಕ್ರಮದಲ್ಲಿ  ಉಪನ್ಯಾಸ ನೀಡಿ ಮಾತನಾಡಿದರು.
ಕೋವಿಡ್‌ನ ಸೋಂಕು ನಿಯಂತ್ರಣ ಕುರಿತು ಅರಿವು ಇರಬೇಕು.  ಶಿಕ್ಷಕರು  ಆತ್ಮ ವಿಶ್ವಾಸವನ್ನು ಬೆಳೆಸಿಕೊಂಡು ಮಕ್ಕಳಲ್ಲಿಯೂ ಆತ್ಮವಿಶ್ವಾಸವನ್ನು ಬೆಳೆಸಬೇಕು.  ಕೋವಿಡ್ ಸೊಂಕು ಹರಡದಂತೆ  ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕು. ಕೋವಿಡ್ ಬಂದರೂ ಆತ್ಮವಿಶ್ವಾಸ ಕಳೆದುಕೊಳ್ಳದೇ ಧೈರ್ಯದಿಂದ ಅದನ್ನು ಎದುರಿಸಬೇಕು. ಜೀವನದಲ್ಲಿ ಯಾವುದೇ ಸಮಸ್ಯೆ ಬಂದರೂ ಎದುರಿಸುವ ಮನೋಭಾವವಿರಬೇಕು.  ಮನುಷ್ಯ ನಕಾರಾತ್ಮಕ ಕಲ್ಪನೆಗಳಿಂದ ದೂರವಿರಬೇಕು.ಉದ್ವೇಗಕ್ಕೆ ಒಳಗಾಗಬಾರದು. ಸಮಚಿತ್ತದಿಂದ ವಿಷಯವನ್ನು ಸ್ವೀಕರಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ.ಎಂ. ಬಸವಲಿಂಗಪ್ಪ ಮಾತನಾಡಿ ಶಿಕ್ಷಕರು ಮಕ್ಕಳಲ್ಲಿ ಮನೋಸ್ಥೆöÊರ್ಯಗಳನ್ನು ಮತ್ತು ಧನಾತ್ಮಕ ಚಿಂತನೆಗಳನ್ನು ಬೆಳೆಸಬೇಕು ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಸ್. ಕೆಳದಿಮಠ ಉಪನ್ಯಾಸಕ ಪರಿಚಯ ಮಾಡಿದರು.  ಎಸ್.ಬಿ.ದೊಡ್ಡಣ್ಣವರ ವಂದಿಸಿದರು.  ಕ್ಷಮಾ ವಸ್ತçದ  ಸ್ವಾಗತಿಸಿ ಕಾರ್ಯಕ್ರಮ  ನಿರೂಪಿಸಿದರು. ಎಸ್.ಎಸ್.ಗೌಡರ ಪ್ರಾರ್ಥಿಸಿದರು.


Leave a Reply