Belagavi

ಉಚಿತ ಆ್ಯಂಬುಲೆನ್ಸ್ ಗೆ ಚಾಲನೆ ಆಹಾರ ಕಿಟ್ ವಿತರಿಸಿದ ಪಂಚನಗೌಡ ದ್ಯಾಮನಗೌಡರ


7ಮುನವಳ್ಳಿ: ಸಂಕಷ್ಟದ ಸಮಯದಲ್ಲಿ ಜನರ ನೆರವಿಗೆ ಧಾವಿಸುವವರನ್ನು ಸಮಾಜ ಪ್ರೋತ್ಸಾಹಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಹೇಳಿದರು.

ಮುಖಂಡ ಪಂಚನಗೌಡ ದ್ಯಾಮನಗೌಡರ ಹಾಗೂ ಸತೀಶ ಜಾರಕಿಹೊಳಿ ಅವರ ಜನ್ಮದಿನದ ಅಂಗವಾಗಿ ಮುನವಳ್ಳಿ ಪಟ್ಟಣದಲ್ಲಿ ಇಂದು ಹಮ್ಮಿಕೊಂಡಿದ್ದ ಕೊರೊನಾ ವಾರಿಯರ್ಸ್ ಗಳಿಗೆ ಆಹಾರ ಕಿಟ್ ವಿತರಣೆ ಹಾಗೂ ಕೋವಿಡ್ ಸೋಂಕಿತರಿಗೆ ಉಚಿತ ಆ್ಯಂಬುಲೆನ್ಸ್ ಸೇವೆಗೆ ಚಾಲನೆ ನೀಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಷ್ಟದ ಸಂದರ್ಭಗಳಲ್ಲಿ ಜನರ ಸಹಾಯಕ್ಕೆ ನಿಲ್ಲುವವರು ಕಡಿಮೆ. ಹೀಗಾಗಿ ನೆರವಿಗಾಗಿ ಮುಂದೆ ಬರುವವರನ್ನು ಸಮಾಜ ಗುರುತಿಸಬೇಕು ಎಂದರು.

ಪಂಚನಗೌಡ ಅವರು ಮುತುವರ್ಜಿ ವಹಿಸಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಯುವ ಹಾಗೂ ಉತ್ಸಾಹಿ ನಾಯಕರನ್ನು ಈ ಭಾಗದ ಜನರು ಬೆಂಬಲಿಸಬೇಕು ಎಂದು ಸತೀಶ ಅವರು ಹೇಳಿದರು.

ಸಂಘಟನೆಗಳು, ಉದ್ಯಮಿಗಳು ಮುಂದೆ ಬರಲಿ ಎಲ್ಲವನ್ನು ಸರ್ಕಾರವೇ ಮಾಡಲು ಆಗುವುದಿಲ್ಲ. ಹೀಗಾಗಿ, ಇಂತಹ ಸಂದರ್ಭಗಳಲ್ಲಿ ಸ್ವಯಂ ಸೇವಾ ಸಂಘಟನೆಗಳು ಹಾಗೂ ಉದ್ಯಮಿಗಳು ಜನರ ನೆರವಿಗೆ ಮುಂದೆ ಬಂದು, ಕೈಜೋಡಿಸಬೇಕು. ಅಂದಾಗ ಮಾತ್ರ ಕೊರೊನಾ ರೋಗದ ಸಂಪೂರ್ಣ ನಿರ್ಮೂಲನೆ ಸಾಧ್ಯ ಎಂದರು.

ದಿನೇ ದಿನೇ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ. ಸದ್ಯ ಆಸ್ಪತ್ರೆಗಳಲ್ಲಿ ಬೆಡ್ ಹಾಗೂ ಆಕ್ಸಿಜನ್ ಕೊರತೆ ಇಲ್ಲ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲೂ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಜನರು ಇದರ ಸದುಪಯೋಗ ಪಡೆಯಬೇಕು. ಕೊರೊನಾ ಹೋಗಲಾಡಿಸಲು ಸಹಕರಿಸಬೇಕು ಎಂದು ಸತೀಶ ಜಾರಕಿಹೊಳಿ ಮನವಿ ಮಾಡಿದರು.

10 ಸಾವಿರ ಕಿಟ್ ಗಳ ವಿತರಣೆ
ಸವದತ್ತಿ ತಾಲೂಕಿನ 23 ಹಳ್ಳಿಗಳಲ್ಲಿ ಅಗತ್ಯವಿರುವವರಿಗೆ 10 ಸಾವಿರ ಕಿಟ್ ಗಳನ್ನು ವಿತರಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಯಾರು ಕೂಡ ಹಸಿವಿನಿಂದ ನರಳಬಾರದು ಎಂಬ ಉದ್ದೇಶದಿಂದ ನಾವು ಸಹಾಯಕ್ಕೆ ಮುಂದಾಗಿದ್ದೇವೆ” ಎಂದು ಮುಖಂಡ ಪಂಚನಗೌಡ ದ್ಯಾಮನಗೌಡ ಅವರು ತಿಳಿಸಿದರು.

ಉಚಿತ ಆ್ಯಂಬುಲೆನ್ಸ್ ಗೆ ಚಾಲನೆ ಆಹಾರ ಕಿಟ್ ವಿತರಣೆ ಇದೇ ಸಂದರ್ಭದಲ್ಲಿ ಕೊರೊನಾ ಸೋಂಕಿತರಿಗಾಗಿ ಉಚಿತ ಆಂಬುಲೆನ್ಸ್ ಸೇವೆಗೆ ಸತೀಶ ಅವರು ಚಾಲನೆ ನೀಡಿದರು. ಕೊರೊನಾ ವಾರಿಯರ್ಸ್ ಗಳಾದ ಪೊಲೀಸರು, ಲೈನ್ ಮೆನ್ ಗಳು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸೇರಿ ಇನ್ನಿತರರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಆಹಾರ ಕಿಟ್ ಗಳನ್ನು ವಿತರಿಸಲಾಯಿತು.

ಮುನವಳ್ಳಿಯ ಸೋಮಶೇಖರ ಮಠದ ಮುರುಘರಾಜೇಂದ್ರ ಸ್ವಾಮೀಜಿ, ಉಮೇಶ ಬಾಳಿ, ವಿಶ್ವಾಸ ವೈದ್ಯ, ಚೋಪ್ರಾ, ರವೀಂದ್ರ ಯಲಿಗಾರ, ಮಾಜಿ ಶಾಸಕ ಆರ್. ವಿ. ಪಾಟೀಲ, ಅಂಭು ಯಲಿಗಾರ, ಸವದತ್ತಿ ತಹಶೀಲ್ದಾರ ಪ್ರಶಾಂತ ಪಾಟೀಲ, ತಾಲೂಕಾ ಆರೋಗ್ಯ ಅಧಿಕಾರಿ ಮಹೇಶ ಚಿತ್ತರಗಿ, ಮುನವಳ್ಳಿ ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ತಿಮ್ಮಾಣಿ, ಮುನವಳ್ಳಿ ವೈದ್ಯಾಅಧಿಕಾರಿ ಎಸ್. ಎಲ್. ದಂಡಗಿ, ಸದಾಶಿವ ಬಾಳಿ, ಎಮ್. ಆರ್. ಗೋಪಶೆಟ್ಟಿ, ಡಾ: ರವಿ ಹನಸಿ, ಡಾ: ಬಸೀರಹ್ಮದ ಬೈರಕದಾರ, ಪಂಚಪ್ಪ ಮಲ್ಲಾಡ, ದಾದಫೀರ ಅತ್ತಾರ, ಮೀರಾಸಾಬ ವಟ್ನಾಳ, ಪರಶುರಾಮ ಗಂಟಿ, ಡಿ ಡಿ ಟೋಪೋಜಿ, ಮಲ್ಲು ಜಕಾತಿ, ಶಿವಾನಂದ ಕರಿಗೋಣ್ಣವರ, ಮಲಿಕಸಾಬ ಬಾಗವಾನ, ಈರಣ್ಣಾ ಸಂಗಪ್ಪನವರ ಸೇರಿ ಇನ್ನಿತರರು ಇದ್ದರು.
(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)


Leave a Reply