Belagavi

ಕೊರೊನಾ ವಾರಿಯರ್ಸಗೆ ಕೊವಿಡ್ ಹಾಗೂ ಆಹಾರ ಕಿಟ್ ವಿತರಣೆ


ಮುನವಳ್ಳಿ: ದಿವಂಗತ ಪ್ರೋ: ಎಂ ಎಂ ಹನಸಿಯವರ ಜನ್ಮದಿನದ ಅಂಗವಾಗಿ ಪಟ್ಟಣದ ಕೊರೊನಾ ವಾರಿಯರ್ಸಗೆ ಪಟ್ಟಣದ ಖ್ಯಾತ ವೈದ್ಯ ಡಾ. ರವಿ ಹನಸಿ ಇವರು ಕೊರೊನಾ ಸಂಕಷ್ಟದ ಸಂದರ್ಭದ ಮಧ್ಯೆಯೂ ಬಿಡುವು ಮಾಡಿಕೊಂಡು ಸಾಮಾಜಿಕ ಕಳಕಳಿಯನ್ನು ಮೆರೆದಿದ್ದಾರೆ, ಸುಮಾರು 200 ಕೊವಿಡ್ ಹಾಗೂ ಆಹಾರ ಕಿಟ್‌ಗಳನ್ನು ಪಟ್ಟಣದ ಕೊರೋನಾ ಸೇನಾನಿಗಳಾದ ಆಶಾ ಕಾರ್ಯಕರ್ತೆಯರು, ಪೊಲೀಸ್ ಸಿಬ್ಬಂದಿ,ಹೆಸ್ಕಾಂ ಪೌರಕಾರ್ಮಿಕರು ಸೇರಿದಂತೆ ಪಟ್ಟಣದ ವಿವಿಧ ಆಸ್ಪತ್ರೆಗಳನ್ನು ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಉಚಿತವಾಗಿ ವಿತರಣೆಯನ್ನು ಮಾಡಿದರು.

ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ವಹಿಸಿ ಪಡಿಸಿದರು. ಮಾತನಾಡಿದ ಪಟ್ಟಣದ ಶ್ರೀ ಸೋಮಶೇಖರಮಠದ ಶ್ರೀ ಮ.ನಿ.ಪ್ರ, ಮುರುಘಂದ್ರ ಮಹಾಸ್ವಾಮಿಗಳು ಡಾ. ರವಿ ಹನಸಿ ಯವರು ಈಗಾಗಲೇ ಬಡವರ ವೈದ್ಯ ರೆಂದು ಈ ಭಾಗದಲ್ಲಿ ಖ್ಯಾತ ಗಳಿಸಿದ್ದಾರೆ. ಕೊರೊನಾ ರೋಗಿಗಳನ್ನು ಅತ್ಯಂತ ಕಾಳಜಿಯಿಂದ ಚಿಕಿತ್ಸೆ ನೀಡುತ್ತಾರೆ ಮತ್ತು ಕಡಿಮೆ ಖರ್ಚಿನಲ್ಲಿ ಅವರನ್ನು ಗುಣಮುಖರನ್ನಾಗಿ ಮಾಡಿ ಮನೆಗೆ ಕಳುಹಿಸುತ್ತಿದ್ದಾರೆ. ಇಂಥ ವೈದ್ಯ ನಮ್ಮ ಭಾಗದಲ್ಲಿ ಇರುವುದು ನಮ್ಮ ಪುಣ್ಯ ಇಂಥ ವೈದ್ಯ ಸಾಮಾಜಿಕ ಕಳಕಳಿಯನ್ನು ತೋರುತ್ತಿರುವುದು ಶ್ಲಾಘನೀಯ ಎಂದು ಪ್ರಶಂಸೆ ವ್ಯಕ್ತ ಪಡಿಸಿದ ಶ್ರೀಗಳು.

ಈ ಸಂದರ್ಭದಲ್ಲಿ ಮಲ್ಲಣ್ಣ ಹನಸಿ, ಪಂಚನಗೌಡ ದ್ಯಾಮನಗೌಡರ, ಪುರಸಭೆ ಅಧ್ಯಕ್ಷ ವಿಜಯ ಅಮಠ, ಡಾ: ಬಿ. ಎಚ್. ಭೈರಕದಾರ, ಮೋಹನ ಕಾಮಣ್ಣವರ, ಶಿವಯ್ಯ ಹಿರೇಮಠ, ಶ್ರೀಶೈಲ ಬಿಜಗುಪ್ಪಿ, ಮಲ್ಲಿಕಾರ್ಜುನ ಕಮತಗಿ, ವಿನಾಯಕ ರೇವಡಗಿ, ಪರಶುರಾಮ ಗಂಟಿ, ಅಮೀತ ಕರೀಕಟ್ಟಿ, ದೀಪಕ ಕಮ್ಮಾರ, ಮಲ್ಲಿಕಾರ್ಜುನ ಮುಗಳಿ, ಶಿವು ಜಿಡ್ಡಿಮನಿ, ಸಂಜು ಕಾಮಣ್ಣವರ, ಉಮೇಶ ಚುಳಕಿ, ಬಿ.ಬಿ.ಹುಲಿಗೊಪ್ಪ ಸೇರಿದಂತೆ ಹನಸಿ ಅಭಿಮಾನಿ ಬಳಗದವರು ಮತ್ತು ಇನ್ನುಳಿದವರು ಉಪಸ್ಥಿತರಿದ್ದರು.
(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)


Leave a Reply