Belagavi

ಲಿಂಗಾಯತ ಸಮಾಜ ಮುಖಂಡ ತಿಪ್ಪಣ್ಣ ಪಾಟೀಲ ನಿಧನ


ಬೆಳಗಾವಿ: ಸಮೀಪದ ಮಾರಿಹಾಳ ಗ್ರಾಮದ ಶ್ರೀ ಕೊಡಿ ಬಸವೇಶ್ವರ ಟ್ರಸ್ಟ ಅಧ್ಯಕ್ಷ, ಸಮಾಜ ಸೇವಕ ಪ್ರಗತಿಪರ ಕೃಷಿಕರಾಗಿದ್ದ ತಿಪ್ಪಣ್ಣ ಗೌಡಪ್ಪ ಪಾಟೀಲ (65) ಅನಾರೋಗ್ಯ ನಿಮಿತ್ಯ ಬುಧವಾರ ಮೃತರಾದರು.ಮೃತರಿಗೆ ಪತ್ನಿ, ಇಬ್ಬರು ಗಂಡು ಮಕ್ಕಳು, ಒರ್ವ ಹೆಣ್ಣು ಮಗಳು ಹಾಗೂ ಅಪಾರ ಬಂದು ಬಳಗ ಹೊಂದಿದ್ದಾರೆ. ಗ್ರಾಮದಲ್ಲಿ ಲಿಂಗಾಯತ ಸಮಾಜದ ಪ್ರತಿಯೊಂದು ಕಾರ್ಯದಲ್ಲಿ ತಮ್ಮನ್ನು ತಾವು ಸಮರ್ಪಿಸಿಕೊಂಡು ಬಡವ ಬಲ್ಲಿದ ಎನ್ನದೆ ಲಿಂಗಾಯತ ಸಮಾಜದ ಪ್ರತಿಯೊಬ್ಬರ ಕಾರ್ಯದಲ್ಲಿ ಪಾಲ್ಗೊಂಡು ಸೇವಾಮನೊಭಾವನೆ ಹೊಂದಿದ್ದ ಶ್ರೀಯುತರ ನಿಧನಕ್ಕೆ ಅಂಕಲಗಿ ಅಡವಿಸಿದ್ದೇಶ್ವರ ಶ್ರೀಗಳು, ಕಾರಂಜಿಮಠದ ಗುರುಸಿದ್ದ ಶ್ರೀಗಳು ಗ್ರಾಮದ ಗಣ್ಯರಾದ ವೀರಭದ್ರಪ್ಪ ಮಾದಮ್ಮನವರ, ಬಸಲಿಂಗಯ್ಯ ಪೂಜಾರ, ರಾಮಚಂದ್ರ ಚೌಹಾನ, ಈರಣ್ಣ ಮಲ್ಲನ್ನವರ, ಮಾಜಿ ಶಾಸಕ ಸಂಜಯ ಪಾಟೀಲ ಹಾಗೂ ಗ್ರಾಮಸ್ಥರು ಸಂತಾಪ ಸೂಚಿಸಿದ್ದಾರೆ ಕೊವಿಡ್ ನಿಯಮಗಳಿದ್ದ ಕಾರಣ ಅಂತಿಮ ಕ್ರೀಯೆಯಲ್ಲಿ ಪಾಲ್ಗೊಳ್ಳದಿದ್ದಕ್ಕೆ ಸಮಾಜದ ಜನ ಮನೆಯಲ್ಲಿಯೆ ಕಂಬನಿ ಮಿಡದಿದ್ದಾರೆ


Leave a Reply