Belagavi

ಅನಾಥ ಮಕ್ಕಳಿಗೆ ಉಚಿತ ಆಶ್ರಯ, ಶಿಕ್ಷಣ – ಗಂಗಾ ಮಾತಾಜಿ


ಕೂಡಲಸಂಗಮ; ಕೊರೊನಾ

ಸೋಂಕಿನಿಂದ ತಂದೆ, ತಾಯಿಯನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಕೂಡಲಸಂಗಮ

ಬಸವ ಧರ್ಮ ಪೀಠದ ವತಿಯಿಂದ ಕೂಡಲಸಂಗಮ, ಧಾರವಾಡ, ಬೆಂಗಳೂರು, ಬಸವ ಕಲ್ಯಾಣದಲ್ಲಿ ಉಚಿತ ಶಿಕ್ಷಣದೊಂದಿಗೆ ಊಟ, ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊರೊನಾ ಸೋಂಕಿಗೆ ನಿತ್ಯವು ಜನರು ಬಲಿಯಾಗುತ್ತಿದ್ದಾರೆ. ಅದೆಷ್ಟೋ ಜನ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಅಂತಹ ಮಕ್ಕಳಿಗೆ ಬಸವ ಧರ್ಮ ಪೀಠದ ಶಾಖೆಗಳಲ್ಲಿ ಉಚಿತ ಶಿಕ್ಷಣ ವಸತಿ ಸೌಲಭ್ಯಕ್ಕೆ ಅವಕಾಶ ಕಲ್ಪಿಸಿದೆ. ಹೆಚ್ಚಿನ ಮಾಹಿತಿಗೆ 9341819847 ಸಂಖ್ಯೆಗೆ ಸಂಪರ್ಕಿಸಿ ಎಂದಿದ್ದಾರೆ.
(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)


Leave a Reply