Belagavi

ಬಂಡಿಗಣಿ :ವಿಶೇಷ ಪೂಜೆ ನೈವೇದ್ಯ ಹಾಗೂ ಉಡಿ ತುಂಬುವ ಕಾರ್ಯಕ್ರಮ


ಬಂಡಿಗಣಿ : ಶ್ರೀ ಬಸವ ಗೋಪಾಲ ನೀಲಮಾಣಿಕ ಮಠ ಸುಕ್ಷೇತ್ರ ಬಂಡಿಗಣಿ ಮಠದಲ್ಲಿ ಶ್ರೀ ಬಸವೇಶ್ವರ, ಶ್ರೀಮಹಾಲಕ್ಷ್ಮೀ ದೇವಿ, ಶ್ರೀ ಕಾಳಿಕಾದೇವಿ ಹಾಗೂ ಸುಮಂಗಲಾ ತಾಯಿ ಅವರ ಹೆಸರಿನಲ್ಲಿ ದಾಸೋಹ ರತ್ನ ಚಕ್ರವರ್ತಿ ದಾನೇಶ್ವರ ಶ್ರೀಗಳು ವಿಶೇಷ ಪೂಜೆ ನೈವೇದ್ಯ ಹಾಗೂ ಮುತ್ತೈದೆ ಹೆಣ್ಣುಮಕ್ಕಳಿಗೆ ಉಡಿ ತುಂಬಿದರು.ಭಕ್ತರು ಸರಕಾರ ನಿಯಮ ಪಾಲಿಸಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿದ್ದರು. ದಾನೇಶ್ವರ ಪೂಜ್ಯರು ಮಾತನಾಡಿ ದೇಶದಲ್ಲಿ ಭಯಾನಕ ರೋಗ ಹಾಗೂ ಕಷ್ಟಗಳು ಬಂದಾಗ ಬಯಲಾಗಬೇಕಾದರೆ ಸದಾಕಾಲ ದೇವರ ಧ್ಯಾನ ದಾನ, ಪೂಜೆಯಂಥ ಪುಣ್ಯದ ಕಾರ್ಯ ಮಾಡುವದರಿಂದ ಮಾತ್ರ ಸಾಧ್ಯ. ಅದಕ್ಕಾಗಿ ಪಾಪಕರ್ಮಗಳನ್ನು ಮಾಡಿ ಕಷ್ಟಕ್ಕೆ ಬಲಿಯಾಗದೆ ಸತ್ಕರ್ಮಗಳನ್ನೂ ಮಾಡಿ ಪುಣ್ಯ ಪಡೆದುಕೊಳ್ಳಿರಿ. ಭಕ್ತರು ಸುಳ್ಳು ತುಡುಗ ಬಿಟ್ಟು ಸತ್ಯದ ಮಾರ್ಗದಲ್ಲಿ ಸಾಗಿ ಆತ್ಮಜ್ಞಾನಿಗಳಾದರೆ ಗುರುವಿಗೆ ಸಂತೋಷವಾಗುವುದು. ಭಕ್ತರ ಮೇಲೆ ಅನ್ಯಾಯ ನಡೆದರೆ ಗುರು ಸಹಿಸಿಕೊಳ್ಳಬಾರದು.ಗುರುವಿನ ಮೇಲೆ ಅನ್ಯಾಯ ನಡೆದರೆ ಭಕ್ತರು ಸೈನಿಕರಾಗಿ ಸಹಾಯ ಮಾಡಬೇಕು.ವಿಜ್ಞಾನಕ್ಕೆ ಮಿಗಿಲಾದದ್ದು ಆತ್ಮಜ್ಞಾನದಿಂದ ಪಡೆಯಲು ಸಾಧ್ಯ.ಸ್ವಾಮಿ ವಿಶ್ವೇಶ್ವರಾಯ, ಶಿವಾಜಿ ಮಹಾರಾಜರ, ಇಮ್ಮಡಿ ಪುಲಕೇಶಿಯಂಥ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಹೋಗಬೇಕು. ಗುರುವಿನ ಉಪದೇಶ ಪಡೆದು ಅನುಕೂಲ ಮಾಡಿಕೊಂಡು ಮರೆತು ಗುರುದ್ರೋಹಿಗಳಾಗಬಾರದು ಹಾಗೂ ಕಷ್ಟದಲ್ಲಿ ಸಹಾಯ ಮಾಡಿದವರನ್ನು ಮರೆಯಬಾರದು.ಅನ್ಯಾಯದ ಮಾರ್ಗದಿಂದ ಗಳಸಿದ ಆಸ್ತಿ ಅಂತಸ್ತು, ಅಧಿಕಾರ ಕ್ಷಣಿಕ ಸುಖ, ಶ್ರಮ ಪಟ್ಟು ದುಡಿದು ಸಂಪಾದನೆ ಮಾಡಿದ್ದು ಮನಸ್ಸಿಗೆ ನೆಮ್ಮದಿ ಹಾಗೂ ಅಜರಾಮರ ವಾಗಿ ಸುಖ ನೀಡುತ್ತದೆ.ತೋರಿಕೆಗೆ ಅಂಗದ ಮೇಲೆ ಲಿಂಗ ರುದ್ರಾಕ್ಷಿ ದರಿಸುವದಕ್ಕಿಂತ ಅಂಗದೊಳಗೆ ಲಿಂಗ ಸ್ಥಾಪನೆ ಮಾಡಿಕೊಂಡು ಮಾನವ ಜನ್ಮವನ್ನು ಉದ್ದಾರ ಮಾಡಿಕೊಳ್ಳಿರೆಂದು ಹೇಳಿದರು. ಇದೆ ಸಂದರ್ಭದಲ್ಲಿ ವಿಜಯ್ ವೇದಾಂಗ ಶ್ರೀಗಳು. ಕರೆಪ್ಪ ದಡ್ಡಿಮನಿ. ವೀಣಾ ಹೂಗಾರ ವಕೀಲರು. ಎಸ್ ಎಸ್ ಸವದಿ. ಸೇರಿದಂತೆ ಭಕ್ತರಿದ್ದರು.


Leave a Reply