Belagavi

ಕೋವಿಡ್ ಪರಿಶೀಲನಾ ಸಭೆ, ಟಾಸ್ಕ್ ಫೋರ್ಸ್ ಅಧಿಕಾರಿಗಳ ಸಭೆ


ಸವದತ್ತಿ: ಸ್ಥಳೀಯ ತಾಲೂಕ ಪಂಚಾಯತಿ ಸಭಾ ಭವನದಲ್ಲಿ ಕೋವಿಡ್ -19ಗೆ ಸಂಬಂಧಿಸಿದಂತೆ ಪರಿಶೀಲನಾ ಸಭೆಯಲ್ಲಿ ಟಾಸ್ಕ್ ಫೋರ್ಸ್ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಸಲಹೆ ಸೂಚನೆಗಳನ್ನು ನೀಡಲಾಯಿತು.

ಶಾಸಕ ಆನಂದ ಮಾಮನಿ ಮಾತನಾಡಿ ತಾಲೂಕಿನಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಕಡಿಮೆ ಯಾಗಿದೆ. ಗ್ರಾಮ ಮತ್ತು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳು ಇನ್ನು ಹೆಚ್ಚಿನ ಮಾಹಿತಿ ಕಲೆಹಾಕಿ ಎಲ್ಲರೂ ಕೋವಿಡ್ ವ್ಯಾಕ್ಸೀನ್ ಪಡೆಯುವಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ದಾನಿಗಳು ಕೊಡಮಾಡಿದ 5 ಆಕ್ಸಿಜನ್ ಕಾನ್ಸಟ್ರೇಟರ್ ಗಳನ್ನು ಸವದತ್ತಿ ತಾಲೂಕು ಆಸ್ಪತ್ರೆಗೆ ಹಸ್ತಾಂತರಿಸಲಾಯಿತು

ಈ ಸಂದರ್ಭದಲ್ಲಿ ಸವದತ್ತಿ ತಾಲೂಕಾ ದಂಡಾಧಿಕಾರಿ ಪ್ರಶಾಂತ ಪಾಟೀಲ್, ಯರಗಟ್ಟಿ ತಾಲೂಕ ದಂಡಾಧಿಕಾರಿ ಎಮ್.ಎನ್.ಮಠದ, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಯಶವಂತಕುಮಾರ, ತಾಲೂಕಾ ಆರೋಗ್ಯ ಅಧಿಕಾರಿ ಮಹೇಶ ಚಿತ್ತರಗಿ, ಮುಖ್ಯ ವೈದ್ಯಾಅಧಿಕಾರಿ ಡಾ: ಮಲ್ಲಗೌಡ, ತಾಲೂಕು ಪಂಚಾಯತ ಎ.ಡಿ ಸಂಗನಗೌಡ ಹಂದ್ರಾಳ, ಸಿಪಿಐ ಮಂಜುನಾಥ ನಡವಿನಮನಿ, ಅರಣ್ಯ ಅಧಿಕಾರಿ ಸವಿತಾ ನಿಬಂರಗಿ, ಸವದತ್ತಿ ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಚನ್ನಪ್ಪನವರ, ಮುನವಳ್ಳಿ ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ತಿಮ್ಮಾಣಿ, ಗ್ರೇಡ್2 ತಹಶೀಲ್ದಾರ ಎಮ್ ವಿ ಗುಂಡಪ್ಪಗೊಳ, ಕೃಷಿ ಇಲಾಖೆ, ಆಹಾರ ಇಲಾಖೆ, ಶಿಕ್ಷಣ ಇಲಾಖೆ, ಇನ್ನುಳಿದ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
(ವರದಿ ಈರಣ್ಣಾ ಹುಲ್ಲೂರ ಸವದತ್ತಿ)


Leave a Reply