Belagavi

ಸೇವಾ ನಿವೃತ್ತಿ ಹೊಂದಿದ ಬಿ.ಕೆ.ಜಟಗೊಂಡ ಬೀಳ್ಕೊಡುಗ


ಸವದತ್ತಿ : ಸೇವಾ ನಿವೃತ್ತಿ ಹೊಂದಿದ. ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಬಿ.ಕೆ.ಜಟಗೊಂಡ ಅವರನ್ನು ಇಲಾಖೆ ಸಿಬ್ಬಂದಿಗಳು ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳಿಂದ ಸನ್ಮಾನ ಮಾಡಿ ಬೀಳ್ಕೊಡಲಾಯಿತು.

ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಿಳ್ಕೋಡುಗೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ತಹಶೀಲ್ದಾರ ಪ್ರಶಾಂತ ಪಾಟೀಲ್ ಮಾತನಾಡಿ ಬಿ.ಕೆ‌.ಜಟಗೊಂಡ ಅವರು ವಯಸ್ಸಿನಲ್ಲಿ ಹಿರಿಯರಾದರೂ ಇಲಾಖೆಯ ಯಾವುದೆ ಕೆಲಸದ ವಿಷಯದಲ್ಲಿ ಯುವ ಉತ್ಸಾಹಿಗಳಂತೆ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸುತ್ತಿದ್ದು. ಪ್ರಾಮಾಣಿಕತೆ, ದಕ್ಷತೆಯನ್ನೂ ಸಹ ಅಳವಡಿಸಿಕೊಂಡು ಸೇವೆ ಸಲ್ಲಿಸಿದ್ದಾರೆ ಎಂದರು.

ನಂತರ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಯಶ್ವಂತಕುಮಾರ ಮಾತನಾಡಿ, ಬಿ ಕೆ ಜಟಗೊಂಡರವರು ಸರಳ,ಸಜ್ಜನಿಕೆಯ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದು ಎಷ್ಟೇ ಕಷ್ಟವಾದ ಕೆಲಸ ಬಂದರೂ ಸಹ ಸರಳವಾಗಿ ಕೆಲಸವನ್ನು ಮಾಡುವ ಗುಣ ಬೆಳೆಸಿಕೊಂಡಿದ್ದರು.

ಮುಂದಿನ ಅವರ ನಿವೃತ್ತಿ ಜೀವನವು ಸುಖಕರವಾಗಿ ಸಾಗಲಿ ಎಂದು ಹಾರೈಸಿದರು ಈ ಸಂದರ್ಭದಲ್ಲಿ ಗ್ರೇಡ್ 2 ತಹಶೀಲ್ದಾರ ಎಮ್ ವಿ ಗುಂಡಪ್ಪಗೋಳ, ಲೋಕೊಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಎಚ್.ಎ.ಕದ್ರಾಪೂರಕರ, ಶಿಕ್ಷಣಾಧಿಕಾರಿ ಎ.ಎಮ್.ಕಂಬೋಗಿ. ತಾಲೂಕು ವೈದ್ಯಾಧಿಕಾರಿ ಡಾ. ಮಹೇಶ ಚಿತ್ತರಗಿ, ಜಿಲ್ಲಾ ಪಂಚಾಯತ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಎಸ್.ಕೆ.ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಚನ್ನಪ್ಪನವರ .ಸಂಗನಗೌಡಾ ಹಂದ್ರಾಳ ಪಿಡಿಓ ಚಂದ್ರಶೇಖರ ಬಾರ್ಕಿ,ಪಶುವೈದ್ಯಾಧಿಕಾರಿ ಡಾ.ಪ್ರಮೋದ ಮೂಡಲಗಿ ಇಲಾಖೆ ಸಿಬ್ಬಂದಿಗಳಾದ ಎಸ ಜಿ ಶಿಂಗಾರಗೊಪ್ಪ .ಮಂಜುನಾಥ ಕರಿಶಿರಿ. ಸಾವಿತ್ರಿ ಮರಲಿಂಗನವರ, ಎಫ್. ವಿ ಬೊವಿ. ಉಪಸ್ಥಿತರಿದ್ದರು, ಪಿ ಎಫ್ ಗುಮ್ಮಗೋಳ ನಿರೂಪಿಸಿದರು.
(ವರದಿ ಈರಣ್ಣಾ ಹುಲ್ಲೂರ ಸವದತ್ತಿ)


Leave a Reply