Belagavi

ವಿಧಾನಸಭೆ ಉಪ ಸಭಾಪಕ ಆನಂದ ಮಾಮನಿಯವರಿಂದ ಅಲೆಮಾರಿ ಮತ್ತು ಕೊಳಚೆ ಪ್ರದೇಶದ ಬಡಕುಟುಂಬಗಳಿಗೆ ಅಕ್ಕಿ ಗೋಧಿ ಕಿಟ್ ವಿತರಣೆ


ಸವದತ್ತಿ : ಸಮಾಜಕಲ್ಯಾಣ ಇಲಾಖೆಯಿಂದ ಖರೀಧಿಸಲಾದ ಪಡಿತರ ಮತ್ತು ನಿಲಯಾರ್ಥಿಗಳ ಉಪಯೋಗಕ್ಕಾಗಿ ಖರೀಧಿಸಲಾದ ಪಡಿತರದಲ್ಲಿ
ಉಳಿಕೆಯಾದ ಅಕ್ಕಿ, ಗೋಧಿಯನ್ನು ಕಿಟ್ ರೂಪದಲ್ಲಿ ತಾಲೂಕಿನ ಎಲ್ಲ ಅಧಿಕಾರಿಗಳ ಸಮ್ಮುಖದಲ್ಲಿ ಶಾಸಕ ಹಾಗೂ ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ತಾ ಪಂಚಾಯತಿ ಮುಂಭಾಗದಲ್ಲಿ ಅಲೆಮಾರಿ ಹಾಗೂ ಕೊಳಚೆ ಪ್ರದೇಶದ ಜನರಿಗೆ, ಮತ್ತು ಬಡಕುಟುಂಬಗಳಿಗೆ ವಿತರಿಸಿದರು.

ಈ ಕುರಿತು ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಆರ್. ಕುಲಕರ್ಣಿಮಾತನಾಡಿ ಕೋವಿಡ್-19 ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳ ನಿರ್ವಹಣೆಯನ್ನು ಸ್ಥಗಿತಗೊಳಿಸಿದ್ದರಿಂದ ನಿಲಯಾರ್ಥಿಗಳ ಉಪಯೋಗಕ್ಕಾಗಿ ಖರೀದಿಸಲಾಗಿದ್ದ ಪಡಿತರ ಅಕ್ಕಿ ಗೋಧಿ ಉಳಿಕೆಯಾಗಿದ್ದು. ಅದನನ್ನು ಕಿಟ್ ರೂಪದಲ್ಲಿ ತಯಾರಿಸಿ ತಾಲೂಕಿನಲ್ಲಿರುವ ಅಲೆಮಾರಿ ಮತ್ತು ಕೊಳಚೆ ಪ್ರದೇಶದಲ್ಲಿ ನಿವಾಸಿಗಳಿಗೆ ಹಾಗೂ ಬಡಜನರಿಗೆ ಹಂಚಿಕೆ ಮಾಡಲು ಆದೇಶಿಸಿದ ಬೆನ್ನಲ್ಲೆ ಅವರ ಆದೇಶದಂತೆ ಹಂಚಿಕೆ ಕಾರ್ಯ ಕೈಗೊಂಡಿದ್ದೇವೆ ಎಂದರು.

ಈ ಸಂದರ್ಭದಲ್ಲಿ ತಹಶೀಲ್ದಾರ ಪ್ರಶಾಂತ ಬಿ ಪಾಟೀಲ, ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಯಶ್ವಂತಕುಮಾರ, ಗ್ರೇಡ್ -2 ತಹಶೀಲ್ದಾರ ಎಮ್ ದ್ವಿ ಗುಂಡಪ್ಪಗೋಳ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಆರ್.ಆರ್.ಕುಲಕರ್ಣಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಎಚ್.ಎ.ಕದಾಪೂರಕರ, ಶಿಕ್ಷಣಾಧಿಕಾರಿ ಎ.ಎಮ್.ಕಂಬೋಗಿ ತಾಲೂಕು ವೈದ್ಯಾಧಿಕಾರಿ ಡಾ.ಮಹೇಶ ಚಿತ್ತರಗಿ, ಜಿಲ್ಲಾ ಪಂಚಾಯತ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಎಸ್ ಕೆ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಚನ್ನಪನವರ, ಸಂಗನಗೌಡ ಹಂದ್ರಾಳ, ಪಿಡಿಓ ಚಂದ್ರಶೇಖರ ಬಾರ್ಕಿ, ಪಶುವೈದ್ಯಾಧಿಕಾರಿ ಡಾ.ಪ್ರಮೋದ ಮೂಡಲಗಿ ಸಿ
ಪಿ.ಐ ಮಂಜುನಾಥ ನಡುವಿನಮನಿ ಉಪಸ್ಥಿತರಿದ್ದರು.
(ವರದಿ ಈರಣ್ಣಾ ಹುಲ್ಲೂರ ಸವದತ್ತಿ)


Leave a Reply