Koppal

ಹೊಲಕ್ಕೆ ಎಮ್ಮೆ ಮೇಯಿಸಲು ಹೋದ ಯುವಕ ನೀರುಪಾಲು


ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಬಳೂಟಗಿ ಗ್ರಾಮದ ಅಮರೇಶ ತಂದಿ ಸಂಗಪ್ಪ ತಟ್ಟಿ ವಯಸ್ಸು ೧೮ ಹೊಲಕ್ಕೆ ಎಮ್ಮೆ ಮೇಯಿಸಲು ಹೋಗಿದ್ದಾನೆ ಆಗ ಪಕ್ಕದ ಗ್ರಾಮದ ಶಿರಗುಂಪಿ ಸೀಮಾದಲ್ಲಿನ ಕಲ್ಲಹಳ್ಳಕ್ಕೆ ಅಡ್ಡಲಾಗಿ ಕಟ್ಟಿದ ಚಕ್ ಡ್ಯಾಂನಲ್ಲಿ ಮಧ್ಯಾಹ್ನ ೧ ಗಂಟೆಯ ಸುಮಾರಿಗೆ ನೀರು ಕುಡಿಸಲು ಹೋಗಿದ್ದಾನೆ ಎಮ್ಮೆಗೆ ನೀರು ಕುಡಿಸುವ ಸಂದರ್ಭದಲ್ಲಿ ಕಾಲು ಜಾರಿ ನೀರಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ.

ಅಕ್ಕ ಪಕ್ಕದ ಜಮೀನಿನಲ್ಲಿ ಯಾರು ಇಲ್ಲದ ಕಾರಣ ಈತನಿಗೆ ಈಜುಲು ಬರದಕಾರಣ ಮತ್ತು ಸರಿಯಾದ ಸಮಯಕ್ಕೆ ಯಾರು ನೋಡ ಕಾರಣ ಇತನು ಸ್ಥಳದಲ್ಲೇ ಮೃತಪಟ್ಟಿರುತ್ತಾನೆಂದು ಕುಷ್ಟಗಿ ಪೊಲೀಸರು ತಿಳಿಸಿರುತ್ತಾರೆ.

ಮತ್ತು ಪ್ರಕರಣವನ್ನು ದಾಖಲಿಸಿಕೊಂಡು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

ಆರ್ ಶರಣಪ್ಪ ಗುಮಗೇರಾ.


Leave a Reply