Koppal

ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಮೊದಲು ತನ್ನ ಸಾಧನೆ ಬಗ್ಗೆ ತೋರಿಸಲಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಟೀಕೆ


ಕುಷ್ಟಗಿ:ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಮೊದಲು ಕುಷ್ಟಗಿ ತಾಲೂಕಿನಲ್ಲಿ ಯಾವ ಅಭಿವೃದ್ಧಿ ಕೇಲಸ ಮಾಡಿ ಸಾಧನೆ ಮಾಡಿದ್ದಾರೆ ತೋರಿಸಲಿ ನಂತರ ಬಿಜೆಪಿ ಪಕ್ಷದ ಸಾಧನೆ ಬಗ್ಗೆ ಮಾತನಾಡಲಿ ಎಂದು ಮಾಜಿ ಶಾಸಕ ಹಾಗೂ ಕೊಪ್ಪಳ ಜಿಲ್ಲಾ ಬಿಜೆಪಿ ಅಧ್ಯಕ್ಷ ದೊಡ್ಡನಗೌಡ ಪಾಟೀಲ ಶಾಸಕರನ್ನು ಟೀಕೆ ಮಾಡಿದರು.

ಕುಷ್ಟಗಿ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಉಮೇಶ ಯಾದವ್ ಇವರ ನೇತೃತ್ವದಲ್ಲಿ ಬಡವರಿಗೆ ಆಹಾರ ಕಿಟ್ ಮತ್ತು ತರಕಾರಿ ಕಿಟ್ ವಿತರಣೆ ಮಾಡಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಶಾಸಕ ಅಮರೇಗೌಡ್ರಗೆ ಇಂತಹ‌ ಸಮಯದಲ್ಲಿ ರಾಜಕೀಯ ಮಾಡುವದನ್ನು ಬಿಟ್ಟು ಜನರ ಸೇವೆ ಮಾಡಲಿ ಈ ರಾಜ್ಯದ ಜನತೆಗೆ ಮತ್ತು ಈ ದೇಶದ ಜನತೆಗೆ ಬಿಜೆಪಿ ಸಿದ್ಧಾಂತ, ನರೇಂದ್ರ ಮೋದಿಯವರ ಸಾಧನೆ ಏನು ಅನ್ನುವದು ಗೊತ್ತು ಒಬ್ಬ ಶಾಸಕರ ಮಾತು ಕೇಳಿ ಬಿಜೆಪಿ ಪಕ್ಷ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಪಾಠ ಕಲಿಯುವಂತ‌ ಅಗತ್ಯವಿಲ್ಲ ಎಂದರು.ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ನೂರಕ್ಕೆ ನೂರರಷ್ಟು ಉತ್ತಮ ಕೆಲಸ ಮಾಡುತ್ತಿದೆ.ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷರು, ಪುರಸಭೆ ಅಧ್ಯಕ್ಷ ಜಿ.ಕೆ ಹಿರೇಮಠ, ಜಿಲ್ಲಾ ಪಂಚಾಯತ ಸದಸ್ಯ ಕೆ.ಮಹೇಶ, ಬಿಜೆಪಿ ಪಕ್ಷದ ತಾಲೂಕು ಅಧ್ಯಕ್ಷ ಬಸವರಾಜ ಹಳ್ಳೂರ, ಚಂದ್ರಕಾಂತ ವಡಗೇರಿ ಸೇರಿದಂತೆ ಬಿಜೆಪಿ ಪಕ್ಷದ ಹಲವಾರು ಮುಖಂಡರು ಉಪಸ್ಥಿತರಿದ್ದರು.

ಆರ್ ಶರಣಪ್ಪ‌ ಗುಮಗೇರಾ.


Leave a Reply