Koppal


ಕುಷ್ಟಗಿ:ಪೆಟ್ರೋಲ್ ಮತ್ತು ಡೀಸೆಲ್ ಹಾಗೂ ಆಹಾರಪದಾರ್ಥಗಳ ಬೆಲೆ ಏರಿಕೆಯ ಬಗ್ಗೆ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ರಾಜ್ಯ ಮತ್ತು ಕೇಂದ್ರ ಬಿಜೆಪಿ ಸರಕಾರದ ವಿರುದ್ಧ ಕೆಂಡಮಂಡಲವಾದರು.

ಕೇಂದ್ರ ಬಿಜೆಪಿ ಸರ್ಕಾರವು 5 ರಾಜ್ಯಗಳ ಚುನಾವಣೆ ಮುಗಿದ ಮೇಲೆ ಸರಾಸರಿ ಹದಿನಾರು ಬಾರಿ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಸಿದ್ದಾರೆ ಆದರೆ 40 ದಿನಗಳ ಕಾಲ ಚುನಾವಣೆ ಸಮಯದಲ್ಲಿ ನಯಾಪೈಸೆ ಏರಿಸದ ಈ ಸರ್ಕಾರ ಏಕಾಏಕಿ ಚುನಾವಣೆ ಮುಗಿದ ತಕ್ಷಣವೇ ಏರಿಸಿದ್ದಾರೆ ಎಂದರೆ ಇದರ ಅರ್ಥವನ್ನ ರಾಜ್ಯದ ಜನತೆ ಮತ್ತು ಈ ನಮ್ಮ ರಾಜ್ಯದ ಜನತೆ ತಿಳಿದುಕೊಳ್ಳಬೇಕಾಗಿದೆ ಎಂದರು.

ಬಿಜೆಪಿಯನ್ನು ಆಳುವವರು ಮತ್ತು ಬಿಜೆಪಿಯಲ್ಲಿರುವವರು ಜಾಣ ಕುರುಡರಂತೆ ಇದ್ದಾರೆ

ಆದರೆ ಜನಸಾಮಾನ್ಯರಿಗೆ ಇದೆಲ್ಲ ತಿಳಿದಿಲ್ಲ ಎಂದುಕೊಂಡಿಲ್ಲ ಎಂದು‌ ತಿಳಿದರೆ ಇದು ಈ ಬಿಜೆಪಿ‌ ಸರಕಾರಕ್ಕೆ ಮುಂದೆ ತಿಳಿಯುತ್ತದೆ.

ಈ ದೇಶವನ್ನು ಅಚ್ಚೇ ದಿನ್ ಮಾಡುತ್ತೇವೆ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಇವರು ೭ ವರ್ಷದಲ್ಲಿ ಇವರು ಮಾಡಿದ ಸಾದನೆ ಕೆಲಸ ಸೂನ್ಯ ಕೆಲಸವಾಗಿದೆ. ಅಲ್ಲಿ ಇದೇ ಈ ಸರಕಾರದ ಅಚ್ಚೇದಿನ್ ಎಂದು ಕೇಂದ್ರ ಸರಕಾರವನ್ನು ಟೀಕಿಸಿದರು.

ಇದೇ ಸಂದರ್ಭದಲ್ಲಿ. ಮಾಜಿ ಶಾಸಕ ಹಸೇನಸಾಬ ದೋಟಿಹಾಳ. ದೇವಿಂದ್ರಪ್ಪ ಬಳೂಟಿಗಿ ಸೋಮಶೇಖರ ವೈಜಾಪುರ. ಶಾಸಕರ ಪುತ್ರರಾದ ದೊಡ್ಡ ಬಸನಗೌಡ ಪಾಟೀಲ್.ಮುಖಂಡರಾದ
ಮೋಹಿನುದ್ದಿನ್ ಮುಲ್ಲಾ.
ಮಹೇಶ್ ಕೋಳೂರು ಒಂದನೇ ವಾಡ್೯ನ ಪುರಸಭೆ ಸದಸ್ಯೆ ಗೀತಾ ಕೋಳೂರ

ನಾಗರಾಜ್ ಭೋವಿ ಮತ್ತು ಸಮಸ್ತ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

ಆರ್ ಶರಣಪ್ಪ ಗುಮಗೇರಾ.


Leave a Reply