Koppal

ಕುಷ್ಟಗಿ ತಾಲೂಕಿನಾದ್ಯಾಂತ ೧೦ ಸಾವಿರ ಆಹಾರ ಕಿಟ್ ವಿತರಣೆ


ಕುಷ್ಟಗಿ:ಕುಷ್ಟಗಿ ಪಟ್ಟಣ ಸೇರಿದಂತೆ ತಾಲೂಕಿನಲ್ಲಿನ ಎಲ್ಲಾ ಕಡುಬಡವರಿಗೆ ಸುಮಾರು ೧೦ ಸಾವಿರ ಆಹಾರ ಕಿಟ್ ಕೊಡಲು ನಿರ್ಧಾರ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ.

ಮಾಹಾ ಮಾರಿ ಕೊವೀಡ್-೧೯ ಕೊರೋನಾ ವೈರಸ್ ನಿಂದ ಇಡೀ ದೇಶ ಮತ್ತು ಜಗತ್ತು ಆರ್ಥಿಕ ಪರಿಸ್ಥಿತಿಯಲ್ಲಿ ಇನ್ನಡೆ ಸಾದಿಸುವ ಸಂದರ್ಭದಲ್ಲಿ ನಾನು ಮತ್ತು ನಮ್ಮ ಕಾಂಗ್ರೆಸ್ ಪಕ್ಷದ ಹಿರಿಯರು ಹಾಗೂ ಮುಖಂಡರು ಸೇರಿ ಚರ್ಚೆ ಮಾಡಿ ಕುಷ್ಟಗಿ ತಾಲೂಕಿನ ಪ್ರತಿ ಹಳ್ಳಿಗಳಲ್ಲಿ ಮತ್ತು ಕುಷ್ಟಗಿ ಪಟ್ಟಣದಲ್ಲಿ ಕಡುಬಡವರು ಯಾರು ಇದ್ದಾರೆ ಹಾಗೂ ಯಾವ ಬಡವರಿಂದ ಹಣಕೊಟ್ಟು ಒಂದು ವಸ್ತು ತೆಗೆದುಕೊಳ್ಳಲು ಸಾದ್ಯವಿಲ್ಲ‌ವೋ ಅಂತಹ ಬಡವರನ್ನು ಗುರಿತಿಸಿ ಇವತ್ತು ನಮ್ಮ ಪಕ್ಷದ ವತಿಯಿಂದ ವೈಯಕ್ತಿಕವಾಗಿ ನಾನು ಆಹಾರ ಧಾನ್ಯದ ಕಿತ್ತನು ಕೊಡಲು ನಿರ್ಧರಿಸಲಾಗಿದೆ ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಹೇಳಿದರು.

ನಂತರ ಕುಷ್ಟಗಿ ಪಟ್ಟಣದ ವಾರ್ಡ ನಂಬರ ೧ರಲ್ಲಿನ ಗುಡಿಸಲು ನಿವಾಸಿ ಸ್ಥಳಕ್ಕೆ ತೆರಳಿ ಕಿಟನ್ನು ವಿತರಣೆ ಮಾಡಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು ನೌಕರಿ ಮಾಡುವಂತ ಕುಟುಂಬಕ್ಕೆ ಮತ್ತು‌ ಆರ್ಥಿಕ ಪರಿಸ್ಥಿತಿಯಲ್ಲಿ ಯಾರು ಚನ್ನಾಗಿ ಇರುತ್ತಾರೆ ಅಂತವರನ್ನ ಹೊರತು ಪಡಿಸಿ ಯಾರು ಕಡುಬಡವರು ಇರುತ್ತಾರೆ ಅಂತವರಿಗೆ ಮಾತ್ರ ಆಹಾರ ಧಾನ್ಯದ ಕಿಟನ್ನ ವಿತರಣೆ ಮಾಡುತ್ತಿದ್ದೇವೆ ಈ ಸದ್ಯ ಕುಷ್ಟಗಿ ಪಟ್ಟಣದ ಗುಡಿಸಲುವಾಸಿ ನಿವಾಸಿಗಳಿಗೆ ಮತ್ತು ನಿರ್ಗತಿಕ ಕಡುಬಡವರಿಗೆ ಸುಮಾರು 3500 ಕಿಟನ್ನು ವಿತರಣೆ ಮಾಡುತ್ತಿದ್ದೇವೆ ಇನ್ನು ಉಳಿದ 6500 ಕಿಟ್ ಸಿದ್ದತೆಗೊಂಡ ನಂತರ ತಾಲೂಕಿನಲ್ಲಿ ಇರುವಂತ ಎಲ್ಲಾ ಆರ್ಥಿಕ ಪರಿಸ್ಥಿತಿಯಲ್ಲಿ ಅತ್ಯಂತ ತೀರಾ ಹಿಂದುಳಿದಿರುವಂತಹ ಕಡುಬಡವರನ್ನು ಗುರುತಿಸಿ ನಮ್ಮ ಪಕ್ಷದ ಕಾರ್ಯಕರ್ತರು ಆ ಪಕ್ಷ ಮತ್ತು ಇದು ನಮ್ಮ ಪಕ್ಷ ಅನ್ನದೆ ಪಕ್ಷಾತೀತವಾಗಿ ತಾಲೂಕಿನ ಎಲ್ಲಾ ಕಡುಬಡವರಿಗೆ ಆಹಾರ ಧಾನ್ಯದ ಕಿಟನ್ನು ವಿತರಣೆ ಮಾಡುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಹಸನಸಾಬ ದೋಟಿಹಾಳ, ಕುಷ್ಟಗಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ದೇವೇಂದ್ರಪ್ಪ ಬಳೂಟಗಿ, ಪುರಸಭೆ ಸದಸ್ಯರಾದ ಮೈನುದ್ದೀನ್ ಮುಲ್ಲಾ, ವಸಂತ ಮೇಲಿನಮನಿ, ಗೀತಾ ಮಹೇಶ ಕೊಳ್ಳೂರ, ಮೈಬುಸಾಬ ಕಮ್ಮಾರ, ಚಿರಂಜೀವಿ ಹಿರೇಮಠ, ಕಾಂಗ್ರೆಸ್ ಮುಖಂಡರಾದ ಯಮನೂರ ಸಂಗಟಿ, ಮಹೇಶ ಕೊಳ್ಳೂರ, ಇಮಾಸಾಬ ಗರಡಿಮನಿ, ಎಂ.ಡಿ ಯುಸುಫ್, ನಿಜಾಮ್ ಕಪಾಲಿ ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.


Leave a Reply