Belagavi

ಒಂದೆ ಹಗ್ಗದಿಂದ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣ



ಸವದತ್ತಿ : ಮದುವೆ ಆದ ಮೇಲೂ ಪ್ರಣಯ ಪ್ರಸಂಗ ಮುಂದುವರಿದಿದೆ. ಆದರೆ ಕೊನೆಗೂ ಆಗಿದ್ದೇನು ಗೊತ್ತೆ ?

ಇಬ್ಬರಿಗೂ ತಾವಿಬ್ಬರೂ ದಂಪತಿಗಳಾಗಿಯೇ ಈ ಜೀವನದಲ್ಲಿ ಇರಬೇಕಿತ್ತು ಎಂಬ ವೇದನೆ ಮುಂದುವರಿದಿದೆ. ಇಬ್ಬರೂ ಇನ್ನಿಲ್ಲದಂತೆ ಯಾತನೆ ಅನುಭವಿಸಿದ್ದಾರೆ. ಸಾಲದೆಂಬಂತೆ ಆಗಾಗ ಇಬ್ಬರೂ ಯಾರಿಗೂ ಗೊತ್ತಿಲ್ಲದಂತೆ ರಹಸ್ಯವಾಗಿ ಭೇಟಿಯಾಗಿ ದೈಹಿಕ ಸಂಪರ್ಕವನ್ನು ಹೊಂದುತ್ತಿದ್ದರು. ಕೊನೆಗೂ ಒಂದು ನಿರ್ಧಾರಕ್ಕೆ ಬಂದಿದ್ದಾರೆ.

ತಾವಿಬ್ಬರೂ ಒಂದಾಗಿರದ ಈ ಜೀವನ ವ್ಯರ್ಥ. ಇಬ್ಬರು ಒಟ್ಟಿಗೆ ಸಾಯೋಣ ಎಂಬ ಕೆಟ್ಟ ಯೋಜನೆಗೆ ಮುಂದಾಗಿದ್ದಾರೆ. ಅದರ ಪರಿಣಾಮ ಇಬ್ಬರು ಗಟ್ಟಿ ಮನಸ್ಸು ಮಾಡಿ ಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇದೀಗ ಬೆಳಕಿಗೆ ಬಂದಿದೆ.

ಮದುವೆ ನಂತರವೂ ಅನೈತಿಕ ಸಂಬಂಧ ಹೊಂದಿದ್ದ ಜೋಡಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಸವದತ್ತಿ ತಾಲೂಕಿನ ಸಿಂದೋಗಿ ಗ್ರಾಮದಲ್ಲಿ.

ಪಂಚಪ್ಪಾ ಕಣವಿ(25), ಸಕ್ಕೂಬಾಯಿ ಕರಿಗಾರ (23) ಮೃತರು. ಪಂಚಪ್ಪ ಹಾಗೂ ಸಕ್ಕೂಬಾಯಿ ಐದು ವರ್ಷಗಳಿಂದ ಪ್ರೀತಿಸುತ್ತಿದ್ದರು.

ಪ್ರೇಮ ವಿವಾಹಕ್ಕೆ ಉಭಯ ಕುಟುಂಬಸ್ಥರು ಅವಕಾಶ ನೀಡಿಲ್ಲ. ನಾಲ್ಕು ವರ್ಷಗಳ ಹಿಂದೆ ಪಂಚಪ್ಪ ಬೇರೆ ಯುವತಿ ಜೊತೆಗೆ ವಿವಾಹವಾದ.

ವಿವಾಹದ ನಂತರವೂ ಸಕ್ಕೂಬಾಯಿ ಜೊತೆಗೆ ಸಲುಗೆ ಹೊಂದಿದ್ದ. ಗೌಪ್ಯವಾಗಿ ಇಬ್ಬರು ಆಗಾಗ ಭೇಟಿ ಆಗುತ್ತಿದ್ದರು. ಕಳೆದ ತಿಂಗಳು ಸಕ್ಕೂಬಾಯಿಗೆ ಬೇರೆ ಹುಡುಗನ ಜೊತೆಗೆ ವಿವಾಹ ಆಗಿದೆ.

ತಿಂಗಳು ಕಳೆದರೂ ಸಕ್ಕೂಬಾಯಿ ಗಂಡನ ಮನೆಗೆ ಹೋಗಿರಲಿಲ್ಲ.

ಪಂಚಪ್ಪ ಹಾಗೂ ಸಕ್ಕೂಬಾಯಿ ಮದುವೆ ನಂತರವೂ ಅನೈತಿಕ ಸಂಬಂಧ ನಡೆಸಿದ್ದರು. ಗಂಡನ ಮನೆಗೆ ಹೋದರೆ ಇಬ್ಬರೂ ಬೇರೆ ಆಗುತ್ತೇವೆ ಎಂದು ಮನನೊಂದು ಆತ್ಮಹತ್ಯೆಯ ನಿರ್ಧಾರ ಮಾಡಿದ್ದಾರೆ. ಸಿಂದೋಗಿ ಗ್ರಾಮದ ಹೊರವಲಯದ ಜಮೀನನಲ್ಲಿರುವ ಮಾವಿನ ಮರಕ್ಕೆ ಒಂದೇ ಹಗ್ಗದಲ್ಲಿ ನೇಣು ಬಿಗಿದು ಈ ಜೋಡಿ ಆತ್ಮಹತ್ಯೆ ಮಾಡಿಕೊಂಡಿದೆ.

ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ವರದಿ ಈರಣ್ಣಾ ಹುಲ್ಲೂರ ಸವದತ್ತಿ)


Leave a Reply