Uncategorized

ಜಿಲ್ಲಾಡಳಿತದ ಆದೇಶಗಳು ಜನರ ಹಿತಕ್ಕಾಗಿವೆ.- ಮಾಜಿ ಮೇಯರ್‌ ಎನ್.ಬಿ.ನಿರ್ವಾಣಿ ಅಭಿಮತ


ಬೆಳಗಾವಿ. ೦೩.-  ಜಗತ್ತಿಗೆ ಅಪ್ಪಳಿಸಿ ಲಕ್ಷಾಂತರ ಜನರ ಜೀವ ಕಸಿದ ಈ ಮಹಾಮಾರಿ ಕೊರೊನಾ ಹೊಡದೋಡಿಸಲು ನಾವೆಲ್ಲ ಜಾಗೃತರಾಗಬೇಕು.  ಸರ್ಕಾರ ಈ ದಿಸೆಯಲ್ಲಿ ಕೋಟ್ಯಾಂತರ ಹಣ ವ್ಯಯಿಸುತ್ತಿದ್ದು , ಇದರ ನಿರ್ಮೂಲನೆಗೆ ನಮ್ಮೆಲ್ಲರ ಸಹಕಾರ  ಅತ್ಯವಶ್ಯ ವಾಗಿದೆ. ಜಿಲ್ಲಾಡಳಿತದ ಆದೇಶಗಳು ಜನರ ಹಿತಕ್ಕಾಗಿವೆಯಲ್ಲದೆ ಅವುಗಳ ಪಾಲನೆ ನಮ್ಮೆಲ್ಲರ ಆದ್ಯ ಕರ್ತವ್ಯ  ಎಂದು ನಗರದ  ಕುಂದರನಾಡ ರಹವಾಸಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ, ಮಾಜಿ ಮಹಾಪೌರ ಎನ್.ಬಿ.ನಿರ್ವಾಣಿ ಹೇಳಿದರು. ಅವರು ಗುರುವಾರ ರಾಮತೀರ್ಥನಗರದ ಸಮುದಾಯ ಭವನದಲ್ಲಿ  ಬಡ ರಹವಾಸಿಗಳಿಗೆ ಮಾಸ್ಕ್ ವಿತರಿಸಿ ಮಾತನಾಡಿದರು.
ಮಹಾಮಾರಿಯಿಂದಾಗಿ ಹಳ್ಳಿಯಿಂದ ಮಕ್ಕಳ ವಿದ್ಯಾಭ್ಯಾಸ ಕ್ಕಾಗಿ ಬಂದು ನಗರದಲ್ಲಿ ವಾಸವಾಗಿರುವ ಜನರು ಕೃಷಿಗಾರಿಕೆಗೆ ತಮ್ಮ ಹಳ್ಳಿಗಳಿಗೆ ಹೋಗಲು  ಜನ ಹಿಂದೇಟು ಹಾಕುತ್ತಿದ್ದು ಬೇಗನೇ ಈ ಮಹಾಮಾರಿ ಜಗತ್ತಿನಿಂದ ತೊರೆದೋಗುವಂತೆ ಭಗವಂತ ಕೃಪೆದೋರಲಿ ಎಂದರಲ್ಲದೆ,   ಎಲ್ಲ ಸದಸ್ಯರು ತಮ್ಮ ವಾರ್ಡಗಳ ಜನರಿಗೆ ಮಾಸ್ಕ್ ಗಳನ್ನು ವಿತರಿಸಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ  ಬೆಳಗಾವಿ ವನ್ಯಜೀವಿ, ಪರಿಸರ ಅಭಿವೃದ್ಧಿ ವೇದಿಕೆಯ ಅಧ್ಯಕ್ಷ ಸುರೇಶ ಉರಬಿನಹಟ್ಟಿ, ಕುಂದರನಾಡ ಸಂಘದ ಸಂಘಟನಾ ಕಾರ್ಯದರ್ಶಿ ಐ.ಬಿ.ನಿರ್ವಾಣಿ, ಬಾಳಪ್ಪಾ ರಾಯಣ್ಣವರ, ಎಸ್.ಬಿ.ಪಾಟೀಲ, ಎಸ್.ಜಿ.ವಾರೀಮನಿ, ಬಾಬು ನಿರ್ವಾಣಿ, ಪರಶುರಾಮ ಬುಗಡೀಕಟ್ಟಿ ಸೇರಿದಂತೆ  ಇತರ ಪದಾಧಿಕಾರಿಗಳು, ರಹವಾಸಿಗಳು,  ಉಪಸ್ತಿತರಿದ್ದರು.

Leave a Reply