Belagavi

ಹಳ್ಳಿಯ ಬಡಜನರ ದುಡಿಯುವ ವರ್ಗಕ್ಕೆ 10ಸಾವಿರ ರೂಗಳ ಆರ್ಥಿಕ ನೆರವು ನೀಡಿ” ಎಂದು ಸರ್ಕಾರಕ್ಕೆ ಪತ್ರಕರ್ತರು ಹಾಗೊ ಸಮಾಜ ಸೇವಕ ಬಸವರಾಜ.ಉಪ್ಪಾರಟ್ಟಿ ಮನವಿ


ಗೋಕಾಕ: ಕರೋನ 2ನೇಯ ಅಲೆಯಿಂದ ಸಾಮಾನ್ಯ ಜನರು ದೊಡ್ಡ ಸಂಕಷ್ಟಕ್ಕೆ ಸಿಲಿಕಿಕೋಂಡತಾಗಿದೆ.ಈಗ ಕರೋನ ಹಾವಳಿಯಿಂದ ಜನರಿಗೆ ದಿಕ್ಕು ತೋಚದೆ ಕಂಗಾಲಾಗಿ ಕುಳಿತಿದ್ದಾರೆ.ಈ ಸಮಯದಲ್ಲಿ ನಮ್ಮ ಮುಖ್ಯ ಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪನವರು ಒಂದು ಪ್ಯಾಕೇಜ್ ಬಿಡುಗಡೆ ಮಾಡಿದರು ಅದು ಎಲ್ಲರಿಗೂ ತಲುಪಲು ಸಾದ್ಯವೆ ಇಲ್ಲಾ .

ಎಲ್ಲರಿಗೂ ರೇಷನ್ ಕಾರ್ಡಗಳ ಆಧಾರದ ಮೇಲೆ 10ಸಾವಿರ ರೂಪಾಯಿಗಳು ಬಿಡುಗಡೆ ಮಾಡಿದ್ದರೆ ಸ್ವಲ್ಪ ಮಟ್ಟಿಗೆ ಸಹಾಯ ಮಡಿದಂತಾಗುತ್ತದೆ.ಮುಖ್ಯ ಮಂತ್ರಿಗಳು ಈ ರೀತಿ ಮಾಡಿದ್ದರೆ ಸಾಮಾನ್ಯ ಜನರಿಗೆ ತಲುಪುತ್ತದೆ. ಮತ್ತೆ ಯಾವುದೇ ರೀತಿಯಿಂದಾದ್ದರು ಸರಿ ಸಾಮಾನ್ಯ ಜನರಿಗೆ ತಲುಪಬೇಕು ಅಷ್ಟೆ ನಮ್ಮ ಉದ್ದೇಶ.

ಜನರು ಕರೋನ ಸಂಕಷ್ಟದಿಂದ ಮನೆಯಿಂದ ಹೊರಗೆ ಬರಲು ಆಗದೆ ಕೆಲಸ ಕಾರ್ಯ ಇಲ್ಲದೆ ಮನೆಯಲ್ಲಿ ಇರುವುದ್ದರಿಂದ ಆದಷ್ಟು ಬೇಗನೆ ಮತ್ತೊಂದು ಪ್ಯಾಕೇಜ್ ಬಿಡುಗಡೆ ಮಾಡುವಂತೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

(ವರದಿ ಈರಣ್ಣಾ ಹೂಲ್ಲೂರ)


Leave a Reply