New Delhi

ಆರ್ ಬಿಐ ಹಣಕಾಸು ನೀತಿ ಪ್ರಕಟರೆಪೋ, ರಿಸರ್ವ್ ರೆಪೋ ಬದಲಾವಣೆ ಇಲ್ಲ


ನವದೆಹಲಿ: ರೆಪೋ, ರಿಸರ್ವ್ ರೆಪೋ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.
ಹಣಕಾಸು ನೀತಿ ಪ್ರಕಟಿಸಿದ ಶಕ್ತಿಕಾಂತ್ ದಾಸ್, ಶೇಕಡಾ 4ರಲ್ಲೇ ರೆಪೋ ದರ ಮುಂದುವರೆಯಲಿದೆ. ರಿಸರ್ವ್ ರೆಪೋ ದರ ಶೇ.3.35ರಲ್ಲೇ ಮುಂದುವರೆಯಲಿದೆ. ಬ್ಯಾಂಕ್ ಸಾಲದ ಬಡ್ಡಿ ದರದಲ್ಲಿ ಹಾಗೂ ಗೃಹ ಸಾಲದ ಬಡ್ಡಿದರದಲ್ಲೂ ಬದಲಾವಣೆ ಇರುವುದಿಲ್ಲ ಎಂದು ತಿಳಿಸಿದರು.

2021-22ರಲ್ಲಿ ಜಿಡಿಪಿ ದರ ಶೇ.9.5ರಷ್ಟಾಗುವ ಅಂದಾಜಿದೆ. 2022ರಲ್ಲಿ ಚಿಲ್ಲರೆ ಹಣದುಬ್ಬರ ಶೇ.5.1ರಷ್ಟಾಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.


Leave a Reply