karanataka

ಬೆಳಗಾವಿ : ಬಿಮ್ಸಗೆ ಆಡಳಿತಾಧಿಕಾರಿಯಾಗಿ ಅದಿತ್ಯ ಅಮ್ಲಾನ ಬಿಸ್ವಾಸ ನೇಮಕ-ಸಿಎಂ


ಬೆಳಗಾವಿ : ಸಮಸ್ಯೆಗಳ ಆಗರವಾಗಿದ್ದ ಬೆಳಗಾವಿ ಬಿಮ್ಸಗೆ ಬೆಳಗಾವಿ ಪ್ರಾದೇಶಿಕ ಆಯುಕ್ತರಾಗಿರುವ ಹಿರಿಯ ಐಎಎಸ್ ಅಧಿಕಾರಿ ಅದಿತ್ಯ ಅಮ್ಲಾನ ಬಿಸ್ವಾಸ್ ಅವರನ್ನು ನೇಮಕ ಮಾಡಿದ್ದಾಗಿ ಮುಖ್ಯಮಂತ್ರಿ
ಯಡಿಯೂರಪ್ಪ ಅವರಿಂದು ಘೋಷಣೆ ಮಾಡಿದ್ದಾರೆ.
ಹಲವು ವರ್ಷಗಳಿಂದ ಯಾವೂದೇ ರೀತಿಯ ಸೂಕ್ತ ವ್ಯವಸ್ಥೆ ಇಲ್ಲದೇ,ಜಿಲ್ಲಾ ಬಿಮ್ಸ ಆಸ್ಪತ್ರೆಗೆ ಬರುವ ರೋಗಿಗಳು ಪರದಾಡು ವಂತಾಗಿತ್ತು.ಅಲ್ಲಿಗೆ ಬರುವ ಬಡ ರೋಗಿಗಳಿಗೆ ಚಿಕಿತ್ಸೆ ಸಿಗದೇ ಅವರು ಖಾಸಗಿ ಆಸ್ಪತ್ರೆಗಳಿಗೆ ತೆರಳಬೇಕಾಗುತ್ತಿತ್ತು ಅಥವಾ ಅವರನ್ನು ಅಲ್ಲಿಂದ ಸಾಗಹಾಕಲಾಗುತ್ತಿತತ್ತು ಎಂದು ರೋಗಿಗಳ ಸಂಬAಧಿಕರು ನೂರಾರು ದೂರುಗಳನ್ನು ಜಿಲ್ಲಾಡಳಿತಕ್ಕೆ ನೀಡಿದಾಗ್ಯು ಸಮಸ್ಯೆ ಪರಿಹಾರವಾಗಿರಲಿಲ್ಲ.
ಒಟ್ಟಿನಲ್ಲಿ ಅಲ್ಲಿ ಯಾರ ಮೇಲೂ ಯಾರೂ ನಿಯಂತ್ರಣ ಹೊಂದಿರಲಿಲ್ಲ ಎನ್ನುವಂಥ ಸ್ಥಿತಿ ಇತ್ತು ಎಂದು ಇತ್ತಿಚೆಗೆ ಆಸ್ಪತ್ರೆಗೆ ಸ್ವತ: ಭೇಟಿ ನೀಡಿದ್ದ ಉಪ ಮುಖ್ಯಮಂತ್ರಿ ಲಕ್ಷö್ಮಣ ಸವದಿ ಅವರೇ ಆರೋಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು.


Leave a Reply