Uncategorized

ಸಮುದಾಯ ಆರೋಗ್ಯ ಕೇಂದ್ರಕ್ಕೆ ದಿಡೀರ್ ಭೇಟಿ ನೀಡಿದ ಶಾಸಕ ; ಎ. ಎಸ್. ಪಾಟೀಲ (ನಡಹಳ್ಳಿ)


ತಾಳಿಕೋಟೆ:  ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಯಂಕಾಲ 6.30 ವೇಳೆಗೆ ದಿಡೀರ್ ಭೇಟಿ ನೀಡಿದ ಶಾಸಕರು.

ಸಮುದಾಯ ಆರೋಗ್ಯ ಕೇಂದ್ರಕ್ಕೆ ಬೇಟಿ ನೀಡಿದ ಶಾಸಕರು ಆಸ್ಪತ್ರೆಯನ್ನು ಪರಿಶೀಲನೆ ಮಾಡಿದರು.

ಶಾಸಕರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಆಗಮಿಸಿದ ತಕ್ಷಣ ಆಸ್ಪತ್ರೆಯ ವೈದ್ಯಾಧಿಕಾರಿಗಳು ಶಾಸಕರಿಗೆ ಆಸ್ಪತ್ರೆಯಲ್ಲಿ ಕೊರೋನಾ ರೋಗಿಗಳ ಚಿಕಿತ್ಸೆಗೆ ತೆಗೆದುಕೊಂಡಿರುವ ಕ್ರಮಗಳ ಕುರಿತು ತಿಳಿಸಿದರು.

ಆಸ್ಪತ್ರೆಯಲ್ಲಿ 30 ಬೇಡಗಳನ್ನು ಕೊರೋನಾ ರೋಗಿಗಳ ತಪಾಸಣೆಗೆ ಅಳವಡಿಸಿದ್ದೇವೆ ಎಂದು ಆಡಳಿತ ವೈಧ್ಯಾಧಿಕಾರಿಗಳಾದ ಡಾಕ್ಟರ್ ಶ್ರೀಶೈಲ ಹುಕ್ಕೇರಿ ಅವರು ಶಾಸಕರಿಗೆ ತಿಳಿಸಿದರು. ಪಟ್ಟಣದ ಪುರಸಭೆ ಸದಸ್ಯರಾದ ವಾಸುದೇವ ಹೇಬಸುರ್ ಅವರು ಆಸ್ಪತ್ರೆಯಲ್ಲಿ ಯಾವುದೆ ಕೊರೋನಾ ರೋಗಿಗಳ ತಪಾಸಣೆಯನ್ನು ಆಸ್ಪತ್ರೆಯಲ್ಲಿ ಮಾಡುತ್ತಿಲ್ಲ ಯಾರಾದರೂ ಸೋಂಕಿತರು ಆಸ್ಪತ್ರೆಗೆ ಆಗಮಿಸಿದರೆ ಮುದ್ದೇಬಿಹಾಳ ಅಥವಾ ವಿಜಯಪುರಕ್ಕೆ ಕಳುಹಿಸುತ್ತಿದ್ದಾರೆ ಎಂದು ಶಾಸಕರ ಗಮನಕ್ಕೆ ತಂದರು.

ಇದನ್ನು ಕೇಳಿದ ಶಾಸಕರು ಆಡಳಿತ ವೈದ್ಯಾಧಿಕಾರಿಗಳಾದ ಡಾಕ್ಟರ್ ಶ್ರೀಶೈಲ ಹುಕ್ಕೇರಿ ಅವರಿಗೆ ತರಾಟೆಗೆ ತೆಗೆದುಕೊಂಡರು.

ಆಸ್ಪತ್ರೆಯನ್ನು ಪರಿಶೀಲನೆ ಮಾಡಿದ ಶಾಸಕರಿಗೆ ಆಸ್ಪತ್ರೆಯಲ್ಲಿ ಕೊರೋನಾ ಸೋಂಕು ಹರಡದಂತೆ ತಡೆಗಟ್ಟಲು ವ್ಯಾಕ್ಸೀನ್ ಹಾಕುತ್ತಿರುವ ಕೋಣೆಯಲ್ಲಿರುವ ಶೌಚಾಲಯಗಳು ಸ್ವಚ್ಛತೆಯಿಲ್ಲದಿರುವುದು, ಪ್ಯಾನ್, ವಿಧ್ಯುತ್ ಬಲ್ಬಗಳು ಚಾಲ್ತಿ ಸ್ಥಿತಿಯಲ್ಲಿ ಇಲ್ಲದಿರುವುದು ಹಾಗೂ ಇನ್ನೂ ಕೆಲವು ಮೂಲಭೂತ ಸೌಲಭ್ಯಗಳ ಕೊರತೆಗಳು ಕಂಡುಬಂದವು ಅದರ ಕುರಿತು ವೈದ್ಯಾಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡು ಕೂಡಲೆ ಆಸ್ಪತ್ರೆಯಲ್ಲಿರುವ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಸರಿಪಡಿಸುವಂತೆ ವೈದ್ಯಾಧಿಕಾರಿಗಳಿಗೆ ಶಾಸಕ ಎ. ಎಸ್. ಪಾಟೀಲ (ನಡಹಳ್ಳಿ) ಆಗ್ರಹಿಸಿದರು.

ಆಸ್ಪತ್ರೆಯಲ್ಲಿರುವ ಕುಂದು ಕೊರತೆಗಳನ್ನು ಬಗೆ ಹರಿಸಿಕೊಳ್ಳಲು ಕುಂದು ಕೊರತೆಗಳ ಪಟ್ಟಿಯನ್ನು ತಯಾರಿಸಿ ಕೊಡಿ ಅದಕ್ಕೆ ನಾನು ಕೂಡಲೆ ಸರಕಾರದಿಂದ ಅನುದಾನ ಬಿಡುಗಡೆ ಮಾಡಿಸುತ್ತೇನೆ ಎಂದು ಶಾಸಕರು ವೈದ್ಯಾಧಿಕಾರಿಗಳಿಗೆ ತಿಳಿಸಿದರು.

  1. ಈ ಸಂದರ್ಭದಲ್ಲಿ ಮುದ್ದೇಬಿಹಾಳ ಮತಕ್ಷೇತ್ರದ ಶಾಸಕರಾದ ಎ. ಎಸ್. ಪಾಟೀಲ (ನಡಹಳ್ಳಿ), ತಾಲೂಕಾ ದಂಡಾಧಿಕಾರಿಗಳು, ಪುರಸಭೆ ಮುಖ್ಯಾಧಿಕಾರಿಗಳು, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಪುರಸಭೆಯ ಸದಸ್ಯರು, ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರು, ಮತ್ತಿತರರು ಉಪಸ್ಥಿತರಿದ್ದರು.

Leave a Reply