Belagavi

ಕೋವಿಡ್19 ಜಾಗೃತಿ ಜಾಥಾ ಕಾರ್ಯಕ್ರಮ ಮತ್ತು ವೈದ್ಯರ ನಡೆ ಹಳ್ಳಿಕಡೆ


ಯರಗಟ್ಟಿ: ಸಮೀಪದ ಜಿವಾಪೂರ ಮತ್ತು ಜಾಲಿಕಟ್ಟಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ತಲ್ಲೂರ ಮತ್ತು ಗ್ರಾಮ ಪಂಚಾಯತ ತಲ್ಲೂರ ಇವರ ಸಂಯುಕ್ತ ಆಶ್ರಯದಲ್ಲಿ ಕೋವಿಡ್19 ಜಾಗೃತಿ ಜಾಥಾ ಕಾರ್ಯಕ್ರಮ ವನ್ನು ಏರ್ಪಡಿಸಲಾಗಿತ್ತು.

ಕೋವಿಡ್ 19 ಇದೊಂದು ಸಾಂಕ್ರಾಮಿಕ ರೋಗವಾಗಿದ್ದ ಇದನ್ನು ನಿಯಂತ್ರಣ ಮಾಡಲು ಇದರ ಬಗ್ಗೆ ಮಾಹಿತಿ ಅವಶ್ಯಕ. ಸದರಿ ರೋಗದ ಲಕ್ಷಣಗಳಾದ ಕೆಮ್ಮು, ನೆಗಡಿ, ಜ್ವರ, ತಲೆನೋವು, ಉಸಿರಾಟದ ತೊಂದರೆ. ಮುಂತಾದ ಲಕ್ಷಣಗಳು ಕಂಡುಬಂದರೆ ಪರಿಕ್ಷೆ ಮಾಡಿಸಿ ಚಿಕಿತ್ಸೆ ಪಡೆಯುವದು.

ಇಲ್ಲವಾದರೆ ಒಬ್ಬರಿಂದ ಮತ್ತೊಬ್ಬರಿಗೆ ಬೇಗ ಹರಡುವ ಸಾಧ್ಯತೆ ಇರುವುದು ಇದರ ಜೊತೆಗೆ ಮಾಸ್ಕ ಬಳಸುವುದು. ಸಾಮಾಜಿಕ ಅಂತರ ಕಾಯ್ದುಕೊಳ್ಳುವದು.

ಸ್ಯಾನಿಟೈಜರ್ ಬಳಸುವದು, ಕೈಗಳ ಶುಚಿತ್ವ .ಮುಖ್ಯವಾಗಿ ಮನೆ ಯಿಂದ ಹೊರಗೆ ಬರದೇ ಲಾಕಡೌನ್ ನಿಯಮಗಳನ್ನು ಪಾಲಿಸುವುದು ಅವಶ್ಯವಾಗಿದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಐ.ಆರ್. ಗಂಜಿ ಹೇಳಿದರು.

ಸದರಿ ಜಾಥಾವು ಗ್ರಾಮಗಳಲ್ಲಿ ಸಂಚರಿಸಿ ಕೋವಿಡ್ 19 ಇದೊಂದು ಸಾಂಕ್ರಾಮಿಕ ರೋಗ ಅರಿವು ಮುಡಿಸಲಾಯಿತು.

ಈ ಸಂದರ್ಭದಲ್ಲಿ ಡಾ. ಮಲ್ಲಮ್ಮ ನೇಸರಗಿ, ಐ. ಆರ್. ಗಂಜಿ, ವಿ. ಎಸ್.ಯರಗುದ್ರಿ, ಪಿಡಿಓ ಬಬಿತಾ ಅಮ್ಮಿನಭಾವಿ, ಸಮೀರ ಗೋರೆಕಾನ, ಸವಿತಾ ಚನ್ನಮೇತ್ರಿ,
ಗೀತಾ ಹೊಂಗಲ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.
(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)


Leave a Reply