Belagavi

ಯರಗಟ್ಟಿ ವಿವಿಧೆಡೆ ವಿಶ್ವ ಪರಿಸರ ದಿನ ಆಚರಣೆ


ಯರಗಟ್ಟಿ: ತಾಲೂಕಿನ ಕಡಬಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮತ್ತು ಯರಝರ್ವಿ ಗ್ರಾಮ ಪಂಚಾಯತಿ ಆವರಣದಲ್ಲಿ ವಿಶ್ವ ಪರಿಸರ ದಿನ ಆಚರಣೆ ಮಾಡಲಾಯಿತು.
ಪ್ರತಿಯೋಬ್ಬರು ಸಸಿಗಳನ್ನು ನೆಟ್ಟು ಉತ್ತಮ ಪರಿಸರ ಕಾಪಾಡಬೇಕು ಎಂದು ಯರಝರ್ವಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವಿರೂಪಾಕ್ಷ ಕೊಳವಿ ಹೇಳಿದರು. ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಈರವ್ವ ಹರಿಜನ. ಗ್ರಾಮ ಪಂಚಾಯತಿ ಸಿಬ್ಬಂದಿ ಬಸವರಾಜ ಹಾರೂಗೊಪ್ಪ, ಗ್ರಾಮ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಮತ್ತು ಕಡಬಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಇಲಾಖೆಯ ಆರೋಗ್ಯ ನಿರೀಕ್ಷಕ ಉಮೇಶ ಬೇಟಗೇರಿ ಸಸಿ ನೆಟ್ಟು ಸಸಿಗೆ ನೀರು ಹಾಕಿ ಚಾಲನೆ ನೀಡಿದರು.
ಸಂದರ್ಭದಲ್ಲಿ ಎಂ ಎನ್ ಶೇಖ, ಮುತ್ತುರಾಜ, ದೀಪಾ ಕರಿಗಾರ,  ರತ್ನಾ ಪಾಟೀಲ, ಚಿದಾನಂದ ವಾರಲಗಟ್ಟಿ ಮುಂತಾದವರು ಉಪಸ್ಥಿತರಿದ್ದರು.
(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)

Leave a Reply