Belagavi

ಸತ್ತಿಗೇರಿ ಗ್ರಾಮದಲ್ಲಿ  ವಿಶ್ವ ಪರಿಸರ ದಿನ ಆಚರಣೆ


ಯರಗಟ್ಟಿ: ಸಮೀಪದ ಸತ್ತಿಗೇರಿ ಗ್ರಾಮ ಪಂಚಾಯತಿ ಆವರಣದಲ್ಲಿ ಜೂನ್ 5 ವಿಶ್ವ ಪರಿಸರ ದಿನ ಆಚರಣೆ ಮಾಡಲಾಯಿತು.

ಪ್ರತಿಯೋಬ್ಬರು ಸಸಿಗಳನ್ನು ನೆಟ್ಟು ಉತ್ತಮ ಪರಿಸರ ಕಾಪಾಡಬೇಕು ಎಂದು ಸತ್ತಿಗೇರಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶ್ರೀ ವಾಯ್ . ವ್ಹಿ . ಲಮಾಣಿಯವರು ಹೇಳಿದರು.

ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಗೌಡಪ್ಪ ಗೀರೆಪ್ಪ ಸವದತ್ತಿ ಉಪಸ್ಥಿತರಿದ್ದರು. ಗ್ರಾಮ ಪಂಚಾಯತಿ ಸಿಬ್ಬಂದಿ ಕೃಷ್ಣಾ ಕುಲಮುರ ಹಾಗೂ ಗ್ರಾಮದ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಸತ್ತಿಗೇರಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಗೌಡಪ್ಪ ಗಿರೆಪ್ಪ ಸವದತ್ತಿ ಸಸಿ ನೆಟ್ಟು ಸಸಿಗೆ ನೀರು ಹಾಕಿ ಚಾಲನೆ ನೀಡಿದರು. ಸಂದರ್ಭದಲ್ಲಿ ಲಕ್ಷ್ಮಣ ಭಜಂತ್ರಿ, ಶಾಯಿನಶಾ ಬಾಗವಾನ, ಪುಂಡಲೀಕ ಭಜಂತ್ರಿ, ಮುಂತಾದವರು ಉಪಸ್ಥಿತರಿದ್ದರು.

(ವರದಿ : ಈರಣ್ಣಾ ಹುಲ್ಲೂರ ಯರಗಟ್ಟಿ)


Leave a Reply