Belagavi

ವಿಶ್ವ ಪರಿಸರ ದಿನಾಚರಣೆ ಸರಳವಾಗಿ ಆಚರಿಸಿದ ಭಾಗೋಜಿಕೊಪ್ಪ ಶ್ರೀಗಳು


ಯರಗಟ್ಟಿ: ಸಮೀಪದ ಭಾಗೋಜಿಕೊಪ ಗ್ರಾಮದಲ್ಲಿ ಶ್ರೀ ಗುರುವರೇಣ್ಯ ಗ್ರಾಮೀಣ ವಿದ್ಯಾಪೀಠದ ಆವರಣದಲ್ಲಿ ಪರಿಸರ ದಿನಾಚರಣೆಯ ಅಂಗವಾಗಿ ಸಸಿಗಳನ್ನು ನಡೆಸಲಾಯಿತು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶ್ರೀಗಳು ಪರಿಸರದ ಕಾಳಜಿಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಜೂನ್ 5 ರಂದು ವಿಶ್ವದಾದ್ಯಂತ ಪರಿಸರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.

ಪರಿಸರವು ನಮ್ಮ ಭೂಮಿಯ ಮೇಲಿರುವ ಪ್ರತಿಯೊಂದು ಜೀವರಾಶಿಗೆ ಪ್ರಕೃತಿ ನೀಡಿರುವ ಅತ್ಯಂತ ಅಮೂಲ್ಯವಾದ ಕೊಡುಗೆಯಾಗಿದೆ. ಪರಿಸರದಲ್ಲಿನ ಗಾಳಿ, ನೀರು, ಮಣ್ಣು, ಮರಗಳು, ಕಾಡುಗಳು, ಕೆರೆ, ಹಳ್ಳ, ನದಿ, ಸಾಗರ ಇತ್ಯಾದಿಗಳನ್ನು ನಾವು ಉಳಿಸಿಕೊಂಡು ಹೋಗುವುದು ಇಂದು ಅತ್ಯಗತ್ಯವಾಗಿದೆ.

ನಾವೆಲ್ಲರೂ ಅವಲಂಬಿತರಾಗಿರುವ ಈ ಪರಿಸರ ಯುಗ ಯುಗಳವರೆಗೂ ಹೀಗೆಯೂ ಉಳಿಯಬೇಕಿದೆ. ನಮ್ಮ ಮುಂದಿನ ಪೀಳಿಗೆಗೆ ನಾವು ಈ ಪರಿಸರವನ್ನು ಹಾಳು ಮಾಡದೆ ಉಳಿಕೊಂಡು ಹೋದಾಗ ಇಂದಿನ ಪರಿಸರ ದಿನಾಚರಣೆಗೆ ಒಂದು ಅರ್ಥ ಬರಲಿದೆ. ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮ.ಘ.ಚ ಡಾ: ಶಿವಲಿಂಗಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಈ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಎಂ.ಜೇ ಹಿರೇಮಠ, ಎ. ಎನ್. ದೊಡಮನಿ, ಪುಂಡಲೀಕ ಕರಿಗನ್ನವರ, ಎಸ್ ಬಿ ನಾವಿ, ಎಪ್ ಎಚ್ ದಬಾಡಿ, ಸಂಸ್ಥೆ ಸರ್ವ ಸದಸ್ಯರು ಮತ್ತು ಶಿಕ್ಷಕರು ಭಾಗವಹಿಸಿದ್ದರು.
(ವರದಿ ಈರಣ್ಣಾ ಹೂಲ್ಲೂರ)

ಮನೆಯಲ್ಲೇ ಇರಿ, ಕ್ಷೇಮವಾಗಿರಿ…


Leave a Reply