Belagavi

ಕೊರೊನಾ ಮುಕ್ತ ಮಾಡಲು ಜನರ ಸಹಕಾರವೇ ಮುಖ್ಯ : ಆನಂದ ಚಂ. ಮಾಮನಿ


ಸವದತ್ತಿ: ಆರೋಗ್ಯ ಇಲಾಖೆ, ಪೋಲಿಸ್ ಇಲಾಖೆ, ಪುರಸಭೆ ಕಾರ್ಮಿಕರು ಕೋವಿಡ್ ಕಾರ್ಯಾಚರಣೆಯಲ್ಲಿ ದಿನದ 24 ಗಂಟೆ ಮುಂಚೂಣಿಯಲ್ಲಿ ಕೆಸಲ ನಿರ್ವಹಿಸುತ್ತಿದ್ದಾರೆಂದು ವಿಧಾನಸಭಾ ಉಪಸಭಾಧ್ಯಕ್ಷ ಆನಂದ ಮಾಮನಿ ಶ್ಲಾಘಿಸಿದರು.

ಇಲ್ಲಿನ ಯುವಭಾರತ ಫೌಂಡೇಶನ್‌ ದಿಂದ ಶನಿವಾರ ಪೊಲೀಸ್ ಇಲಾಖೆ ಸಿಬ್ಬಂದಿಗಳಿಗೆ ಉಚಿತವಾಗಿ ಸ್ಟೀಮರ್ ಮಾಸ್ಕ, ಸ್ಯಾನಿಟೈಸ್ ಹಾಗೂ ಆಯುಷ್ ಇಲಾಖೆಯಿಂದ ಯುನಾನಿ ಔಷಧಿ ವಿತರಿಸಿ ಅವರು ಮಾತನಾಡಿದರು.

ತಾಲೂಕಿನಲ್ಲಿ ಸಧ್ಯ ಶೇ.10 ಪಾಸಿಟಿವ್ ಪ್ರಕರಣ ಬಂದಿವೆ. ದಿನೇ ದಿನ ಕಡಿಮೆ ಆಗುತ್ತಿದ್ದು ಒಳ್ಳೆಯ ಬೆಳವಣಿಗೆಯಾಗಿದೆ. ಜೀವ ಇದ್ದರೆ ಜೀವನ ಎಂಬ ಮಾತು ಸತ್ಯವಾಗಿದ್ದು ಕೋವಿಡ್ ನಿರ್ವಹಣೆಯಲ್ಲಿ ಪೋಲಿಸ್, ಆರೋಗ್ಯ ಇಲಾಖೆ ಮತ್ತು ಪುರಸಭೆಯವರ ಕಾರ್ಯ ಶ್ಲಾಘನೀಯ ಇಂತಹ ಕಠಿಣ ಪರಿಸ್ಥಿತಿಯಲ್ಲಿ ಸಂಯಮದಿಂದ ವರ್ತಿಸುತ್ತಿದ್ದಾರೆ.

ಸರಕಾರದ ನಿರ್ದೇಶನಗಳನ್ನು ಪಾಲಿಸಿ ಸೋಂಕು ಬರುವ ಮುನ್ನವೇ ವ್ಯಾಕ್ಸಿನ್, ಬಿಸಿಉಗ, ಮಾಸ್ಕ ಮತ್ತು ಸ್ಯಾನಿಟೈಜರ್. ಬಳಸುವುದರಿಂದ ಕೊರೊನಾದಿಂದ ದೂರವಿರಬಹುದು.

ದಿನದಿಂದ ದಿನಕ್ಕೆ ಹೊಸ ರೋಗಗಳು ಜನ್ಮ ತಾಳುತ್ತಿವೆ.ಅವುಗಳ ರೋಗಗಳ ವಿರುದ್ಧ ಹೋರಾಡಲು ನಿಯಮಗಳ ಪಾಲನೆ ಕಡ್ಡಾಯ.

ಆಗ ಮಾತ್ರ ರೋಗಗಳ ವಿರುದ್ಧ ಗೆಲುವು ಸಾಧ್ಯ ಲಾಕ್ ಡೌನ್ ನಲ್ಲಿ ಮುಂಚುಣಿಯಲ್ಲಿರುವ ಸೇರಿದಂತೆ ಇತರೆ ಇಲಾಖೆಗಳ ಸಹಿತ ಕರ್ತವ್ಯ ನಿರತದಲ್ಲಿದ್ದು ಅವರೂ ಆರೋಗ್ಯವಾಗಿರಬೇಕು.

ಕೋವಿಡ್ ಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಸಾರ್ವಜನಿಕರ ಸಹಕಾರವೇ ಮೂಖ್ಯವಾಗಿದೆ.

ತಾಲೂಕಿನಲ್ಲಿ ಪೋಲಿಸ್, ಆರೋಗ್ಯ, ಪುರಸಭೆ ಇಲಾಖೆ ಮತ್ತು ಟಾಸ್ಕಪೋರ್ಸ ಸಮಿತಿ ಸಹಕಾರ ಮತ್ತು ಮಾಧ್ಯಮದ ಸಲಹೆಯಂತೆ ಲಾಕ್ ಡೌನ್ ನಲ್ಲಿ ಒಳ್ಳೆಯ ಯಶಸ್ಸು ಕಂಡಿದ್ದೇವೆಂದರು.

ಈ ವೇಳೆ ಪಿಎಸ್‌ಐ ಶಿವಾನಂದ ಗುಡಗನ, ತಾಲೂಕಾ ಆರೋಗ್ಯ ಅಧಿಕಾರಿ ಮಹೇಶ ಚಿತ್ತರಗಿ ಮಹೇಶ ಚಿತ್ತರಗಿ, ಪುರಸಭೆ ಮುಖ್ಯಾಧಿಕಾರಿ ಪಿ.ಎಮ್ ಚನ್ನಪ್ಪನವರ, ಆಯುಷ್ ವೈದ್ಯಾಧಿಕಾರಿ ಕುಬೇರ ನಾಯಕ, ಪೊಲೀಸ್ ಸಿಬ್ಬಂದಿ ಹಾಗೂ ಯುವ ಭಾರತ ಫೌಂಡೇಶನ್ ಸದಸ್ಯರು ಉಪಸ್ಥಿತರಿದ್ದರು.
(ವರದಿ ಈರಣ್ಣಾ ಹುಲ್ಲೂರ)


Leave a Reply