Belagavi

ವಿಶ್ವ ಪರಿಸರ ದಿನಾಚರಣೆ ಮಾಡಿದ ಕಾಂಗ್ರೆಸ್ ಮುಖಂಡ ವಿಶ್ವಾಸ ವೈದ್ಯ 


ಸವದತ್ತಿ: ಕಾಂಗ್ರೆಸ್ ಮುಖಂಡರಾದ ಶ್ರೀ ವಿಶ್ವಾಸ್ ವೈದ್ಯ ರವರ ನೇತೃತ್ವದಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು  ಸವದತ್ತಿ ಎಪಿಎಂಸಿ ಮಾರುಕಟ್ಟೆಯಲ್ಲಿ ಆಚರಿಸಲಾಯಿತು.

“ಕೊರೋನಾ ಎರಡನೇ ಅಲೆ ಕಾಡುತ್ತಿರುವ ವೇಳೆಯಲ್ಲಿ ಉಸಿರು ವಾಯುವಿನ ಉತ್ಪಾದಕಗಳಾದ ಮರಗಳ ಮಹತ್ವ ಅರಿವಾಗುತ್ತಿದೆ. ಹಸಿರು ಉಳಿದರೆ ಮಾತ್ರವೇ ನಮಗೆ ಉಸಿರು ಎಂಬುದು ಘೋಷ ವಾಖ್ಯಗಳಿಗೆ ಸೀಮಿತವಾಗದಿರಲಿ. ಮನೆ ಮುಂದೊಂದು ಸಸಿನೆಟ್ಟು ಮರವಾಗಿ ಬೆಳೆಸಿ. ಮುಂದೊಂದು ಮರವಿದ್ದರೆ ಮನೆಯೊಳಗೆ ಉಸಿರು ಇದ್ದಂತೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಪುರಸಭೆ ಸದಸ್ಯರಾದ ಶ್ರೀ ಚಂದ್ರಣ್ಣ ಶಾಮಾರಾಯನವರ, ಪುರಸಭೆ ಸದಸ್ಯರಾದ ಮಲ್ಲಿಕಾರ್ಜುನ್ ಪುರದಗುಡಿ, ಸವದತ್ತಿ ಬ್ಲಾಕ್ ಯೂಥ್ ಕಾಂಗ್ರೆಸ್ ಅಧ್ಯಕ್ಷರಾದ ಆಕೀಪ ಯಡ್ರಾಂವಿ. ಸೇರಿ ಅನೇಕ ಕಾಂಗ್ರೆಸ್ ಮುುಖಂಡರು ಉಪಸ್ಥಿತರಿದ್ದರು.

(ವರದಿ ಈರಣ್ಣಾ ಹುಲ್ಲೂರ)

 


Leave a Reply