Belagavi

ಕೈ ಮಾಡಿ ಕರೆಯುತ್ತಿದೆ ಯರಝರ್ವಿ  ಪರಿಸರ ಸ್ನೇಹಿ ಪ್ರೌಢ ಶಾಲೆ 


ಯರಗಟ್ಟಿ: ಕಾಡು ಬೇಳಸಿ ನಾಡು ಉಳಿಸಿ ಎಂದು ಹೇಳಿಕೆಗೆ ಮಾರ್ಗದರ್ಶನವಾಗಿರುವ ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಯರಝರ್ವಿ ಗ್ರಾಮದ ಗುಡ್ಡದ ಮೇಲಿರುವ ಸರಕಾರಿ ಹಿರಿಯ ಪ್ರೌಢ ಶಾಲೆಯ ಮುಂಭಾಗದಲ್ಲಿ ಸುಮಾರು ಐದುನೂರಕಿಂತ ಹೆಚ್ಚು ನಾನಾ ಬಗೆಯ ಗಿಡಗಳನ್ನು ನೆಟ್ಟು ಅವುಗಳನ್ನು ಸಂರಕ್ಷಿಸಿ ಒಂದು ಉದ್ಯಾನ ವನದಂತೆ ಮಾಡಿರುವ ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು.

ಶಾಲೆಯಲ್ಲಿ ಆಟ ಪಾಟ ಕಲಿಯುವದು ಎಷ್ಟು ಮುಖ್ಯವೊ ಪರಿಸರ ಬಗ್ಗೆ ತಿಳಿದಿಕೋಳ್ಳುವದು ಅಷ್ಟೆ ಮುಖ್ಯ ಎಂದು ಸರಕಾರಿ ಪ್ರೌಢ ಶಾಲೆಯ ಶಿಕ್ಷಕರ ಮಾತು.

ಈ ಶಾಲೆಯು ಗ್ರಾಮದ ದಕ್ಷಿಣ ಭಾಗದ ಗುಡ್ಡದ ಪ್ರದೇಶದಲ್ಲಿದ್ದು ಶಾಲೆಯು ಮುಂಭಾಗದಲ್ಲಿ ವಿಶಾಲವಾದ ಪ್ರದೇಶ ಹೊಂದಿದ್ದರಿಂದ ಶಾಲೆಯ ದೈಹಿಕ ಶಿಕ್ಷಕ ಪಾಟೀಲ ಅವರು ವಿದ್ಯಾರ್ಥಿಗಳಿಗೆ ಆಟ-ಪಾಟದ ಜೊತೆ ವರ್ಷಗಳ ಹಿಂದೆ ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆ ಮಾಡುವದನ್ನು ಹೇಳಿಕೊಟ್ಟಿದ್ದಾರೆ ಅದರ ಪ್ರತಿಫಲವೆ ಇಂದಿನ ಉದ್ಯಾನ ವನವಾಗಿದೆ.

ಇಂದಿನ ಕೊವಿಡ್ ಸಮಯದಲ್ಲಿ ಆಮ್ಲಜನಕವನ್ನು ಹಣ ಕೊಟ್ಟು ಕರಿದಿಸುವ ಪರಿಸ್ಥಿತಿ ಎದುರಾಗಿದೆ.
ಇದನ್ನ ಅರಿತು ನಾವೆಲ್ಲರು ಪರಿಸರವನ್ನು ನಾಶ ಮಾಡದೆ ಅಧಿಕ ಪ್ರಮಾಣದಲ್ಲಿ ಗಿಡ ಮರಗಳನ್ನು ಬೆಳಸಬೇಕು.
ಪರಿಸರ ಒಂದಹೇಳಿದರು ವ್ಯವಸ್ತಿತವಾಗಿದೆ ದಟ್ಟನೆಯ ಪರಿಸರ ಇದ್ದರೆ ಸರಿಯಾದ ಸಮಯಕ್ಕೆ ಹೆಚ್ಚು ಮಳೆ ಆಗುತ್ತದೆ ಮಳೆ ಆದರೆ ಉತ್ತಮ ಬೆಳೆ ಬರುತ್ತದೆ ಬೆಳೆಯಿಂದ ಆಹಾರ ಸಿಗುತ್ತದೆ ಉಚಿತವಾಗಿ ಸಿಗುವ ಗಾಳಿ, ನೀರು,ಆಹಾರ ಇದೆಲ್ಲಾ ನಾವು ಬೆಳಸಿ ಕಾಪಾಡಿಕೋಂಡು ಹೊಗುವ ಪರಿಸರದಿಂದ ಮಾತ್ರ ಇದನ್ನೆ ನಾವು ಉಳಿಸಿಕೋಂಡು ಹೋಗದಿದ್ದರೆ ಮುಂದಿನ ಯುವ ಪಿಳಿಗೆಯು ಹಣ ಕೊಟ್ಟರು ಸಿಗದೆ ಪರದಾಡುವ ಪರಿಸ್ಥಿತಿ ಎದುರಾಗಬಹುದು ಎಂದು ವಿದ್ಯಾರ್ಥಿಗಳಿಗೆ ಭೊದನೆ ಮಾಡಿ ಸುಮಾರು 500 ನೂರ ಕಿಂತ ಹೆಚ್ಚು ನಾನಾ ಬಗೆಯ ಗಿಡಗಳನ್ನು ನೆಟ್ಟು ಅವುಗಳನ್ನು ಸಂರಕ್ಷಿಸಿ ಉದ್ಯಾನ ವನ ಮಾಡಿ ಇತರರಿಗೂ ಮಾದರಿಯಾಗಿದ್ದಾರೆ.

ಈ ಉದ್ಯಾನವನಕ್ಕೆ ಶಾಲೆಯ ವಿದ್ಯಾರ್ಥಿಗಳು, ಗ್ರಾಮದ ಜನರ ಹಾಗೂ ಗ್ರಾಮ ಪಂಚಾಯತಿ ಅವರ ಸಹಕಾರದಿಂದ ಗಿಡಗಳನ್ನು ಬೆಳೆಸಲು ಸಾದ್ಯವಾಗಿದೆ ಎಂದು ಸರಕಾರಿ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಕೆ ಜಿ ದಾಸರ ಅವರು ವಿಶ್ವ ಪರಿಸರ ದಿನಾಚರಣೆ ನಿಮಿತ್ಯ ಹೆಳಿದ್ದಾರೆ.ಈ ಹಿಂದೆ ನರೆಗಾ ಯೋಜನೆಡಯಲ್ಲಿ 500 ಕಿಂತ ಹೆಚ್ಚು ಗಿಡಗಳನ್ನು ಶಾಲಾ ಆವರಣದಲ್ಲಿ ನೆಡಲಾಗಿದ್ದು ಅವುಗಳಿಗೆ ಡ್ರಿಪ್ ಮೂಲಕ ನೀರಿನ ಸೌಲಭ್ಯ ಒದಗಿಸಿಕೋಡಲಾಗಿದೆ. ಮುಂಬರುವ ದಿನಗಳಲ್ಲಿ ಎಸ್ ಎಮ್ ಸಿ ಯೊಜನೆಯ ನೆಡತೊಪು ಕಾರ್ಯಕ್ರಮದಲ್ಲಿ ಗಿಡಗಳ ಸುತ್ತಮುತ್ತ ಬೊದಗಳನ್ನ ನಿರ್ಮಾಣ ಮಾಡಿ ನೀರು ಇಂಗುವಂತೆ ಹಾಗೂ ಗಿಡದಿಂದ ಗಿಡಕ್ಕೆ ನೀರು ಹರಿಯುವಂತೆ ಮಾಡಿ ಗಿಡಗಳ ಬೆಳವನಿಗೆಗೆ ಅನಕೂಲ ಮಾಡಿಕೊಡಲಾಗುವದು ಹಾಗೂ ನಮ್ಮ ಗ್ರಾಮ ಪಂಚಾಯತಿಗೆ ಒಳಪಡುವ ಪ್ರದೇಶದಲ್ಲಿ ಸುಮಾರು ಐದು ಸಾವಿರ ಗಿಡಗಳನ್ನು ನೆಡಲು ಗುರಿ ಹೋಂದಿದ್ದೆವೆ ಎಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪಿಡಿಓ ವೀರುಪಾಕ್ಷಿ ಕೋಳವಿ ಹೇಳಿದರು.

(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)


Leave a Reply