Belagavi

ಮುರಗೋಡ ಪೊಲೀಸ್ ಠಾಣೆಯಲ್ಲಿ ಪರಿಸರ ದಿನಾಚರಣೆ ಆಚರಣೆ


ಯರಗಟ್ಟಿ : ಮುರಗೋಡ ಪೊಲೀಸ್ ಠಾಣೆಯಲ್ಲಿ ಸಿಪಿಐ ಮಂಜುನಾಥ ನಡವಿನಮನಿಯವರ ನೇತೃತ್ವದಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

“ಕೊರೋನಾ ಎರಡನೇ ಅಲೆ ಕಾಡುತ್ತಿರುವ ವೇಳೆಯಲ್ಲಿ ಉಸಿರು ವಾಯುವಿನ ಉತ್ಪಾದಕಗಳಾದ ಮರಗಳ ಮಹತ್ವ ಅರಿವಾಗುತ್ತಿದೆ.

ಹಸಿರು ಉಳಿದರೆ ಮಾತ್ರವೇ ನಮಗೆ ಉಸಿರು ಎಂಬುದು ಘೋಷ ವಾಖ್ಯಗಳಿಗೆ ಸೀಮಿತವಾಗದಿರಲಿ. ಮನೆ ಮುಂದೊಂದು ಸಸಿನೆಟ್ಟು ಮರವಾಗಿ ಬೆಳೆಸಿ. ಮುಂದೊಂದು ಮರವಿದ್ದರೆ ಮನೆಯೊಳಗೆ ಉಸಿರು ಇದ್ದಂತೆ ಎಂದು ಸಿಪಿಐ ಮಂಜುನಾಥ ನಡವಿನಮನಿ ಹೇಳಿದರು.

ಈ ಸಂದರ್ಭದಲ್ಲಿ ಪಿಎಸ್ಐ ಪ್ರವೀಣ್ ಗಂಗೋಳ್ಳಿ, ಹವಾಲ್ದಾರ್ ನಿಂಗಪ್ಪ ತಲ್ಲೂರ, ಪ್ರಕಾಶ ಚಿನ್ನವರ, ಪೋಲಿಸ್ ಇಲಾಖೆ ಸಿಬ್ಬಂದಿ, ಸಾರ್ವಜನಿಕ ಉಪಸ್ಥಿತರಿದ್ದರು.
(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)


Leave a Reply