vijayapur

ವಿಕಲಚೇತನರಿಗೆ ಆಹಾರ ಕಿಟ್ಟು, ಹಾಗೂ ಮಾಶಾಸನ ನೀಡಬೇಕೆಂದು ಒತ್ತಾಯ


ವಿಜಯಪುರ : ವಿಕಲಚೇತನರಿಗೆ ಆಹಾರಕಿಟ್ಟು ಹಾಗೂ ಮಾಶಾಸನ ನೀಡಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ವಿಕಲಚೇತನರ ಹೋರಾಟ ಸಮಿತಿಯ ವತಿಯಿಂದ ಇಂದು ಎಲ್ಲಾ ವಿಕಲಚೇತನರು ಸೇರಿಕೊಂಡು ಕಳೆದು ೧ ವರ್ಷದಿಂಧ ಕೋವಿಡ್ ೧೯ ರೋಗದಿಂದ ರಾಜ್ಯದ ವಿಕಲಚೇತನರು ಯಾವುದೇ ಉದ್ಯೋಗವಿಲ್ಲದೇ ಆರ್ಥಿಕ ಸಂಕಷ್ಟಕೀಡಾಗಿದ್ದು, ಕಳೆದ ಬಾರಿ ಪ್ಯಾಕೇಜ್‌ನಲ್ಲಿ ಯಾವುದೇ ರೀತಿ ಆರ್ಥಿಕ ಸಹಾಯ ಮಾಡಿರುವುದಿಲ್ಲ. ಈ ಬಾರಿಯೂ ಕೂಡಾ ೨ ಸಲ ಪ್ಯಾಕೇಜ್ ಘೋಷಣೆ ಮಾಡಿದ್ದರೂ ವಿಕಲಚೇತನರಿಗೆ ಒಂದೇ ಒಂದು ರೂಪಾಯಿ ಪ್ಯಾಕೇಜ್‌ನಲ್ಲಿ ಘೋಷಣೆ ಮಾಡಿಲ್ಲ. ಈಗಗಾಲೇ ಉದ್ಯೋಗವಿಲ್ಲದೇ ರಾಜ್ಯ ವಿಕಲಚೇತನರು ಉಪವಾಸ ವನವಾಸ ಅಂತಾ ಸಾಯುತ್ತಿದ್ದಾರೆ. ಕಳೆದ ನಾಲ್ಕು ತಿಂಗಳಿAದ ಮಾಶಾಸನವೂ ಕೂಡಾ ಬರುತ್ತಿಲ್ಲಾ. ರಾಜ್ಯದಲ್ಲಿ ಸುಮಾರು ೪೦ ಲಕ್ಷಕ್ಕಿಂತ ವಿಕಲಚೇತನರು ಆರ್ಥಿಕ ಸಂಕಷ್ಠಕ್ಕೀಡಾಗಿ ಒಂದು ಹೊತ್ತು ಊಟಕ್ಕೂ ಪರದಾಡುವ ಪರಿಸ್ಥಿತಿ ಬಂದಿದೆ. ದಯವಿಟ್ಟು ಮುಖ್ಯಮಂತ್ರಿ ವಿಕಲಚೇತನರ ಸಮಸ್ಯೆಯನ್ನರಿತು ಶೀಘ್ರವಾಗಿ ವಿಶೇಷ ಪ್ಯಾಕೇಜ್ ಹಾಗೂ ೪ ತಿಂಗಳ ಮಾಶಾಸನ ನೀಡಬೇಕೆಂದು ಒತ್ತಾಯಿಸುತ್ತೇವೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ವಿಕಲಚೇತನರ ಹೋರಾಟ ಸಮಿತಿ ಅಧ್ಯಕ್ಷರಾದ ಭೀಮನಗೌಡ ಪಾಟೀಲ ಮತ್ತು ಶೌರ್ಯ ಸಾಯಿ ಕೃಪಾ ಅಂಗವಿಕಲರ ಅಭಿವೃದ್ಧಿ ಸಂಸ್ಥೇಯ ಅಧ್ಯಕ್ಷ ಕಸ್ತೂರಿ ಬೂದಿಹಾಳ, ಬಾಸ್ಕ ಪೂಸ್ ಜಿಲ್ಲಾ ಉಪಾಧ್ಯಕ್ಷ ಮಹೇಶ ಮುಧೋಳ, ಪರಶುರಾಮ ಗುನ್ನಾಪುರ, ಸುರೇಶ ಚವ್ಹಾಣ, ಸಂತೋಷ ಭೊಮ್ಮನಳ್ಳಿ, ಮಹೇಶ ತೋಟದ, ಮಗಲಾ ಇಬ್ರಾಹಿಂಪೂರ, ಸದ್ದಾಮ ಹುಸೇನ ಹೆಬ್ಬಾಳ, ಸುಮಿತ ಪಾಂಡಿಚೇರಿ, ಮಂಜುನಾಥ ಮನಗೊಂಡ ಮತ್ತಿತ್ತರರು ಇದ್ದರು.


Leave a Reply