Belagavi

ಕೋವಿಡ್ 19 ಮತ್ತು ಮಲೇರಿಯಾ ಮಾಸಾಚರಣೆ ಜಾಗೃತಿ  ಕಾರ್ಯಕ್ರಮ 


ಯರಗಟ್ಟಿ : ಸ್ಥಳೀಯ ಭೀರಪ್ಪನ ದೇವಸ್ಥಾನದ ಆವರಣದಲ್ಲಿ  ಕೋವಿಡ್19 ಕುರಿತು ಜಾಗ್ರತಿ  ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಕೋವಿಡ್ 19 ಇದೊಂದು ಸಾಂಕ್ರಾಮಿಕ ರೋಗವಾಗಿದ್ದು.ಇದನ್ನು ನಿಯಂತ್ರಣ ಮಾಡಲು ಇದರ ಬಗ್ಗೆ ಮಾಹಿತಿ ಅವಶ್ಯಕ. ಸದರಿ ರೋಗದ ಲಕ್ಷಣಗಳಾದ ಕೆಮ್ಮು, ನೆಗಡಿ, ಜ್ವರ, ತಲೆನೋವು, ಉಸಿರಾಟದ ತೊಂದರೆ.
ಮುಂತಾದ ಲಕ್ಷಣಗಳು ಕಂಡುಬಂದರೆ ಪರಿಕ್ಷೆ ಮಾಡಿಸಿ ಚಿಕಿತ್ಸೆ ಪಡೆಯುವದು.ಇಲ್ಲವಾದರೆ ಒಬ್ಬರಿಂದ ಮತ್ತೊಬ್ಬರಿಗೆ ಬೇಗ ಹರಡುವ ಸಾಧ್ಯತೆ ಇರುವುದು ಇದರ ಜೊತೆಗೆ ಮಾಸ್ಕ ಬಳಸುವುದು.
ಸಾಮಾಜಿಕ ಅಂತರ ಕಾಯ್ದುಕೊಳ್ಳುವದು.
ಸ್ಯಾನಿಟೈಜರ್ ಬಳಸುವದು. ಕೈಗಳ ಶುಚಿತ್ವ .ಮುಖ್ಯ ವಾಗಿ ಮನೆ ಯಿಂದ ಹೊರಗೆ ಬರದೇ ಲಾಕಡೌನ್ ನಿಯಮಗಳನ್ನು ಪಾಲಿಸುವುದು ಅವಶ್ಯವಾಗಿದೆ  ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಐ. ಆರ್. ಗಂಜಿ ಹೇಳಿದರು.
ಜೂನ್ ತಿಂಗಳದ ಮಲೇರಿಯಾ ಮಾಸಾಚರಣೆ ಅಂಗವಾಗಿ ಎಂ.ಟಿ.ಕುಂಬಾರ ಇವರು ಮಾತನಾಡಿ
ಮಲೇರಿಯಾ ಇದೊಂದು ಸಾಂಕ್ರಾಮಿಕ ರೋಗವಾಗಿದ್ದು. ಹೆಣ್ಣು ಅನಾಫಿಲಿಸ್ ಸೊಳ್ಳೆ ಯಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುವದು.
ಇದರ ಲಕ್ಷಣಗಳಾದ ಚಳಿ ಜ್ವರ, ಬೆವರು, ತಲೆನೋವು, ಮೈಕೈನೋವು ಕಂಡು ಬಂದಲ್ಲಿ.
ರಕ್ತ ಪರಿಕ್ಷೆ ಮಾಡಿಸುವದು ನಂತರ
ಮಲೇರಿಯಾ ರೋಗ ದ ವರ್ಗೀಕರಣದ ಆಧಾರದ ಮೇಲೆ ಚಿಕಿತ್ಸೆ ನೀಡಲಾಗುವದು.
ಇದರ ನಿಯಂತ್ರಣಕ್ಕಾಗಿ ಸೊಳ್ಳೆಗಳಿಂದ ನೀರಿನ ಸಂಪರ್ಕ ವಾದರೇ ಸೊಳ್ಳೆಯ ಸಂತಾನೋತ್ಪತ್ತಿ ಯಾಗುವದು.
ಸೊಳ್ಳೆ ಯಿಂದ ಮನುಷ್ಯನ ಸಂಪರ್ಕವಾದರೇ ಸೊಳ್ಳೆಗಳಿಂದ ಹರಡುವ ರೋಗ ಗಳಾದ ಮಲೇರಿಯಾ, ಡೆಂಗೀಜ್ವರ, ಚಿಕುನ್ ಗುನ್ಯಾ, ಮೆದುಳುಜ್ವರ, ಆನೆಕಾಲು ರೋಗಗಳು ಬರುವ ಸಾಧ್ಯತೆ ಇರುವುದು ಆದ್ದರಿಂದ ಇದರ ನಿಯಂತ್ರಣಕ್ಕಾಗಿ ವೈಯಕ್ತಿಕ ಆರೋಗ್ಯ ಪರಿಸರ ನೈರ್ಮಲ್ಯದ ಶುಚಿತ್ವದ ಅವಶ್ಯಕತೆ ಇದೆ ಎಂದು ಹೇಳಿದರು ರೇಖಾ ಗಿರಿಯವ್ವಗೋಳ.
ಈ  ಸಂದರ್ಭದಲ್ಲಿ ಅಧ್ಯಕ್ಷತೆಯನ್ನು ಅನ್ವರಬಿ ಚಾಂದವಾಲೆ ಇವರು ವಹಿಸಿದ್ದರು.
ಶ್ರೀಮತಿ ಎಸ್. ಬಿ. ಬೆಂಡಿಗೇರಿ, ಮೋಯಿನು ಗೋರೆಖಾನ, ಪ್ರಕಾಶ ಮಾಂಗ್, ನಿರ್ಮಲಾ ಹಾರೂಗೊಪ್ಪ, ಆಶಾ-ಅಂಗನವಾಡಿ ಕಾರ್ಯಕರ್ತೆಯರು  ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆ ಮಾಡಿ ಶೋಭಾ ದಿಡಗನ್ನವರ ಸ್ವಾಗತಿಸಿ. ಬಸಮ್ಮ ಮೂಲಿಮನಿ ವಂದಿಸಿದರು.
(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)

Leave a Reply