Belagavi

ಪರಿಸರದಿಂದ ಉತ್ತಮ ಆರೋಗ್ಯ ಹೊಂದಲು ಸಾಧ್ಯ ಗಿರಿಜನ್ನವರ


ಬೈಲಹೊಂಗಲ ೮- ನಮ್ಮ ಸುತ್ತಲು ಉತ್ತಮ ಪರಿಸರ ವಿದ್ದರೆ ಎಲ್ಲರೂ ಒಳ್ಳೆಯ ಆರೋಗ್ಯ ಹೊಂದಲು ಸಾಧ್ಯವೆಂದು ನ್ಯಾಯವಾದಿ ಗಂಗಾಧರ್ ಗಿರಿಜನ್ನವರ್ ಹೇಳಿದರು.
ಪಟ್ಟಣದ ಹೊಸೂರು ರಸ್ತೆಯಲ್ಲಿರುವ ಬಗಳಾಂಬಾ ದೇವಿ ದೇವಸ್ಥಾನದ ಆವರಣದಲ್ಲಿರುವ ಪಂಚವಟಿಯಲ್ಲಿ ವಿಶ್ವ ಪರಿಸರ ದಿನಾಚರಣೆ £ಮಿತ್ಯ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರತಿಯೊಬ್ಬರು ತಮ್ಮ ಮನೆಯ ಮುಂದೆ ಹಾಗೂ ಹಿತ್ತಲಿನಲ್ಲಿ ಗಿಡಮರಗಳನ್ನು ಬೆಳೆಸಿದರೆ ಅದರಿಂದ ಮಾನವ£ಗೆ ಬೇಕಾದ ಆಕ್ಸಿಜನ್ ದೊರೆತು ಉತ್ತಮ ಆರೋಗ್ಯ ಹೊಂದಲು ಸಾಧ್ಯ ಆದಕಾರಣ ಎಲ್ಲರೂ ತಮ್ಮ ಮನೆಯ ಸುತ್ತ ಒಳ್ಳೆಯ ಪರಿಸರ ಹೊಂದಲು ಗಿಡಮರಗಳನ್ನು ನೆಡಬೇಕೆಂದು ನುಡಿದರು.
£ವೃತ್ತ ಉಪ ತಹಸಿಲ್ದಾರ ಡಿ ಎ ಕುಲಕರ್ಣಿ ಮಾತನಾಡಿ ಎಲ್ಲರೂ ಒಳ್ಳೆಯ ಆರೋಗ್ಯ ಹೊಂದಬೇಕಾದರೆ ಗಿಡಮರಗಳನ್ನು ಬೆಳೆಸಬೇಕು ಎಂದು ನುಡಿದು ಬಗಳಾಂಬಾ ದೇವಿ ದೇವಸ್ಥಾನವನ್ನು ಎಲ್ಲರೂ ಸೇರಿ ಅಭಿವೃದ್ಧಿಪಡಿಸಲು ಕೈಜೋಡಿಸಬೇಕೆಂದು ನುಡಿದರು.
ಸಾ£ಧ್ಯ ವಹಿಸಿದ್ದ ದೇವಸ್ಥಾನದ ಧರ್ಮಾಧಿಕಾರಿ ವೇ ಮೂ, ವೀರೇಶ ಸ್ವಾಮಿಗಳು ಮಾತನಾಡಿ ಮಹಾಮಾರಿ ಕೊರೊನಾ ರೋಗವನ್ನು ದೂರ ಮಾಡಿ ಎಲ್ಲರಿಗೂ ಉತ್ತಮ ಆರೋಗ್ಯವನ್ನು ದೇವಿ ಕರುಣಿಸಲಿ ಹಾಗೂ ಎಲ್ಲರೂ ತಮ್ಮ ಮನೆಗಳಲ್ಲಿ ಗಿಡಗಳನ್ನು ಬೆಳೆಸಿ ಉತ್ತಮ ಪರಿಸರವನ್ನು ಹೊಂದಬೇಕೆAದು ನುಡಿದರು.
ಧನ್ಯವಾದ ಎಸ ಫ್ ಹರಕುಣಿ, ಬಿ ಬಿ ಸಂಗಣ್ಣವರ, ಮಹಾಂತೇಶ ಅಕ್ಕಿ,ಮಹಾಂತೇಶ ಹರಕುಣಿ , ಮಲ್ಲಿಕಾರ್ಜುನ ಬಡ್ಡಿಮ£, ಜವಾಹರ ಪತ್ತಾರ, ಶಿವಾಜಿ ಕೋಳೇಕರ, ಶಾಂತಮ್ಮ ಕೊಪ್ಪದ ಇದ್ದರು.


Leave a Reply