Koppal

ಪತ್ರಕರ್ತರಿಗೆ ಆಹಾರ ಕಿಟ್ ವಿತರಿಸಿ ಮಾನವೀಯತೆ ಮೆರೆದ ನಿತಿನ್ ಡೆವಲಪರ್ಸ್ ಮಾಲೀಕರು ಹಾಗೂ ಆಡಳಿತ ವರ್ಗ


ಕುಷ್ಟಗಿ: ಕೊರೋನಾ ಸಂಕಷ್ಟದ ಜನರಿಗೆ ಸರ್ಕಾರವು ಹತ್ತು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಪತ್ರಕರ್ತರಿಗೆ ಮಾತ್ರ ಇದುವರೆಗೆ ಕಾಗದದಲ್ಲಿ ಕೊರೋನಾ ವಾರಿಯರ್ಸ್ ಅಂತ ತೋರಿಸಿದ್ದಾರೆ, ವಿನಹ ಯಾವುದೇ ರೀತಿ ಸಹಾಯ ಸೌಕರ್ಯಗಳು ಸಿಕ್ಕಿಲ್ಲ.

ಇಂತಹ ಸಮಯದಲ್ಲಿ ಶರಣ ವೀರೇಶ್ವರ ಸಹಕಾರಿ ಬ್ಯಾಂಕ್ ನಿಯಮಿತ ಲಿಂಗಸುಗೂರು ಅಧ್ಯಕ್ಷರಾದ ಚೆನ್ನ ಕುಮಾರ್. ವಿ.ಸಿ ಮತ್ತು ಶ್ರೀ ಶರಣ ವೀರೇಶ್ವರ ಸಹಕಾರ ಬ್ಯಾಂಕ್ ನಾಲತವಾಡ ಅಧ್ಯಕ್ಷರಾದ ಮಹಾಂತಗೌಡ ಪಾಟೀಲ್ ಇವರಿಂದ ಕುಷ್ಟಗಿ ಕುಷ್ಟಗಿ ಪಟ್ಟಣದ ಪತ್ರಿಕಾ ಹಾಗೂ ಟಿವಿ ಮಾಧ್ಯಮದವರು ಮಿತ್ರರಿಗೆ ಆಹಾರ ಕಿಟ್ಟ ವಿತರಣೆ ಮಾಡಿದರು.
ನಂತರ ಮಾಧ್ಯಮದವರೊಂದಿಗೆ ಚನ್ನಕುಮಾರ ವಿ. ಸಿ. ಮಾತನಾಡಿ, ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಶ್ರೀಗಳ ದಾಸೋಹ ಪ್ರೇರಣೆಗೆ ಮನಸೋತು ಮತ್ತು ಲಾಕ್ ಡೌನ್ ಸಂದರ್ಭದಲ್ಲಿ ಬೇರೆ ಬೇರೆ ಊರುಗಳಲ್ಲಿ ಊಟ ಕೊಡುವ ಕಾರ್ಯಕ್ರಮಗಳನ್ನು ಪತ್ರಿಕಾ ಹಾಗೂ ಮಾಧ್ಯಮ ಮಿತ್ರರು ತಮ್ಮ ತಮ್ಮ ಪತ್ರಿಕೆಯಲ್ಲಿ ಮತ್ತು ಮಾಧ್ಯಮದಲ್ಲಿ ಪ್ರಕಟವಾಗಿರುವುದನ್ನು ನಾನು ಗಮನಿಸಿ ನಂತರ ಈ ಕಾರ್ಯವನ್ನು ನಮ್ಮ ತಾಯಿಯ ಆಸೆಯಂತೆ ಈ ಕಾರ್ಯವನ್ನು ಮಾಡುತ್ತಿದ್ದೇನೆ. ಈಗಾಗಲೇ ನಾನು ಸುಮಾರು 25 ದಿನಗಳ ಕಾಲ ಪ್ರತಿನಿತ್ಯ ಸಾವಿರ ಜನರಿಗೆ ಊಟ ಕೊಡುವ ವ್ಯವಸ್ಥೆಯನ್ನು ಲಿಂಗಸುಗೂರಿನಲ್ಲಿ ಪ್ರತಿನಿತ್ಯ ಮಾಡುತ್ತಿದ್ದೇನೆ. ಲಿಂಗಸುಗೂರಿನಲ್ಲಿ ಸರಕಾರಿ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆ ಸೇರಿ ಒಟ್ಟು 22ಕ್ಕೂ ಹೆಚ್ಚು ಆಸ್ಪತ್ರೆಗಳಿವೆ ಎಲ್ಲಾ ಆಸ್ಪತ್ರೆಗಳಿಗೆ ಬರುವ ಜನರಿಗೆ ಊಟ ಕೊಡುವ ವ್ಯವಸ್ಥೆಯನ್ನು ನಾವು ನಮ್ಮ ಬಳಗ ಮಾಡುತ್ತಿದ್ದೇವೆ.

ಕೊರೋನಾ ಸಂಕಷ್ಟದಲ್ಲಿ ಸಹಾಯ ಮಾಡುವುದರಿಂದ ನಮಗೆ ಮತ್ತು ನಮ್ಮ ಕುಟುಂಬಕ್ಕೆ ಒಳ್ಳೆಯದಾಗಲಿ ನಂತರ ಯಾವುದೇ ರೀತಿ ಜನರು ಊಟವಿಲ್ಲದೆ ಇರಬಾರದು ಎನ್ನುವ ದೃಷ್ಟಿಯಿಂದ ನನ್ನ ಕೈಲಾದ ಸಹಾಯ ಮಾಡುತ್ತಿದ್ದೇನೆ ಎಂದು ಹೇಳಿದರು.

ನಂತರ ಕನ್ನಡ ಪ್ರಭ ವರದಿಗಾರರಾದ ಅನಿಲ್ ಅಲ್ಮೆಲ್ ರವರು ಮಾತನಾಡಿ ಪತ್ರಿಕಾ ಹಾಗೂ ಮಾಧ್ಯಮದಲ್ಲಿ ಕೆಲಸ ನಿರ್ವಹಿಸುತ್ತಿರುವ ವರದಿಗಾರರು ಆರ್ಥಿಕ ಸಂಕಷ್ಟದಲ್ಲಿದೆ ಇರುತ್ತಾರೆ ಇಂಥ ಸಮಯದಲ್ಲಿ ಇಂಥವರು ಮುಂದೆ ಬಂದು ನಮಗೆ ಆಹಾರ ಕಿಟ್ಟು ನೀಡಿದ್ದು ಅತ್ಯಂತ ಸಂತೋಷಕರ ವಿಷಯ ಹಾಗಾಗಿ ನಾನು ನಮ್ಮ ಪತ್ರಕರ್ತರ ಪರವಾಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಶರಣ ವೀರೇಶ್ವರ ಸಹಕಾರಿ ಬ್ಯಾಂಕ್ ನಿಯಮಿತ ಲಿಂಗಸೂರ್ ಅಧ್ಯಕ್ಷರಾದ ಚೆನ್ನ ಕುಮಾರ್ ವಿ.ಸಿ. ಬಾಬುಗೌಡ. ಬ್ಯಾಂಕ್ ಸಿಬ್ಬಂದಿ ಹಾಗೂ ಕುಷ್ಟಗಿ ಪೊಲೀಸ್ ಠಾಣೆಯ ಸಿಪಿಐ ನಿಂಗಪ್ಪ ರುದ್ರಪ್ಪ ರುದ್ರಪ್ಪ ಗೋಳ್. ಪಿಎಸ್ಐ ತಿಮ್ಮಪ್ಪ ಹಾಗೂ ಪತ್ರಕರ್ತರಾದ ರಾಮಣ್ಣ ಬಂಡಿಹಾಳ, ಗಿರೀಶ್ ದಿವಾಣಜಿ,ಮಂಜುನಾಥ ಮಹಾಲಿಂಗಪೂರ,ಶ್ರೀಕಾಂತ ಗಣಾಚಾರಿ, ಅನಿಲ್ ಆಲ್ಮೆಲ್. ಅನಿಲ್ ಕಮ್ಮಾರ್, ಪವಾಡೆಪ್ಪ ಚೌಡಕಿ, ರಮೇಶ್ ಛಲವಾದಿ,ಶೇಖರ ಕನಸಾವಿ,ರಾಘವೇಂದ್ರ,ಸಂಗಮೇಶ, ಶರಣಪ್ಪ ಗುಮಗೇರಾ, ಸೇರಿದಂತೆ ಕುಷ್ಟಗಿ ಹಾಗೂ ದೋಟಿಹಾಳ ಪತ್ರಕರ್ತರು ಉಪಸ್ಥಿತರಿದ್ದರು.

ಆರ್ ಶರಣಪ್ಪ ಗುಮಗೇರಾ.


Leave a Reply