ಬೆಳಗಾವಿಯ ಸರ್ವಾಂಗೀಣ ಅಭಿವೃದ್ದಿಗಾಗಿ ಅನುದಾನ ನೀಡಲು ಸಚಿವರಿಗೆ ಶಾಸಕರಿಂದ ಮನವಿ

0

ಬೆಳಗಾವಿ ೦೮ :ಮದಿನಾಂಕ ೦೮ ರಂದು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆರವರು ಮತಕ್ಷೇತ್ರದ ಅಭಿವೃಧ್ದಿ ದೃಷ್ಠಿಯಿಂದ ಬೆಳಗಾವಿಯ ಪ್ರವಾಸದಲ್ಲಿರುವ ನಗರಾಬಿವೃಧ್ದಿ ಸಚಿವರಾದ ಬೈರತಿ ಬಸವರಾಜ ಅವರಿಗೆ ಕ್ಷೇತ್ರದಲ್ಲಿನ ಸ್ಮಾರ್ಟ ಸಿಟಿ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ರಸ್ತೆಗಳಿಗೆ ಹೊಂದಿಕೊAಡಿರುವ ಒಳ ರಸ್ತೆಗಳು ಹಾಳಾಗಿರುವುದರಿಂದ ಒಳ ರಸ್ತೆಗಳ ನಿರ್ಮಾಣ ಮಾಡುವುದಕ್ಕೆ ಮತ್ತು ನಗರದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯಿAದ ಡ್ರೆöÊನೇಜ ಪೈಪಲೈನಗಳು ಹಾಳಾಗುತ್ತಿದ್ದು, ಹೊಸ ಡ್ರೆöÊನೇಜ ಪೈಪಲೈನ ವ್ಯವಸ್ಥೆ ನಿರ್ಮಾಣ ಮಾಡಲು ಮತ್ತು ನಗರದಲ್ಲಿನ ಪಾಟೀಲ ಮಾಳಾ , ಕೊನವಾಳ ಗಲ್ಲಿ ಹಾಗೂ ಸಮರ್ಥ ನಗರದಲ್ಲಿ ನಾಲಾ ನಿರ್ಮಾಣಕ್ಕೆ ವಿಶೇಷ ಅನುದಾನ ನೀಡುವಂತೆ ಕ್ಷೇತ್ರದ ಅಭಿವೃದ್ದಿಯ ದೂರದೃಷ್ಠಿಯಿಂದ ಇಂದು ಮಾನ್ಯ ಸಚಿವರಿಗೆ ಮನವಿಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಸಚಿವರು ಶಾಸಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಕ್ರಮವಹಿಸಲಾಗುವುದು ಎಂದು ಭರವಸೆಯನ್ನು ನೀಡಿದ್ದಾರೆ ಎಂದು ತಿಳಿಸಿದರು.

- Advertisement -

- Advertisement -

Leave A Reply

Your email address will not be published.